ಕರ್ನಾಟಕ

karnataka

ETV Bharat / state

ಗ್ರಾಪಂ ಚುನಾವಣೆಯಲ್ಲಿ ನಮ್ದೇ ಹವಾ ಅಂತಾರೆ ಡಿಕೆಶಿ.. ಕಾಂಗ್ರೆಸ್‌ ಶೇ.54ರಷ್ಟು ಮುನ್ನಡೆ ಸಾಧಿಸಿದೆಯಂತೆ.. - BS Yediyurappa

ಮುಂಬರುವ ದಿನಗಳಲ್ಲಿ ತಾಪಂ, ಜಿಪಂ, ಮುನ್ಸಿಪಾರ್ಟಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಬೇಕಿದೆ. ಇವೆಲ್ಲವೂ ಚಿಹ್ನೆಯ ಆಧಾರದ ಮೇಲೆ ಬರಲಿವೆ. ಇದಕ್ಕೆ ಸಿದ್ಧರಾಗಲು ನಾವು ಜಿಲ್ಲಾ ಹಾಗೂ ಬ್ಲಾಕ್ ಅಧ್ಯಕ್ಷರುಗಳಿಂದ ಮಾಹಿತಿ ತರಿಸಿಕೊಳ್ಳುತ್ತಿದ್ದೇವೆ. ಗ್ರಾಪಂ ಚುನಾವಣೆಯಲ್ಲಿ ನಾವು ಸಾಕಷ್ಟು ಮುನ್ನಡೆ ಹೊಂದಿದ್ದೇವೆ..

DK Shivakumar
ಡಿಕೆ ಶಿವಕುಮಾ

By

Published : Jan 8, 2021, 8:20 PM IST

ಬೆಂಗಳೂರು :ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ನಾವು ಶೇ.54ರಷ್ಟು ಮುನ್ನಡೆ ಸಾಧಿಸಿದ್ದೇವೆ. ಶೀಘ್ರವೇ ದಾಖಲೆ, ಅಂಕಿ-ಅಂಶ ಸಮೇತ ಮಾಹಿತಿ ನೀಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ನಗರ ವ್ಯಾಪ್ತಿಯ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರು ಹಾಗೂ ಮುಖಂಡರ ಜೊತೆಗಿನ ಸಂಕಲ್ಪ ಸಮಾವೇಶದ ಬಳಿಕ ಈ ಬಗ್ಗೆ ಮಾಹಿತಿ ನೀಡಿರುವ ಡಿಕೆಶಿ ಅವರು, ನಾವು ಕೇವಲ ಅಧಿಕಾರಕ್ಕೋಸ್ಕರ ಮಾತ್ರ ಕಾರ್ಯನಿರ್ವಹಿಸುತ್ತಿಲ್ಲ, ಜನರಿಗೋಸ್ಕರ ಹಾಗೂ ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

ಮುಂಬರುವ ದಿನಗಳಲ್ಲಿ ತಾಪಂ, ಜಿಪಂ, ಮುನ್ಸಿಪಾರ್ಟಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಬೇಕಿದೆ. ಇವೆಲ್ಲವೂ ಚಿಹ್ನೆಯ ಆಧಾರದ ಮೇಲೆ ಬರಲಿವೆ. ಇದಕ್ಕೆ ಸಿದ್ಧರಾಗಲು ನಾವು ಜಿಲ್ಲಾ ಹಾಗೂ ಬ್ಲಾಕ್ ಅಧ್ಯಕ್ಷರುಗಳಿಂದ ಮಾಹಿತಿ ತರಿಸಿಕೊಳ್ಳುತ್ತಿದ್ದೇವೆ ಎಂದ ಅವರು, ಗ್ರಾಪಂ ಚುನಾವಣೆಯಲ್ಲಿ ನಾವು ಸಾಕಷ್ಟು ಮುನ್ನಡೆ ಹೊಂದಿದ್ದೇವೆ. ಕಾಂಗ್ರೆಸ್ ಪಕ್ಷ ಶೇ.54ರಷ್ಟು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಉಳಿದ ಭಾಗದ ಮಾಹಿತಿಗಳು ಬಂದ ನಂತರ ಪರಿಪೂರ್ಣ ಮಾಹಿತಿ ಒದಗಿಸುತ್ತೇನೆ ಎಂದರು.

ಸಭೆ ಸೇರಿ ತಳಮಟ್ಟದ ಮುಖಂಡರ ಅಭಿಪ್ರಾಯ ಸಂಗ್ರಹಿಸುವ ಕಾರ್ಯ ಮಾಡುತ್ತಿದ್ದೇವೆ. ಸಂಜೆಯವರೆಗೂ ಸಭೆ ನಡೆಯಲಿದ್ದು, ಅಂತಿಮವಾಗಿ ಅವರಿಗೆ ನೀಡಬೇಕಾದ ಸಂದೇಶವನ್ನು ತಿಳಿಸುತ್ತೇವೆ. ನಮ್ಮ ಪ್ರಯತ್ನ ಕೇವಲ ಸ್ಥಳೀಯ ಸಂಸ್ಥೆಗಳ ಮಟ್ಟಕ್ಕೆ ಮಾತ್ರವಲ್ಲ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಕಿತ್ತೊಗೆಯುವ ಸಂಕಲ್ಪವನ್ನು ಮಾಡಿದ್ದೇವೆ ಎಂದರು.

