ಕರ್ನಾಟಕ

karnataka

ETV Bharat / state

ಕೋವಿಡ್ ಮೂರನೇ ಅಲೆ ತಡೆಯಿರಿ, ನಮ್ಮ ಸಹಕಾರ ಇರಲಿದೆ: ಡಿಕೆಶಿ

ಜೀವ ಉಳಿಯಬೇಕಾದರೆ ವ್ಯಾಕ್ಸಿನೇಶನ್​​ ಆಗಬೇಕು. ಮೂರನೇ ಅಲೆ ತಡೆಯುವುದು ನಮ್ಮ ಆದ್ಯತೆ. ನಾವೆಲ್ಲರೂ ನಿಮ್ಮೊಂದಿಗೆ ಕೈ ಜೋಡಿಸುತ್ತೇವೆ. ಜನರ ಜೀವ ಉಳಿಸುವುದು ಮುಖ್ಯ ಎಂದು ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

dk shivakumar talk about covid 3rd wave
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ

By

Published : Jun 19, 2021, 2:45 PM IST

Updated : Jun 19, 2021, 3:12 PM IST

ಬೆಂಗಳೂರು:ಕೋವಿಡ್ ಮೂರನೇ ಅಲೆ ಪ್ರವೇಶಕ್ಕೆ ಸರ್ಕಾರ ಅವಕಾಶ ಕೊಡಬಾರದು. ನಾವೆಲ್ಲರೂ ನಿಮ್ಮೊಂದಿಗೆ ಕೈ ಜೋಡಿಸುತ್ತೇವೆ. ಜನರ ಜೀವ ಉಳಿಸಲು ವ್ಯಾಕ್ಸಿನೇಷನ್​ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ಕಾರಕ್ಕೆ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜೀವ ಉಳಿಯಬೇಕಾದರೆ ವ್ಯಾಕ್ಸಿನೇಶನ್​​ ಆಗಬೇಕು. ಮೂರನೇ ಅಲೆ ತಡೆಯುವುದು ನಮ್ಮ ಆದ್ಯತೆ. ಮೂರನೇ ಅಲೆಯ ಭೀತಿ ಎದುರಾಗಿದೆ. ಮೊದಲ ಅಲೆ, ಎರಡನೇ ಅಲೆಯಲ್ಲಿ ಏನಾಯ್ತು? ದೇಶದ ಆರ್ಥಿಕ ವ್ಯವಸ್ಥೆಯೇ ಬುಡಮೇಲಾಯ್ತು. ಮಕ್ಕಳ ವಿದ್ಯಾಭ್ಯಾಸದ ಮೇಲೆ ಹೊಡೆತಬಿತ್ತು. ತಜ್ಞರು ಮೂರನೇ ಅಲೆಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಕನಿಷ್ಠ ಶೇ.80ರಷ್ಟು ವ್ಯಾಕ್ಸಿನೇಶನ್​​ ಮಾಡಬೇಕಲ್ಲ. ವ್ಯಾಕ್ಸಿನೇಶನ್​​ ಆಗದಿದ್ದರೆ ಕೋವಿಡ್​ ನಿಯಂತ್ರಣ ಅಸಾಧ್ಯ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಇಂದು ರಾಹುಲ್‌ ಗಾಂಧಿ ಜನ್ಮದಿನ. ದೇಶದ ಭವಿಷ್ಯದ ನಾಯಕರು ಅವರು. ಪಕ್ಷ ಯಾವಾಗಲೂ ಜನರ ಕಷ್ಟಕ್ಕೆ ಸ್ಪಂದಿಸುತ್ತದೆ. ಪಕ್ಷ ಜನರ ಜೊತೆಯಲ್ಲೇ ಸಾಗುತ್ತಿದೆ. ನಾವು ರಾಹುಲ್ ಮಾರ್ಗದರ್ಶನದಂತೆ ನಡೆಯುತ್ತಿದ್ದೇವೆ. ಎಲ್ಲರಿಗೂ ಲಸಿಕೆ ಕೊಡಿ ಎಂದು ರಾಹುಲ್ ಗಾಂಧಿ ಮೊದಲೇ ಹೇಳಿದ್ದರು. ಆದರೆ ಅವರ ಹೇಳಿಕೆ ಹಾಸ್ಯಾಸ್ಪದವಾಗಿ ತೆಗೆದುಕೊಂಡ್ರು. ರಾಹುಲ್ ಗಾಂಧಿ ವಿಚಾರಗಳು ಈಗ ಅರ್ಥವಾಗುತ್ತಿವೆ. ಲಸಿಕೆ ಕೊಟ್ಟಿದ್ದರೆ ಕೋವಿಡ್ ತಡೆಯಬಹುದಿತ್ತು ಎಂದು ಡಿಕೆಶಿ ಹೇಳಿದ್ರು.

