ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಡಿಕೆಶಿ ರೋಡ್ ಶೋ: ಅಭ್ಯರ್ಥಿಗಳ ಪರ ಮತಬೇಟೆ - ಕರ್ನಾಟಕ ರಾಜಕೀಯ

ಯಶವಂತಪುರ, ಗೋವಿಂದರಾಜ ನಗರ ಹಾಗೂ ಬಸವನಗುಡಿಯಲ್ಲಿ ರೋಡ್ ಶೋ ನಡೆಸಿದ ಡಿ.ಕೆ ಶಿವಕುಮಾರ್ ತಮ್ಮ ಅಭ್ಯರ್ಥಿಗಳ ಪರ ಮತಯಾಚಿಸಿದರು.

DK Shivakumar road show in Bengaluru
ಬೆಂಗಳೂರಿನಲ್ಲಿ ಡಿ.ಕೆ ಶಿವಕುಮಾರ್ ರೋಡ್ ಶೋ

By

Published : May 1, 2023, 8:00 AM IST

ಬೆಂಗಳೂರಿನಲ್ಲಿ ಡಿ.ಕೆ ಶಿವಕುಮಾರ್ ರೋಡ್ ಶೋ

ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾನುವಾರ ಬೆಂಗಳೂರು ನಗರದಲ್ಲಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಯಶವಂತಪುರದಲ್ಲಿ ಅಭ್ಯರ್ಥಿ ಬಾಲರಾಜಗೌಡ ಪರ, ಗೋವಿಂದರಾಜ ನಗರದ ಅಭ್ಯರ್ಥಿ ಪ್ರಿಯಕೃಷ್ಣ ಪರ ಹಾಗೂ ಬಸವನಗುಡಿಯಲ್ಲಿ ಯು.ಬಿ ವೆಂಕಟೇಶ್ ಅವರ ಪರವಾಗಿ ಡಿಕೆಶಿ ರೋಡ್ ಶೋ ನಡೆಸಿ ಮತ ಯಾಚಿಸಿದರು.

ಬೃಹತ್​ ರೋಡ್ ಶೋ ನಡೆಸಿ ಅಭ್ಯರ್ಥಿಗಳ ಜತೆ ಪ್ರಚಾರ ಕಾರ್ಯದಲ್ಲಿ ಭಾಗಿಯಾದ ಡಿ.ಕೆ ಶಿವಕುಮಾರ್ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 6 ಗ್ಯಾರಂಟಿಗಳನ್ನು ಕಾಂಗ್ರೆಸ್ ಪಕ್ಷ ಘೋಷಿಸಿದೆ. ಮೊದಲ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಿದೆ. ಇದಕ್ಕೆ ಆಗುವ ವೆಚ್ಚಗಳ ಕುರಿತು ಸಹ ನಾವು ಸಮಾಲೋಚಿಸಿದ್ದು ನಮ್ಮ ಘೋಷಣೆಗಳ ವಿಚಾರದಲ್ಲಿ ಯಾವುದೇ ಅನುಮಾನ ಬೇಡ. ಅತಿ ಭ್ರಷ್ಟ ಹಾಗೂ ಜನ ವಿರೋಧಿ ಸರ್ಕಾರವನ್ನು ತೊಲಗಿಸುವ ಕಾರ್ಯವನ್ನು ಮತದಾರರು ಮಾಡಬೇಕಿದೆ. ಬೆಂಗಳೂರಿನ ಜನ ಪ್ರಜ್ಞಾವಂತರಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಆರಿಸಿ ತನ್ನಿ ಎಂದು ಮನವಿ ಮಾಡಿದರು.

