ಬೆಂಗಳೂರು:ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯ ಮುಂದುವರೆದಿದ್ದು, ಆರ್ ಆರ್ ನಗರ ಉಪಚುನಾವಣೆ ಪ್ರಚಾರ ಕಾವೇರುತ್ತಿದೆ. ಇಂದು ಮಧ್ಯಾಹ್ನ ದಿಂದ ಪೀಣ್ಯ ಹಾಗೂ ಗೋರಗುಂಟೆಪಾಳ್ಯದ ಗಾರ್ಮೆಂಟ್ಸ್ ಫ್ಯಾಕ್ಟರಿಗಳಿಗೆ ಭೇಟಿ ನೀಡಿ ನೌಕರರ ಕುಂದು ಕೊರತೆಗಳನ್ನು ನಿವಾರಿಸುವುದಾಗಿ ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ, ಡಿಕೆ ಶಿವಕುಮಾರ್ ಮತ್ತು ಪಕ್ಷದ ಅಭ್ಯರ್ಥಿ ಕುಸುಮಾ ಆಶ್ವಾಸನೆ ನೀಡಿದರು.
ಆಣೆ ಪ್ರಮಾಣದ ರಾಜಕೀಯ ಶುರು, ಬಿಜೆಪಿಗೆ ಮುನಿರತ್ನ ಮುಳ್ಳು: ಡಿಕೆಶಿ ವಾಗ್ದಾಳಿ
ಆರ್ಆರ್ ನಗರ ಉಪಚುನಾವಣೆ ಪ್ರಚಾರದ ನಿಮಿತ್ತ, ಪೀಣ್ಯ ಹಾಗೂ ಗೋರಗುಂಟೆಪಾಳ್ಯದ ಗಾರ್ಮೆಂಟ್ಸ್ ಫ್ಯಾಕ್ಟರಿಗಳಿಗೆ ಭೇಟಿ ನೀಡಿ ನೌಕರರ ಕುಂದು ಕೊರತೆಗಳನ್ನು ನಿವಾರಿಸುವುದಾಗಿ ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ, ಡಿಕೆ ಶಿವಕುಮಾರ್ ಮತ್ತು ಪಕ್ಷದ ಅಭ್ಯರ್ಥಿ ಕುಸುಮಾ ಆಶ್ವಾಸನೆ ನೀಡಿದರು.
ಪೀಣ್ಯ ಮತ್ತು ಗೋರಗುಂಟೆಪಾಳ್ಯದ ಗಾರ್ಮೆಂಟ್ಸ್ ಕಾರ್ಖಾನೆ ಭೇಟಿ ನೀಡಿದ ಬಳಿಕ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಮುನಿರತ್ನ ಹೇಳಿಕೆಯಾದ "ದುಡ್ಡು ತಗೊಂಡು ಬಿಜೆಪಿ ಸೇರಿದ್ರೆ ಕಾಂಗ್ರೆಸ್ ನಾಯಕರು ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡ್ಲಿ" ಎಂಬ ಹೇಳಿಕೆಗೆ ಪ್ರತಿಕ್ರಿಯಿಸುತ್ತ, ಪಕ್ಷ ತಾಯಿ ಇದ್ದಂತೆ ಅಂತ ಹೇಳಿದ್ರೆ ಅದು ಸುಳ್ಳಾ . ಪಕ್ಷಕ್ಕೆ ದ್ರೋಹ ಮಾಡಿಲ್ವ, ನವೆಂಬರ್ ಮೂರರ ಬಳಿಕ ಆಣೆ ಪ್ರಮಾಣದ ಬಗ್ಗೆ ಮಾತನಾಡ್ತೀನಿ ಎಂದರು.
ಬಿಜೆಪಿಗೆ ಮುನಿರತ್ನ ಮುಳ್ಳು, ಮುಂದಿನ ದಿನಗಳಲ್ಲಿ ಬಿಜೆಪಿ ಅವರು ಅನುಭವಿಸಬೇಕಾಗುತ್ತೆ. ನಮ್ಮಲ್ಲಿಯೇ ಇದ್ದು ಹೋದವರು ಇದು ನನಗೆ ಗೊತ್ತಿಲ್ಲವೇ. ಬಿಜೆಪಿ ಕಾರ್ಯಕರ್ತರ ಮೇಲೆ ಹಾಕಿದ್ದ ಕೇಸ್ ವಾಪಸ್ ತೆಗೆಸಬಹುದಿತ್ತು. ಒಂದು ವರ್ಷದಿಂದ ಈ ಕೆಲಸ ಯಾಕೆ ಮಾಡಲಿಲ್ಲ. ಯಾವತ್ತಿದ್ದರೂ ಮುನಿರತ್ನ ಬಿಜೆಪಿಗೆ ಮುಳ್ಳು ಎಂದರು.