ಸಿಎಂ ವಿರುದ್ಧ ಡಿಕೆಶಿ ಸವಾಲ್ :ಡಿನೋಟಿಫಿಕೇಶನ್ ವಿಚಾರದಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ಧ ಡಿಕೆಶಿ ಸವಾಲು ಹಾಕಿದರು. ಡಿನೋಟಿಫಿಕೇಷನ್ ವಿಚಾರದಲ್ಲಿ ಹೈಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಯಡಿಯೂರಪ್ಪ ನೈತಿಕ ಹೊಣೆ ಹೊರಬೇಕು. ದೆಹಲಿ ನಾಯಕರು ಅವರ ಬೆಂಬಲಕ್ಕೆ ನಿಂತಿದ್ದಾರೆ.

ಸಂಕಲ್ಪ ಸಮಾವೇಶದ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿದರು..

ನಮ್ಮ ವಿರುದ್ಧ ಆರೋಪ ಬಂದಾಗ ಬೇರೆ ರೀತಿ ನೋಡ್ತಾರೆ. ಚೆಕ್, ಆರ್‌ಟಿಜಿಎಸ್ ಎಲ್ಲಾ ರೀತಿಯ ಪ್ರಕರಣದ ವಿರುದ್ಧ ಹೋರಾಟ ಮಾಡ್ತೀವಿ. ಹೈಕೋರ್ಟ್ ನೀಡಿರೋ ತೀರ್ಪು ಒಂದು ದಾಖಲೆಯಾಗಿದೆ. ಇದಕ್ಕೆ ಬಿಎಸ್‌ವೈ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು.

ಯುವ ಕಾಂಗ್ರೆಸ್ ಚುನಾವಣೆ ಕುರಿತು ಮಾತನಾಡಿದ ಅವರು, ವಿದ್ಯಾರ್ಥಿ ಚುನಾವಣೆಗಳು ಈಗ ನಡೆಯುತ್ತಿಲ್ಲ, ನಾವೆಲ್ಲಾ ವಿದ್ಯಾರ್ಥಿ ನಾಯಕರಾಗಿ ಬೆಳೆದು ಬಂದವರು. ಇದೀಗ ಕಾಂಗ್ರೆಸ್‌ ರಾಷ್ಟ್ರೀಯ ರಾಹುಲ್ ಗಾಂಧಿ ಅವರ ಆಶಯದಂತೆ ಯುವ ಕಾಂಗ್ರೆಸ್ ಚುನಾವಣೆ ನಡೆಯುತ್ತಿದೆ. ನಾನು ಯಾರ ಪರವಾಗಿಯೂ ಕಾರ್ಯನಿರ್ವಹಿಸುತ್ತಿಲ್ಲ. ಎಲ್ಲರೂ ನನಗೆ ಸಮಾನರು ಎಂದರು.

ಜಿಲ್ಲಾ ಅಧ್ಯಕ್ಷರ ನೇಮಕ ವಿಚಾರ ಮಾತನಾಡಿ, ಎಲ್ಲವನ್ನೂ ಪರಿಶೀಲಿಸುತ್ತಿದ್ದೇವೆ. ಪಕ್ಷ ಕಟ್ಟುವವರಿಗೆ ಅವಕಾಶ ಇರುತ್ತೆ. ಒಂದು ತಿಂಗಳು ಸಮಯ ಕೊಡ್ತೇವೆ. ಎಲ್ಲವನ್ನೂ ಸರಿಮಾಡ್ತೀವೆ. ಕೆಲ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

ಪ್ರತಿಯೊಬ್ಬರ ಕಾರ್ಯನಿರ್ವಹಣೆಯನ್ನು ನಾವು ಗಮನಿಸುತ್ತಿದ್ದೇವೆ. ಸೂಕ್ಷ್ಮವಾಗಿ ಎಲ್ಲವನ್ನು ಗಮನಿಸಿ ಅಂತಿಮವಾಗಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಕೆಲಸ ಮಾಡದ ಪಕ್ಷದ ಜಿಲ್ಲಾಧ್ಯಕ್ಷರಿಗೆ ಡಿಕೆಶಿ ಎಚ್ಚರಿಕೆ ನೀಡಿದರು.

ಓದಿ...ಕೌಟುಂಬಿಕ ಕಲಹ: ತಾಯಿ - ಸಹೋದರಿ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಲೆ!

ABOUT THE AUTHOR

...view details