17 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ನೀಡಬೇಕು. ಮಕ್ಕಳಿಗೂ ಲಸಿಕೆ ನೀಡುವುದಕ್ಕೆ ಒತ್ತಾಯಿಸಬೇಕು. ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ಈ ಕುರಿತು ವಿಶೇಷ ಅಭಿಯಾನ ಆರಂಭಿಸುತ್ತೇವೆ. ಎರಡು ನಿಮಿಷದ ವಿಡಿಯೋವನ್ನು ನಮ್ಮ ವ್ಯಾಕ್ಸಿನೇಟ್ ಕರ್ನಾಟಕ ಫ್ಲಾಟ್ ಫಾರ್ಮ್​​ಗೆ ಕಳುಹಿಸಿ. 100 ಉತ್ತಮ ವಿಡಿಯೋಗಳಿಗೆ ಬಹುಮಾನ ನೀಡ್ತೇವೆ. ನೂರು ಮಂದಿ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡುತ್ತೇವೆ. ಪಕ್ಷದ ಸೋಶಿಯಲ್ ಮೀಡಿಯಾದಲ್ಲಿ ನಾವು ಪ್ರಚಾರಕ್ಕೆ ತರುತ್ತೇವೆ ಎಂದು ತಿಳಿಸಿದರು.

ಬಿಜೆಪಿ ಯುದ್ಧಕಾಂಡ ಜನಸಾಮಾನ್ಯರ ಕರ್ಮಕಾಂಡ:

ರಾಮನ ಪಾರ್ಟಿಯಲ್ಲಿ ರಾಮಾಯಣ ನಡೆಯುತ್ತಿದೆ, ಮಹಾಭಾರತವೂ ನಡೆಯುತ್ತಿದೆ. ಬಿಜೆಪಿ ಯುದ್ಧಕಾಂಡ ಜನಸಾಮಾನ್ಯರ ಕರ್ಮಕಾಂಡ ಆಗ್ತಿದೆ. ರಾಜ್ಯ ಹೆಲ್ತ್ ಟೂರಿಸಂಗೆ ಪ್ರಸಿದ್ಧ. ಆದರೆ ಈಗ ಇಲ್ಲಿ ಹೆಲಿ ಟೂರಿಸಂ ಪ್ರಾರಂಭವಾಗಿದೆ ಎಂದು ಬಿಜೆಪಿ ಶಾಸಕರ ದೆಹಲಿ ಭೇಟಿ ಬಗ್ಗೆ ಡಿಕೆಶಿ ವ್ಯಂಗ್ಯವಾಡಿದರು.

ಕೋವಿಡ್​ನಿಂದ ಮೃತಪಟ್ಟವರಿಗೆ ಸರ್ಕಾರ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಹಾಗಾಗಿ ಕೋವಿಡ್​ನಿಂದ ಸತ್ತವರ ಆಡಿಟ್ ಆಗಬೇಕು. ಮೃತಪಟ್ಟವರೆಲ್ಲರಿಗೂ ಪರಿಹಾರ ಸಿಗಬೇಕು. ಕೆಲವರು ಕೋವಿಡ್​ನಿಂದ ಮನೆಯಲ್ಲೇ ಸತ್ತಿದ್ದಾರೆ. ಮೃತರ ಕುಟುಂಬದವರು ಒಂದು ಅರ್ಜಿ ಸಲ್ಲಿಸಬೇಕು. ಇದನ್ನ ನಮ್ಮ ಕಾರ್ಯಕರ್ತರು ಮಾಡಲಿದ್ದಾರೆ. ಡೆತ್ ಆಡಿಟ್ ಮಾಡೋಕೆ ಹಿಂದೇಟಾಕ್ತಿದ್ದಾರೆ. ಸತ್ತಿದ್ದನ್ನು ಮುಚ್ಚಿಡಲು ಸಾಧ್ಯವಿಲ್ಲ. ಅವರು ಮುಚ್ಚಿಟ್ಟಿರೋದನ್ನು ನಾವು ಬಿಚ್ಚಿಡ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.

