ಕರ್ನಾಟಕ

karnataka

ETV Bharat / state

ಸಿ ಪಿ ಯೋಗೇಶ್ವರ್ ಕಾಂಗ್ರೆಸ್ ಸೇರುವ ಸಾಧ್ಯತೆ ಬಗ್ಗೆ ಡಿ ಕೆ ಶಿವಕುಮಾರ್ ಹೇಳಿದ್ದೇನು?

ಮಾಜಿ ಸಚಿವ ಸಿ ಪಿ ಯೋಗೇಶ್ವರ್​​​ ಅವರು ಕಾಂಗ್ರೆಸ್​ ಸೇರುವ ಕುರಿತಂತೆ ಸುದ್ದಿಗಳು ಹರಿದಾಡುತ್ತಿವೆ. ಈ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

DK Shivakumar
ಡಿಕೆ ಶಿವಕುಮಾರ್

By

Published : Nov 4, 2021, 5:13 PM IST

Updated : Nov 4, 2021, 6:57 PM IST

ಬೆಂಗಳೂರು: ಕೆಲವರು ಮಾರ್ಕೆಟ್ ಮಾಡಿಕೊಳ್ಳಲು ಸುದ್ದಿ ಕೊಡ್ತಾರೆ. ಕೆಲವರು ಕಾಂಗ್ರೆಸ್​ಗೆ ಬರೋರು ಇದ್ದಾರೆ. ಅದರಲ್ಲಿ ಕೆಲವರು ನನಗೆ ಆಗದೆ ಇರೋರು ಇರಬಹುದು. ಆದರೆ ನಮಗೆ ಪಕ್ಷ ಮುಖ್ಯ, ಯಾರೂ ಬಂದ್ರು ಸ್ವಾಗತ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬಂದ್ರೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಪಕ್ಷಕ್ಕೆ ಬರುವವರು ಇದ್ದಾರೆ. ಅವರನ್ನು ಬೇಡ ಎಂದು ಹೇಳಲ್ಲ. ಕೆಲವರು ನನಗೆ ಆಗದಿರಬಹುದು ಅಥವಾ ಇನ್ನೊಬ್ಬರಿಗೆ ಆಗದಿರಬಹುದು. ಆದ್ರೆ ಪಕ್ಷ ಮುಖ್ಯ, ಬಂದ್ರೆ ಸ್ವಾಗತ. ಕೆಲವರು ತಮ್ಮ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಈಗಲೂ ಕೂಡ ಅನೇಕ ಕಡೆ ಮುಖಂಡರು ಕಾಂಗ್ರೆಸ್​ಗೆ ಬರೋದಕ್ಕೆ ಸಿದ್ಧವಿದ್ದಾರೆ. ಯಾರು ಯಾರು ಬರೋದಕ್ಕೆ ಸಿದ್ಧವಿದ್ದಾರೆ ಎಂದು ನಿಮಗೆ ಗೊತ್ತಾದರೆ ಗಾಬರಿ ಆಗಬಹುದು. ಒಂದು ಖುರ್ಚಿ ಖಾಲಿ ಇದ್ದರೆ ನಾಲ್ಕು ಮಂದಿ ಕಣ್ಣು ಹಾಕ್ತಾರೆ. ಈಗ ಬಿಜೆಪಿ ನಾಯಕರ ಕೈಲಿ ಅಧಿಕಾರ ಇದೆ. ಕೆಲವರಿಗೆ ಬೋರ್ಡ್ ಅಧ್ಯಕ್ಷ ಸ್ಥಾನ ನೀಡಿ ಸುಮ್ಮನಾಗಿಸಿದ್ದಾರೆ ಎಂದು ತಿಳಿಸಿದರು.

ಸಮ್ಮಿಶ್ರ ಸರ್ಕಾರವನ್ನು ಕೆಡವಿ ಹೋದ ಆ 13 ಮಂದಿಯ ಕ್ಷೇತ್ರಗಳಲ್ಲಿ ಮುಂದೆ ಏನಾಗುತ್ತೆ ನೀವೇ ನೋಡಿ ಎಂದು ಬಿಜೆಪಿಗೆ ವಲಸೆ ಹೋಗಿ ಸಚಿವರಾದವರಿಗೆ ಡಿಕೆಶಿ ಟಾಂಗ್ ನೀಡಿದರು.

ಇದನ್ನೂ ಓದಿ: 100 ದಿನಗಳ ಸಂಭ್ರಮದಲ್ಲಿರುವ ಬೊಮ್ಮಾಯಿ ಸರ್ಕಾರ ಎದುರಿಸಿದ ಸವಾಲು-ಸಂಕಷ್ಟಗಳು ನೂರೆಂಟು

Last Updated : Nov 4, 2021, 6:57 PM IST

ABOUT THE AUTHOR

...view details