ಕರ್ನಾಟಕ

karnataka

ETV Bharat / state

ನಿರ್ಧಾರ ತೆಗೆದುಕೊಳ್ಳುವ ಮುನ್ನ ಕಾಮನ್ ಸೆನ್ಸ್ ಬೇಕು: ಸರ್ಕಾರಕ್ಕೆ ಡಿಕೆಶಿ ಚಾಟಿ - CM Yediyurappa

ಯಾರ ಅಭಿಪ್ರಾಯವನ್ನೂ ಪಡೆಯದೆ ನೈಟ್ ಕರ್ಫ್ಯೂ ಮಾಡೋದು ಎಷ್ಟರ ಮಟ್ಟಿಗೆ ಸರಿ?, ಈ ಬಗ್ಗೆ ತಜ್ಞರ ಅಭಿಪ್ರಾಯ ಪಡೆದುಕೊಂಡಿದ್ರಾ?, ನಿರ್ಧಾರ ತೆಗೆದುಕೊಳ್ಳುವ ಮುನ್ನ ಕಾಮನ್ ಸೆನ್ಸ್ ಬೇಕು ಎಂದು ಡಿಕೆಶಿ ಸರ್ಕಾರಕ್ಕೆ ಕುಟುಕಿದ್ದಾರೆ.

DK Shivakumar
ಡಿ.ಕೆ ಶಿವಕುಮಾರ್

By

Published : Dec 25, 2020, 1:27 PM IST

ಬೆಂಗಳೂರು: ನೈಟ್ ಕರ್ಫ್ಯೂ ವಾಪಸ್ ಪಡೆದಿದ್ದು ಯಡಿಯೂರಪ್ಪ ನಿರ್ಧಾರವಲ್ಲ, ಸುಧಾಕರ್ ನಿರ್ಧಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಬೆಂಗಳೂರಿನ ಸದಾಶಿವನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಸುಧಾಕರ್ ಬಗ್ಗೆ ಚಿಂತೆ ಇಲ್ಲ, ಯಡಿಯೂರಪ್ಪ ಯಾಕೆ ಇಷ್ಟು ವೀಕ್ ಆಗಿದ್ದಾರೆ ಅಂತ ಚಿಂತೆ ನನಗೆ. ಅವನೊಬ್ಬ ಹೇಳಿದ ಅಂತ ನೈಟ್ ಕರ್ಫ್ಯೂಗೆ ಸಹಿ ಹಾಕಿದ್ರು ಯಡಿಯೂರಪ್ಪ. ಬರೀ ನಾವು ಹೇಳಿದ್ದಕ್ಕೆ ಮಾತ್ರವಲ್ಲ, ಅವರ ಸಚಿವರೂ ಕೂಡ ಉಗಿದಿದ್ದಾರೆ. ಅದಕ್ಕೆ ನೈಟ್ ಕರ್ಫ್ಯೂ ವಾಪಸ್ ಪಡೆದುಕೊಂಡಿದ್ದಾರೆ ಎಂದಿದ್ದಾರೆ.

ಇಡೀ ಪ್ರಪಂಚವೇ ನೋಡ್ತಾ ಇರುವ ಸಿಟಿ ಇದು. 11 ಗಂಟೆ ಮೇಲೆ ಯಾರು ಓಡಾಡ್ತಾರೆ? ಯಾರ ಅಭಿಪ್ರಾಯವನ್ನೂ ಪಡೆಯದೆ ನೈಟ್ ಕರ್ಫ್ಯೂ ಮಾಡೋದು ಎಷ್ಟರ ಮಟ್ಟಿಗೆ ಸರಿ?, ಈ ಬಗ್ಗೆ ಯಾರಾದರೂ ದೊಡ್ಡ ತಜ್ಞರ ಅಭಿಪ್ರಾಯ ಪಡೆದುಕೊಂಡಿದ್ರಾ? ನಿರ್ಧಾರ ತೆಗೆದುಕೊಳ್ಳುವ ಮುನ್ನ ಬೇಸಿಕ್ ಕಾಮನ್ ಸೆನ್ಸ್ ಬೇಕು ಎಂದು ಹೇಳಿದ್ದಾರೆ.

ಓದಿ:ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗಣಿನಾಡು ಕಲಾವಿದರಿಗೆ ಸದವಕಾಶ

ABOUT THE AUTHOR

...view details