ಕರ್ನಾಟಕ

karnataka

ETV Bharat / state

ಶೆಟ್ಟರ್​ ಸೇರ್ಪಡೆಯಿಂದ ಬಲ; ನಾವು 150 ಸ್ಥಾನ ಗೆಲ್ಲುತ್ತೇವೆ: ಡಿಕೆ ಶಿವಕುಮಾರ್​ ವಿಶ್ವಾಸ - Siddaramaiah meeting

ಜಗದೀಶ್​ ಶೆಟ್ಟರ್ ಮತ್ತು ಲಕ್ಷಣ್​ ಸವದಿ ನಮ್ಮ ಪಕ್ಷಕ್ಕೆ ಬಂದ ನಂತರ ನಾವು ​150 ಸೀಟು ಗೆಲ್ಲುತ್ತೇವೆ ಎಂಬ ಭರವಸೆಯನ್ನ ಡಿ ಕೆ ಶಿವಕುಮಾರ್​ ವ್ಯಕ್ತಪಡಿಸಿದ್ದಾರೆ.

dk
ಡಿಕೆ ಶಿವಕುಮಾರ್​

By

Published : Apr 18, 2023, 1:03 PM IST

ಬೆಂಗಳೂರು: ಮುಂಚೆ 140 ಸೀಟು ಗೆಲ್ಲುತ್ತೇವೆ ಅಂದುಕೊಂಡಿದ್ದೆವು. ಆದರೆ, ಶೆಟ್ಟರ್ ಸೇರ್ಪಡೆಯಿಂದ 150 ಸೀಟು ಗೆಲ್ಲುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾತನಾಡಿ, ವೀರಶೈವ, ಲಿಂಗಾಯತ ಸಮುದಾಯದವರು ನಮ್ಮ ಜೊತೆ ಬರುತ್ತಾರೆ. ನಮ್ಮ ಸಮೀಕ್ಷೆ 141 ಸೀಟು ಇತ್ತು. ಈಗ ಶೆಟ್ಟರ್, ಸವದಿ ಬಂದ ಮೇಲೆ 150 ಸೀಟು ತಲುಪುತ್ತೇವೆ ಎಂಬ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಅವರಿಬ್ಬರಿಂದ ಇಡೀ ರಾಜ್ಯದಲ್ಲಿ ವೀರಶೈವರ ವೋಟು ಎರಡರಿಂದ ಮೂರು ಪರ್ಸೆಂಟ್ ಜಾಸ್ತಿಯಾಗಿದೆ. ನಮ್ಮ ಸಿದ್ದಾಂತ ಒಪ್ಪಿ ಬರೋ ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್​ಗೆ ಮುಕ್ತ ಆಹ್ವಾನ ನೀಡುತ್ತೇನೆ. ಎಲ್ಲ ಒಟ್ಟಿಗೆ ಸೇರಿ ಕರ್ನಾಟಕ ಉಳಿಸೋಣ. ಬದಲಾವಣೆ ತರೋಣ. ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ಸ್ಥಳೀಯ ನಾಯಕತ್ವದಲ್ಲಿ ಸೇರ್ಪಡೆಯಾಗಿ ಎಂದರು.

ಐಟಿ, ಇಡಿ ಇದ್ಯಾವುದಕ್ಕೂ ನಾವು ಹೆದರಲ್ಲ. ರೇಡ್ ಮಾಡಿ ನಮ್ಮ ಅಭ್ಯರ್ಥಿಗಳನ್ನು ಬೆದರಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಅವರಿಗೆಲ್ಲ ಪಾಠ ಕಲಿಸ್ತೀವಿ. ಕಾಂಗ್ರೆಸ್ ನಾಯಕರನ್ನು ಮಾತ್ರ ಗುರಿಯಾಗಿಸಿ ಐಟಿ- ಇಡಿ ರೇಡ್ ಮಾಡುತ್ತಿಲ್ಲ. ನಮ್ಮ ಸಂಪರ್ಕದಲ್ಲಿರುವ ಉದ್ಯಮಿಗಳ ಮೇಲೂ ರೇಡ್​ ಮಾಡುತ್ತಿದ್ದಾರೆ. ನಮ್ಮ ಜೊತೆ ಪೋನ್ ಸಂಪರ್ಕದಲ್ಲಿರುವವರನ್ನು ಹೆದರಿಸುತ್ತಿದ್ದಾರೆ.

