ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರು: ಸೋನಿಯಾ ಗಾಂಧಿ ಅವರನ್ನು ವಿಷಕನ್ಯೆ ಎಂದಿರುವ ಬಸನಗೌಡ ಯತ್ನಾಳ್ ರನ್ನು ಬಿಜೆಪಿಯಿಂದ ವಜಾಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸೋನಿಯಾ ಗಾಂಧಿಗೆ ಬಸನಗೌಡ ಯತ್ನಾಳ್ ವಿಷ ಕನ್ಯೆ ಎಂದಿದ್ದಾರೆ. ನಿಮ್ಮ ನಾಲಿಗೆಯನ್ನು ಯಾರು ಏನು ಮಾಡುತ್ತಾರೆ ಎಂದು ಗೊತ್ತಿಲ್ಲ. ಈ ರಾಜ್ಯದ ಸಂಸ್ಕೃತಿ ಇರುವ ಜನರು ಏನು ಮಾಡುತ್ತಾರೆ ಎಂದು ಗೊತ್ತಿಲ್ಲ. ಕಾಂಗ್ರೆಸ್ ಇದನ್ನು ಯಾವ ಕಾರಣಕ್ಕೂ ಸಹಿಸಲ್ಲ. ಆತ ಕ್ಷಮಾಪಣೆ ಕೇಳುತ್ತಿಲ್ಲ. ಪಿಎಂ, ಸಿಎಂ ಕೂಡ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಯತ್ನಾಳ್ ಹೇಳಿಕೆ ಮಹಿಳೆಗೆ ಮಾಡಿದ ಅಪಮಾನ. ನಡ್ಡಾ ಅವರೇ ನಿಮಗೆ ಗಟ್ಸ್ ಇದ್ದರೆ ಯತ್ನಾಳ್ ಅವರನ್ನು ನಿಮ್ಮ ಪಕ್ಷದಿಂದ ವಜಾ ಮಾಡಬೇಕು. ಬಿಜೆಪಿಯವರಿಗೆ ಒಂದು ಚಾಳಿ. ನೆಹರು, ಗಾಂಧಿ ಕುಟುಂಬವನ್ನು ಬಯ್ಯುವುದೇ ಒಂದು ಚಾಳಿಯಾಗಿದೆ. ಬಿಜೆಪಿಯವರು ರಾಹುಲ್ ಗಾಂಧಿಯನ್ನು ಹೈ ಬ್ರಿಡ್ ಕಾಲ್ಫ್ ಎಂದಿದ್ದಾರೆ. ಕಾಂಗ್ರೆಸ್ ವಿಡೋ ಅಂತ ಕರೆದಿದ್ದಾರೆ. ಇದೆಲ್ಲಾ ಸರಿ ಅಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ:ಚೀನಾ ರಕ್ಷಣಾ ಸಚಿವರ ಕೈಕುಲುಕದೇ ಮೌನವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ ರಾಜನಾಥ್ ಸಿಂಗ್
ಕರ್ನಾಟಕ ರಾಜ್ಯ ದೇಶದ ಬಾಗಿಲನ್ನು ತೆರೆಯುವ ರಾಜ್ಯವಾಗಲಿದೆ. ಬಿಜೆಪಿ ಕ್ಷಮಾಪಣೆ ಕೇಳಬೇಕು. ಜನ ಧಂಗೆ ಏಳುವ ಮುನ್ನ ಕ್ರಮ ಕೈಗೊಳ್ಳಬೇಕು. ಅವರು ದೇಶದ ತಾಯಿಯಂದಿರಿಗೆ, ಸ್ವಾಭಿಮಾನಕ್ಕೆ ಮಾಡಿದ ಅಪಮಾನ. ಅವರು ಕೂಡಲೇ ಕ್ಷಮಾಪಣೆ ಕೇಳಬೇಕು. ಕಾಂಗ್ರೆಸ್ ಗ್ಯಾರಂಟಿ ಬಿಜೆಪಿ ಅವರ ಹೇಳಿಕೆಗಳನ್ನು ಸುಡುತ್ತದೆ ಎಂದು ಇದೇ ವೇಳೆ ಗರಂ ಆದರು.
ಬಿಜೆಪಿ ನಾಯಕರು ಕಾಂಗ್ರೆಸ್ ಗ್ಯಾರಂಟಿ ನಮ್ಮ ದೇಶಕ್ಕೆ ಮಾರಕ ಅಂದಿದ್ದಾರೆ. ಐದು ಪ್ರಮುಖ ಗ್ಯಾರಂಟಿಯನ್ನು ನಾವು ಘೊಷಿಸಿದ್ದೇವೆ. ನಿನ್ನೆ ಪ್ರಧಾನಿ ಮೋದಿ ವರ್ಚುಯಲ್ ಸಭೆ ನಡೆಸಿದ್ದಾರೆ. ನಾನು ಎಲೆಕ್ಷನ್ ಕಮಿಷನ್ಗೆ ಬೊಮ್ಮಾಯಿಗೆ ಕೇಳುತ್ತೇನೆ. ಇದಕ್ಕೆ ಅನುಮತಿ ತೆಗೆದುಕೊಳ್ಳಲಾಗಿದೆಯಾ? ಎಂದು ಪ್ರಶ್ನಿಸಿದರು. ಈ ವರ್ಚುಯಲ್ ಸಭೆಯ ಖರ್ಚು ಯಾರ ಖಾತೆಗೆ ಬೀಳುತ್ತದೆ?. ಈ ಸಂಬಂಧ ಚುನಾವಣಾ ಆಯೋಗ ಅನುಮತಿ ನೀಡಿಲ್ಲ ಎಂದಿದ್ದಾರೆ. ಈ ಬಗ್ಗೆ ನಾವು ಪರಿಶೀಲಿಸುತ್ತೇವೆ. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದರು.
ಇದನ್ನೂ ಓದಿ:ಶೆಟ್ಟರ್, ಸವದಿ ಸೋಲು ಖಚಿತ.. ಸ್ವಂತ ಶಕ್ತಿಯಿಂದಲೇ ಬಿಜೆಪಿ ಅಧಿಕಾರಕ್ಕೆ: ಶೋಭಾ ಕರಂದ್ಲಾಜೆ ವಿಶ್ವಾಸ
ಯತ್ನಾಳ್ ಹೇಳಿದ್ದೇನು?:ಯಲಬುರ್ಗಾ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ ಪರವಾಗಿ ಪ್ರಚಾರ ಸಭೆಯಲ್ಲಿ ಗುರುವಾರ ಸಂಜೆ ಪಾಲ್ಗೊಂಡು ಮಾತನಾಡಿದ ಬಸನಗೌಡ ಯತ್ನಾಳ್,ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪ ಎಂದು ಹೇಳಿದ್ದೀರಿ. ಹಾಗಾದರೆ, ಕಾಂಗ್ರೆಸ್ ನಾಯಕಿ ಸೋನಿಯಾ ವಿಷಕನ್ಯೆ ಏನು?. ಮೋದಿ ಅವರ ಬಗ್ಗೆ ಹೀಗೆ ಮಾತನಾಡಿಯೇ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ಚುನಾವಣೆಯಲ್ಲಿ ಔಟಾದರು ಎಂದು ತಿರುಗೇಟು ನೀಡಿದ್ದರು.