ಕರ್ನಾಟಕ

karnataka

ETV Bharat / state

ಆನಂದ್ ಸಿಂಗ್ ರಾಜೀನಾಮೆ ವಿಚಾರ ನಂಬಲಿಕ್ಕೆ ಸಾಧ್ಯವಿಲ್ಲ: ಡಿಕೆಶಿ - dks pc

ಟಿವಿಯಲ್ಲಿ ವಿಷಯ ನೋಡಿ ಶಾಕ್ ಆಯಿತು. ಆನಂದ್ ಸಿಂಗ್ ಪಕ್ಷ ಬಿಡುತ್ತಾರೆ ಅನ್ನೋ ನಂಬಿಕೆ ಈಗಲೂ ಇಲ್ಲ. ಯಾರಿಗೂ ಚುನಾವಣೆಗೆ ಹೋಗೋಕೆ ಇಷ್ಟ ಇಲ್ಲ. ಸರ್ಕಾರ ಮಾಡೋದು ಹುಡುಗಾಟಿಕೆ ಅಲ್ಲ. ಚುನಾವಣೆ ಗೆಲ್ಲೋದು ಅಷ್ಟು ಸುಲಭ ಕೂಡ ಅಲ್ಲ ಎಂದರು.

ಆನಂದ್ ಸಿಂಗ್ ರಾಜಿನಾಮೆ ವಿಚಾರ ನಂಬಲಿಕ್ಕೆ ಸಾಧ್ಯವಿಲ್ಲ: ಡಿಕೆಶಿ

By

Published : Jul 1, 2019, 2:17 PM IST

ಬೆಂಗಳೂರು: ಆನಂದ್ ಸಿಂಗ್ ರಾಜೀನಾಮೆ ವಿಚಾರ ನಂಬಲಿಕ್ಕೆ ಸಾಧ್ಯವಿಲ್ಲ. ಪಾರ್ಟಿ ಬಿಟ್ಟು ಹೋಗೋಲ್ಲ ಅಂತಾ ಹೇಳಿದ್ರು ಎಂದು ಸಚಿವ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿ, ಟಿವಿಯಲ್ಲಿ ವಿಷಯ ನೋಡಿ ಶಾಕ್ ಆಯಿತು. ಆನಂದ್ ಸಿಂಗ್ ಪಕ್ಷ ಬಿಡುತ್ತಾರೆ ಅನ್ನೋ ನಂಬಿಕೆ ಈಗಲೂ ಇಲ್ಲ. ಯಾರಿಗೂ ಚುನಾವಣೆಗೆ ಹೋಗೋಕೆ ಇಷ್ಟ ಇಲ್ಲ. ಸರ್ಕಾರ ಮಾಡೋದು ಹುಡುಗಾಟಿಕೆ ಅಲ್ಲ. ಚುನಾವಣೆ ಗೆಲ್ಲೋದು ಅಷ್ಟು ಸುಲಭ ಕೂಡ ಅಲ್ಲ ಎಂದರು.

ಆನಂದ್ ಸಿಂಗ್ ರಾಜಿನಾಮೆ ವಿಚಾರ ನಂಬಲಿಕ್ಕೆ ಸಾಧ್ಯವಿಲ್ಲ: ಡಿಕೆಶಿ

ಜಿಂದಾಲ್ ವಿಚಾರದ ಬಗ್ಗೆ ಮಾತನಾಡಿದ ಅವರು, ಆ ವಿಚಾರ ನನಗೆ ವೈಯಕ್ತಿಕವಲ್ಲ. ಬಿಜೆಪಿ ಸರ್ಕಾರ ಇದ್ದಾಗ ಕೊಟ್ಟಿದ್ದು. ಹಿಂದೆ ಯಡಿಯೂರಪ್ಪ ಸಹಿ ಮಾಡಿದ್ದರು. ಕೈಗಾರಿಕೆ ಉತ್ತೇಜನಕ್ಕೆ ಪ್ರೋತ್ಸಾಹಿಸುವುದಕ್ಕೆ ಈ ನಿರ್ಧಾರ ಮಾಡಿದ್ದೇವೆ. ಈಗ ನೂನ್ಯತೆ ಸರಿ ಪಡಿಸುತ್ತಿದ್ದೇವೆ. ಇದರ ತನಿಖೆಯನ್ನು ಸಂಪುಟ ಉಪ ಸಮಿತಿಗೆ ಸಿಎಂ ನೀಡಿದ್ದಾರೆ ಎಂದು ವಿವರಿಸಿದರು.

ಯಾರಿಗೂ ಎಲೆಕ್ಷನ್ ಬೇಕಾಗಿಲ್ಲ. ಅಲ್ಲದೆ, ನಾನು ರಾಜೀನಾಮೆ ಕೊಟ್ರು ಸರ್ಕಾರಕ್ಕೆ ಏನು ಆಗೋಲ್ಲ. ಕೆಲವರಿಗೆ ಹೊಟ್ಟೆ ನೋವು ಇರುತ್ತೆ ಎಲ್ಲಾ ಸರಿ ಮಾಡಬೇಕು. ಎಲ್ಲಾ ಸಮಯದಲ್ಲೂ ಆಪರೇಷನ್ ಸಕ್ಸಸ್ ಆಗೊಲ್ಲ. ನಾನೇ ಎಲ್ಲಾ ಚಿಕಿತ್ಸೆ ನೀಡಿದ್ರೂ ಸರಿ ಹೋಗಲ್ಲ. ನಾನಲ್ಲದೇ ಇದ್ರೂ ನನ್ನಂತ ಅನೇಕರು ಹುಟ್ಟಿಕೊಳ್ತಾರೆ. ಅವರೇ ಸರಿ ಮಾಡ್ತಾರೆ ಎಂದರು.

For All Latest Updates

TAGGED:

dks pc

ABOUT THE AUTHOR

...view details