ಕರ್ನಾಟಕ

karnataka

ETV Bharat / state

ಗಣೇಶನಿಗೂ ಸಾವರ್ಕರ್​​ಗೂ ಏನು ಸಂಬಂಧ?: ಡಿ.ಕೆ ಶಿವಕುಮಾರ್ ಪ್ರಶ್ನೆ - ಗಣೇಶ ಉತ್ಸವದಲ್ಲಿ ಸಾವರ್ಕರ್ ಫೋಟೋ ಹಾಕುವ ವಿಚಾರ

ಗಣೇಶ ಉತ್ಸವದಲ್ಲಿ ಸಾವರ್ಕರ್ ಫೋಟೋ ಹಾಕುವ ವಿಚಾರವಾಗಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​, ತಿಲಕರ ಫೋಟೋ ಹಾಕಿದರೆ ಅದಕ್ಕೊಂದು ನ್ಯಾಯವಿದೆ. ಸಾವರ್ಕರ್ ಫೋಟೋದಿಂದ ಏನು‌ ಮೆಸೇಜ್ ಹೋಗುತ್ತದೆ ಎಂದು ಪ್ರಶ್ನಿಸಿದರು.

DK Shivakumar
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

By

Published : Aug 26, 2022, 1:29 PM IST

ಬೆಂಗಳೂರು: ಗಣೇಶನಿಗೂ ಸಾವರ್ಕರ್​​ಗೂ ಏನು ಸಂಬಂಧ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​ ಪ್ರಶ್ನಿಸಿದರು. ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ತಿಲಕರ ಫೋಟೋ ಹಾಕಿದರೆ ಅದಕ್ಕೊಂದು ನ್ಯಾಯವಿದೆ. ಸಾವರ್ಕರ್ ಫೋಟೋದಿಂದ ಏನು‌ ಮೆಸೇಜ್ ಹೋಗುತ್ತದೆ ಎಂದು ಪ್ರಶ್ನಿಸಿದರು. ಅವರ ಪಕ್ಷವನ್ನ ಅವರೇ ಡಿಗ್ರೇಡ್ ಮಾಡಿಕೊಳ್ತಾರೆ. ಅವರ ತತ್ವ, ಸಿದ್ಧಾಂತವನ್ನು ಅವರೇ ಕೆಡಿಸಿಕೊಳ್ತಾರೆ. ಅವರಿಗೆ ಅಭಿವೃದ್ಧಿ ಬೇಕಿಲ್ಲ. ಗಲಾಟೆ, ಗದ್ದಲ ಮಾಡಿಸುವುದೇ ಅವರ ಗುರಿ ಎಂದು ಕಿಡಿ ಕಾರಿದರು.

ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಬಿಡಿಎಗೆ ಸುಪ್ರೀಂ ಛೀ‌ಮಾರಿ ಹಾಕಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳು ರಾಜಕೀಯ ಒತ್ತಡ ಇಲ್ಲದೇ ಏನು ಮಾಡಲಾಗಲ್ಲ. ಅದರ ಫಲಾನುಭವಿ ಯಾರು?, ಮೊದಲು ಫಲಾನುಭವಿ ನೈತಿಕ ಹೊಣೆ ಹೊರಬೇಕು. ಯಾರು ಸರ್ಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಅವರು‌ ಕೂಡಲೇ ರಾಜೀನಾಮೆ ಕೊಟ್ಟರೆ ಸೂಕ್ತ. ಬೊಮ್ಮಾಯಿ ಇದನ್ನ ದೊಡ್ಡದು ಮಾಡಿಕೊಳ್ಳುವುದು ಬೇಡ. ಯಾರಿದ್ದಾರೆ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಡಿಕೆಶಿ ಒತ್ತಾಯಿಸಿದರು.

ಆ.28ರಂದು ಕಾಂಗ್ರೆಸ್ ಶಾಸಕಾಂಗ ಸಭೆ:ಸುರ್ಜೇವಾಲ ಬೆಂಗಳೂರಿಗೆ ಬರುತ್ತಿದ್ದಾರೆ. ಆ. 28, 29 ರಂದು ಎರಡು ದಿನ ಇಲ್ಲೇ ಇರುತ್ತಾರೆ. ಸೆ.1 ರಂದು ದೆಹಲಿಯಿಂದ ಒಂದು ಟೀಂ ಬರುತ್ತದೆ. 28 ರಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇವೆ. 29 ರಂದು ಪದಾಧಿಕಾರಿಗಳ ಸಭೆ ನಡೆಯಲಿದೆ. ಭಾರತ್ ಜೋಡೋ ಯಾತ್ರೆ ಕುರಿತು ಚರ್ಚೆ ನಡೆಸುತ್ತೇವೆ. ಯಾರಿಗೆ ಯಾವ ಜವಾಬ್ದಾರಿ ನೀಡಬೇಕೆಂದು‌ ಚರ್ಚಿಸಿ, ಎಲ್ಲರಿಗೂ ಜವಾಬ್ದಾರಿ ಹಂಚಿಕೆ ಮಾಡುತ್ತೇವೆ ಎಂದು ಡಿಕೆಶಿ ವಿವರಿಸಿದರು.

ಇದನ್ನೂ ಓದಿ:ಜನರ ಬದುಕಿಗೆ ಕಲ್ಲು ಹಾಕುವ ಕೆಲಸ ಮಾಡಬೇಡಿ: ಬಿಜೆಪಿ ಸರ್ಕಾರಕ್ಕೆ ಡಿಕೆಶಿ ಮನವಿ

ABOUT THE AUTHOR

...view details