ಕರ್ನಾಟಕ

karnataka

ETV Bharat / state

ಯಡಿಯೂರಪ್ಪ ಈಸ್ ನೋ ಮೋರ್ ಎ ಲೀಡರ್.. ಡಿ ಕೆ ಶಿವಕುಮಾರ್​ - ಬೆಂಗಳೂರಿನ ಸದಾಶಿವನಗರ ನಿವಾಸ

ನನಗೆ ಯಾರ ಬೆಂಬಲವೂ ಬೇಡ. ಕೆಪಿಸಿಸಿ ಅಧ್ಯಕ್ಷ ಅಂತಾ ನನ್ನ ಹೆಸರು ಹೇಳಬೇಡಿ. ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ಕೆಲಸ ಮಾಡ್ತಿದ್ದೇನೆ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

D.K Shivakumar
ಡಿ.ಕೆ ಶಿವಕುಮಾರ್​

By

Published : Dec 16, 2019, 10:13 PM IST

Updated : Dec 16, 2019, 10:54 PM IST

ಬೆಂಗಳೂರು:ಯಡಿಯೂರಪ್ಪ ಈಸ್ ನೋ ಮೋರ್ ಎ ಲೀಡರ್ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಗೆ ಹೋಗಿ ಗೆದ್ದ ಶಾಸಕರೇ ಬಂದು ನಮ್ಮವರನ್ನು ನೀವೇ ನಮ್ಮ ನಾಯಕರು ಅಂತಿದ್ದಾರೆ. ಇದನ್ನು ಕೇಳಿದ್ರೆ ನನಗೆ ಬಹಳ ಖುಷಿಯಾಗ್ತಿದೆ. ಅವರ ಪಕ್ಷದ ಶಾಸಕರು ನಮ್ಮ ನಾಯಕರು ಅಂತಾ ಸಿದ್ದರಾಮಯ್ಯಗೆ ಹೇಳ್ತಾರೆ. ಹೀಗಾಗಿ ಯಡಿಯೂರಪ್ಪ ಈಸ್ ನೋ ಮೋರ್ ಎ ಲೀಡರ್.. ಅಷ್ಟೇ ಸಾಕು ನಮಗೆ ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ‌ ಖಾಲಿ ಇಲ್ಲ. ನಾನು ಯಾವುದೇ ಲಾಬಿ ಮಾಡುತ್ತಿಲ್ಲ. ದೇಶವೇ ಹೊತ್ತಿ ಉರಿಯುತ್ತಿದೆ. ಇಂಥಹ ಸಂದರ್ಭದಲ್ಲಿ ಕಾಂಗ್ರೆಸ್ ದೇಶವನ್ನು ಉಳಿಸಬೇಕಿದೆ. ನಮ್ಮ ನಾಯಕರೆಲ್ಲ ಸಮರ್ಥರೇ ಇದ್ದಾರೆ. ದಿನೇಶ್ ಗುಂಡೂರಾವ್ ಸಮರ್ಥರಲ್ವಾ? ಸಿದ್ದರಾಮಯ್ಯ ಸಮರ್ಥರಲ್ವಾ? ಎಲ್ಲರೂ ಸಮರ್ಥ ನಾಯಕರೇ. ಸಿದ್ದರಾಮಯ್ಯ ಅತ್ಯಂತ ಲಕ್ಕಿಯೆಸ್ಟ್ ಸಮರ್ಥ ಸಿಎಂ ಆಗಿದ್ದರು. 11 ವರ್ಷಗಳಿಂದ ನಮ್ಮ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. ಎಲ್ಲರೂ ಕೂಡ ಸಮರ್ಥ ನಾಯಕರೇ ಎಂದು ಅಭಿಪ್ರಾಯಪಟ್ಟರು.

ನನಗೆ ಯಾರ ಬೆಂಬಲವೂ ಬೇಡ, ಕೆಪಿಸಿಸಿ ಅಧ್ಯಕ್ಷ ಅಂತಾ ನನ್ನ ಹೆಸರು ಹೇಳಬೇಡಿ. ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ಕೆಲಸ ಮಾಡ್ತಿದ್ದೇನೆ. ಉಪ ಚುನಾವಣೆಯಲ್ಲಿ ಸೋತೆವು. ಹೀಗಾಗಿ ಸಿದ್ದರಾಮಯ್ಯ ಭಾವನೆ ಕೂಡ ಅತ್ಯಂತ ಸಹಜ. ನಾನೂ ಕೂಡ ಹಲವು ಕ್ಷೇತ್ರಕ್ಕೆ ಓಡಾಡಿದೆ, ಜನರು ಸೇರಿದ್ದು ನೋಡಿ ಬಹಳ ಖುಷಿಯಾಗಿತ್ತು. ಆದರೆ, ಅವು ಯಾವುದೂ ಕೂಡ ಮತಗಳಾಗಿ ಪರಿವರ್ತನೆಯಾಗಲಿಲ್ಲ. ಹೀಗಾಗಿ ನನಗೂ ಕೂಡ ನೋವಾಗಿದೆ ಎಂದರು.

ಮತ್ತೆ ದೆಹಲಿ ಕಡೆ ಪ್ರಯಾಣ ಹೌದು, ಮತ್ತೆ ದೆಹಲಿಗೆ ಹೋಗಬೇಕಿದೆ. ಪತ್ನಿಯ ಕೇಸ್​ಗೆ ಸಂಬಂಧಪಟ್ಟಂತೆ ಕೆಲವು ದಾಖಲೆಗಳಿವೆ. ಅವುಗಳನ್ನೆಲ್ಲ ಕೋರ್ಟ್​ಗೆ ನೀಡಬೇಕು. ಹೀಗಾಗಿ ದೆಹಲಿಗೆ ಹೋಗ್ತೇನೆ ಎಂದರು.

Last Updated : Dec 16, 2019, 10:54 PM IST

ABOUT THE AUTHOR

...view details