ಬೆಂಗಳೂರು: ಪ್ರಧಾನಿಯವರ ಕೊಡುಗೆ ಕೇವಲ ರಾಜ್ಯಕ್ಕೆ ಮಾಲಾರ್ಪಣೆ ಮಾಡೋದು ಬಿಟ್ಟರೆ ಈ ಸರ್ಕಾರಕ್ಕೆ ಯಾವ ಶಿಷ್ಟಾಚಾರವೂ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಕರ್ನಾಟಕ ರಾಜ್ಯದ ಇತಿಹಾಸ ಸೃಷ್ಟಿ ಮಾಡಿದವರು ಕೆಂಪೇಗೌಡರು, ಕೆಂಗಲ್ ಹನುಮಂತಯ್ಯ, ದೇವೇಗೌಡರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಂತ ಹೆಸರು ಇಟ್ಟಿದ್ದೇ ನಮ್ಮ ಪಕ್ಷ. 2000 ಎಕರೆಯನ್ನ ರೈತರಿಂದ ಖರೀದಿ ಮಾಡಿ ಕೆಐಎಎಲ್ನವರಿಗೆ ನಾವು ಕೊಟ್ಟಿದ್ವಿ.
ನಾವು ಪ್ರಧಾನಿಯವರಿಗೆ ಕೆಲವು ಪ್ರಶ್ನೆ ಕೇಳುತ್ತೇವೆ. ನಿಮ್ಮ ಡಬಲ್ ಎಂಜಿನ್ ಸರ್ಕಾರ, ಕಾರ್ಮಿಕರ ಆದಾಯ ಡಬಲ್ ಮಾಡ್ತಿನಿ ಅಂತ ಹೇಳಿತ್ತು. ಆದರೇ ಕೇವಲ ಮಾಲಾರ್ಪಣೆ ಮಾಡೋದ್ರಿಂದ ಅವರ ಹೊಟ್ಟೆ ತುಂಬಲ್ಲ. ಆಕ್ಸಿಜನ್ ಕೊರತೆಯಿಂದ ಸತ್ತವರಿಗೆ ಇನ್ನು ಹಣ ಕೊಟ್ಟಿಲ್ಲ. ಕೆಂಪೇಗೌಡ ಅವರ ಪುತ್ಥಳಿ ಮಾಡಿರುವುದು ಸಂತೋಷ. ಆದರೆ ಅದಕ್ಕೆ ಸರ್ಕಾರದ ದುಡ್ಡು ಯಾಕೆ ಬೇಕಿತ್ತು. ನಮ್ದು 26 ಪರ್ಸೆಂಟ್ ಇದೇ ಪ್ರಾಧಿಕಾರದವರಿಗೆ ಹೇಳಿದ್ದರೆ ಅವರೇ ಈ ಕಾರ್ಯ ಮಾಡುತ್ತಿದ್ದರು ಎಂದು ಡಿ ಕೆ ಶಿವಕುಮಾರ್ ಹೇಳಿದರು.
ನನಗೆ ಆಹ್ವಾನ ಬಂದಿಲ್ಲ:ಇನ್ನು ನನಗೆ ಕೆಂಪೇಗೌಡರ ಪುತ್ಥಳಿ ಲೋಕಾರ್ಪಣೆಗೆ ಯಾವುದೆ ಆಹ್ವಾನ ಕೊಟ್ಟಿಲ್ಲ, ಕಾಲ್ ಸಹ ಮಾಡಿಲ್ಲ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಫೌಂಡೇಶನ್ ಹಾಕಬೇಕಿದ್ದಾಗ ನನ್ನನ್ನ ಕರೆದಿದ್ದರು ನಾನು ಆವಾಗ ಹೋಗಿದ್ದೆ. ಏರ್ಪೋರ್ಟ್ಗೆ ಕೆಂಪೇಗೌಡರ ಹೆಸರಿಡಲು ನಾವು ಪ್ರಸ್ತಾವನೆ ಕಳಿಸಿದ್ದು ನಾವು. ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಏರ್ಪೋರ್ಟ್ಗಾಗಿ 2000 ಎಕರೆ ಜಾಗ ಕೊಟ್ಟಿದ್ದೆವು. ಸರ್ಕಾರ ಹೇಳಿದ್ದರೇ ಏರ್ಪೋರ್ಟ್ ನವರೇ ಈ ಕೆಲಸವನ್ನು ಮಾಡ್ತಾ ಇದ್ದರು. ಇವರು ಕಮಿಷನ್ ಹೊಡೆಯೋದಕ್ಕೇನೋ ಮಾಡಿದ್ದಾರೆ ಎಂದು ದೂರಿದರು.
ಬಿಜೆಪಿ ಅವರು ದೇವೇಗೌಡ ಅವರಿಗೆ ರಾತ್ರಿ 12 ಗಂಟೆಗೆ ಆಹ್ವಾನ ಕೊಟ್ಟಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಅವರಿಗೆ ಡಿಕೆ ಶಿವಕುಮಾರ್ ಆಗಲಿ, ದೇವೇಗೌಡರು ಆಗಲಿ, ಯಾರು ಬೇಡ. ಅವರಿಗೆ ಬೇಕಿರೋದು ಎಲೆಕ್ಷನ್. ಅವರಿಗೆ ಬೇಕಿರೋದು ವೋಟ್, ನಾವು ಅವರಿಂದ ಏನನ್ನೂ ಕೂಡ ನಿರೀಕ್ಷೆ ಮಾಡಬಾರದು.