ಕಾಂಗ್ರೆಸ್​ಗೆ ಸಹಾಯ ಮಾಡಬೇಡಿ ಎಂದು ಹೇಳುತ್ತಿದ್ದು, ಇದರಿಂದ ಕೆಲವರು ನಮ್ಮ ಪೋನ್ ಎತ್ತೋಕೂ ಭಯ ಪಡುತ್ತಿದ್ದಾರೆ ಎಂದರು. ಯಾರೂ ಬಿಜೆಪಿಯವರನ್ನು ಮುಟ್ಟುತ್ತಿಲ್ಲ. ಬಿಜೆಪಿಯವರೇನು ಹರಿಶ್ಚಂದ್ರರಲ್ಲ. ನಮಗೇನು ನಡೀತಿದೆ ಅಂತ ಗೊತ್ತು. ಇರಲಿ ನೋಡೋಣ ನಾವು ಫೇಸ್ ಮಾಡ್ತೀವಿ. ಜನ ನಮ್ಮ ಕೆಲಸ , ಕಾರ್ಯಕ್ರಮದ ಮೇಲೆ ವೋಟಿ ಕೊಡ್ತಾರೆ. ಎಲ್ಲಿದೆ ಪ್ರಜಾಪ್ರಭುತ್ವ, ಸಂವಿಧಾನ ಎಲ್ಲ ಸುಟ್ಟಾಕಿಬಿಟ್ಟಿದ್ದಾರೆ. ಮಂಡ್ಯ ಕ್ಷೇತ್ರಕ್ಕೆ ಟಿಕೆಟ್ ಕೊಟ್ಟಿಲ್ಲ ಅಂತ ಯಾರು ಹೇಳಿದ್ದು. ನಮ್ಮ ಅಭ್ಯರ್ಥಿ ಅಂತ ಈಗಾಗಲೇ ಹೇಳಿಯಾಗಿದೆ. ಯಾವಾಗ ಏನು ಮಾಡಬೇಕು ಎಂಬ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು. ಹಾಗೆ ಮೈಸೂರಿನ ರಾಮದಾಸ್, ರಾಜೀವ್ ಕಾಂಗ್ರೆಸ್ ಸಂಪರ್ಕ ವಿಚಾರ ಮಾತನಾಡಿ, ಯಾರೆಲ್ಲ ನಮ್ಮ ಸಿದ್ದಾಂತ ಒಪ್ಪಿ ಪಕ್ಷಕ್ಕೆ ಬರ್ತಾರೆ ಅವರನ್ನೆಲ್ಲ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ತೀನಿ ಎಂದು ಹೇಳಿದರು.

ಸಿದ್ದರಾಮಯ್ಯ ಸಭೆ:ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ ಚರ್ಚಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರ ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿದ ಬಳಿಕ ಸಿದ್ದರಾಮಯ್ಯ ಮಾತನಾಡಿ, ಚುನಾವಣೆಗೆ ಮೂರು ತಿಂಗಳು ಇರುವಾಗ ಟೆಂಡರ್ ಕರೆಯಬಾದು. ಟೆಂಡರ್ ಆದ ಮೇಲೆ ವರ್ಕ್ ಕೊಡಬಾರದು. ಕೆಲಸ ಶುರುವಾಗಿದ್ದಕ್ಕೆ ಮಾತ್ರ ಅವಕಾಶ. ಚುನಾವಣೆಗೆ ಹಣ ತೆಗೆದುಕೊಂಡು ಟೆಂಡರ್ ಕೊಡ್ತಾ ಇದ್ದಾರೆ. ಚುನಾವಣಾ ಆಯೋಗ ಮೇಲೆ ಒತ್ತಡ ಹಾಕಿದ್ದೇವೆ. ಸಾವಿರಾರು ‌ಕೋಟಿ ಟೆಂಡರ್ ಕರೆದಿದ್ದಾರೆ. ಶೇ 40 ಅಲ್ಲ 50ರಷ್ಟು ಕಮಿಷನ್ ತೆಗೆದುಕೊಂಡಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಅಖಂಡ ಮತ್ತು ಹರಿಹರ ರಾಮಪ್ಪ ಟಿಕೆಟಿಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ನಾನು ಈಗಾಗಲೇ ಅಭಿಪ್ರಾಯ ಹೇಳಿದ್ದೇವೆ. ನಾನು, ಅಧ್ಯಕ್ಷರು, ಸುರ್ಜೆವಾಲಾ ಎಲ್ಲರೂ ಅಭಿಪ್ರಾಯ ಹೇಳಿದ್ದಾರೆ. ಅಂತಿಮ ತೀರ್ಮಾನ ಕಾಂಗ್ರೆಸ್ ಹೈಕಮಾಂಡ್ ‌ಮಾಡುತ್ತೆ ಎಂದರು.

ಇದನ್ನೂ ಓದಿ:ಇದಕ್ಕೆಲ್ಲಾ ಮೂಲ ಕಾರಣ ಬಿ ಎಲ್​ ಸಂತೋಷ್.. ಜಗದೀಶ್​ ಶೆಟ್ಟರ್ ಕಿಡಿ​

ABOUT THE AUTHOR

...view details