ಇದನ್ನೂ ಓದಿ:ರಾಹುಲ್ ಗಾಂಧಿ‌ ಹೋದಲ್ಲೆಲ್ಲ ಕಮಲ ಅರಳಿದೆ: ಸಿಎಂ ಬೊಮ್ಮಾಯಿ ಲೇವಡಿ

ದುರಾಡಳಿತಕ್ಕೆ ಕೊನೆ ಹಾಡಬೇಕು: 40 ಪರ್ಸೆಂಟ್ ಕಮಿಷನ್ ಸರ್ಕಾರವನ್ನ ಕಿತ್ತೊಗೆಯಲು ಜನ ತೀರ್ಮಾನಿಸಿದ್ದಾರೆ. ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಲಕ್ಷಣಗಳು ಗೋಚರಿಸುತ್ತಿವೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜನ ವಿರೋಧಿ ಕಾನೂನುಗಳು ಹಾಗೂ ಕಾರ್ಯಕ್ರಮಗಳನ್ನು ನಾವು ಹಿಂಪಡೆದು ಜನರ ಹಿತಕಾಗಿ ಒಂದಿಷ್ಟು ಅವಕಾಶಗಳನ್ನು ಮಾಡಿಕೊಡುತ್ತೇವೆ. 2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ಮಾಡಿ. ನಿಮಗೆ ಉತ್ತಮ ಸರ್ಕಾರ ನೀಡುವ ಭರವಸೆ ನಾವು ಕೊಡುತ್ತೇವೆ. 2024ರ ಲೋಕಸಭೆ ಚುನಾವಣೆಯಲ್ಲೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ. ಈ ಡಬಲ್ ಇಂಜಿನ್ ಸರ್ಕಾರದ ದುರಾಡಳಿತಕ್ಕೆ ಮತದಾರರು ಕೊನೆ ಹಾಡಬೇಕು ಎಂದು ಅವರು ಮನವಿ ಮಾಡಿದರು.

ಇದನ್ನೂ ಓದಿ:ಜನ ಬಲವೇ ಗೆಲುವು ಸಾಧಿಸಲಿದೆ: ಸಿಎಂ ಬೊಮ್ಮಾಯಿ ವಿಶ್ವಾಸ

ಲಂಚಕ್ಕೊಬ್ಬ ಮಂಚಕ್ಕೊಬ್ಬ: ಗೋವಿಂದರಾಜ ನಗರ ಕ್ಷೇತ್ರದಲ್ಲಿ ಮಾತನಾಡಿದ ಡಿಕೆಶಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅತ್ಯಂತ ಭ್ರಷ್ಟ ಸರ್ಕಾರ ರಾಜ್ಯದಲ್ಲಿದೆ. ಮೋದಿಯವರ ಜತೆಗೆ ಈಗ ಇರುವುದು ಲಂಚಕ್ಕೊಬ್ಬ ಮಂಚಕ್ಕೊಬ್ಬ ಮಾತ್ರ. ಸವದಿ ಮೇಲೆ ಭ್ರಷ್ಟಾಚಾರ ಆರೋಪ ಇತ್ತಾ?, ಶೆಟ್ಟರ್ ಮೇಲೆ ಆರೋಪ ಇತ್ತಾ?. ಆರೋಪ ಇಲ್ಲದಿರೋರೆಲ್ಲ ನಮ್ಮ ಜತೆಗೆ ಇದ್ದಾರೆ. ಆರೋಪ ಇರುವವರು ಭ್ರಷ್ಟರು ಎಲ್ಲರೂ ಅವರ ಜತೆಗೆ ಇದ್ದಾರೆ. ಮೋದಿ ಏನೂ ಇಲ್ಲಿ ಆಡಳಿತ ಮಾಡೋದು ಬೇಕಾಗಿಲ್ಲ. ಅತ್ಯಂತ ನೀಚ ಭ್ರಷ್ಟ ಸರ್ಕಾರ ಇಲ್ಲಿದೆ. ಭ್ರಷ್ಟಾಚಾರ ಆರೋಪ ಇರುವವರನ್ನೆಲ್ಲ ಜತೆಗೆ ಇಟ್ಟುಕೊಂಡು ರ‍್ಯಾಲಿ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ:ಹಾರುಗೇರಿಯಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಪ್ರಿಯಾಂಕಾ ಗಾಂಧಿ

ABOUT THE AUTHOR

...view details