ವಿಧಾನ ಪರಿಷತ್​ ಸದಸ್ಯ ಎಚ್. ವಿಶ್ವನಾಥ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, ಯಾವ್ಯಾವ ಕೋಡ್​​​ಗಳಲ್ಲಿ ಬಿಲ್ ಪಾಸ್ ಆಗ್ತಿದೆ. ಯಾವ್ಯಾವ ಎಂಜಿಜಿಯರ್ ಏನ್ಮಾಡ್ತಿದ್ದಾರೆಂಬುದು ಗೊತ್ತಿದೆ. 10 ಕೋಟಿಗೂ ಒಂದೊಂದು ಟೆಂಡರ್ ಆಗ್ತಿದೆ. ಪೋರ್ಟ್ ಪೊಲಿಯೋ ಸಿಎಂ ಬಳಿಯಿದೆ. ವಿಶ್ವನಾಥ್ ಅವರು ಮಾಡಿರುವ ಆರೋಪವಿದು. ಮುಖ್ಯಮಂತ್ರಿಗಳು ಇದರ ಬಗ್ಗೆ ಉತ್ತರ ಕೊಡಬೇಕಿತ್ತು. ಯಾರೋ ಎಂಡಿ ಕೈಯಲ್ಲಿ ಉತ್ತರ ಕೊಡಿಸಿದ್ದಾರೆ. ಇದನ್ನ ತನಿಖೆಗೊಳಪಡಿಸಬೇಕು. ಜಂಟಿ ಸದನ ಸಮಿತಿ ಮೂಲಕ ತನಿಖೆ ಮಾಡಿ. ಎಲ್ಲ ಪಕ್ಷಗಳ ನಾಯಕರ ವರ್ಚುವಲ್ ಮೀಟಿಂಗ್ ಮಾಡಿ. ಇದಕ್ಕೆ ಎಷ್ಟು ಪರ್ಸೆಂಟ್ ಕಮಿಷನ್ ತೆಗೆದುಕೊಂಡಿದ್ದಾರೆ, ಎಲ್ಲವೂ ತನಿಖೆಯಾಗಬೇಕಲ್ಲ ಎಂದಿದ್ದಾರೆ.

ಇದನ್ನೂ ಓದಿ:2 ಸಾವಿರ ಕೋಟಿ ರೂ. ಕಿಕ್ ಬ್ಯಾಕ್‌ ಆರೋಪ: ತನಿಖೆಗೆ ಆಗ್ರಹಿಸಿದ ಹೆಚ್​ಡಿಕೆ

ಶಾಸಕ ಅರವಿಂದ್​ ಬೆಲ್ಲದ್ ಟೆಲಿಫೋನ್ ಟ್ಯಾಪ್ ವಿಚಾರವಾಗಿ ಮಾತನಾಡಿದ ಡಿಕೆಶಿ, ಪಾಪ ಕುಮಾರಸ್ವಾಮಿ ಟೈಮಲ್ಲಿ ಸಿಐಡಿಗೆ ಕೊಟ್ಟಿದ್ದರು. ಈಗ ಪೊಲೀಸರ ಕೈಯಲ್ಲಿ ಮಾಡಿಸ್ತಿದ್ದಾರೆ. ಆ ಕಮಿಷನರ್ ಮೇಲೂ ನಂಬಿಕೆ ಬರುತ್ತಿಲ್ಲ. ನನ್ನ ಫೋನ್ ಟ್ಯಾಪ್ ಆಗ್ತಿದೆಯೋ ಗೊತ್ತಿಲ್ಲ. ಎರಡು ನಿಮಿಷ ಫೋನ್ ವರ್ಕೇ ಆಗಲ್ಲ. ನನ್ನ ಹಿಂದೆ ಎಷ್ಟು ಏಜೆನ್ಸಿ ಬಿಟ್ಟಿದ್ದಾರೋ ಗೊತ್ತಿಲ್ಲ. ಸರ್ಕಾರ ಜಂಟಿ ಕಲಾಪ ಕರೆಯಬೇಕು. ಭ್ರಷ್ಟಾಚಾರದ ಆರೋಪದ ಬಗ್ಗೆ ಚರ್ಚೆಗೆ ಅವಕಾಶಕೊಡಬೇಕು. ನಿಮ್ಮ ಶಾಸಕರೇ ಇದನ್ನು ಎತ್ತಿಹಿಡಿದಿದ್ದಾರೆ. ಹಾಗಾಗಿ ಇದನ್ನ ಗಂಭೀರವಾಗಿ ಚರ್ಚೆ ಮಾಡಬೇಕು ಎಂದು ಡಿಕೆಶಿ ಒತ್ತಾಯಿಸಿದರು.

Last Updated : Jun 19, 2021, 3:12 PM IST

ABOUT THE AUTHOR

...view details