ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಪಕ್ಷ ಸೇರುವಂತೆ ನಟ ವಿನೋದ್ ಪ್ರಭಾಕರ್​​ಗೆ ಡಿಕೆಶಿ ಆಫರ್..? - ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ವಿನೋದ್ ಪ್ರಭಾಕರ್​​​ಗೆ ಆಫರ್

ರಾಜರಾಜೇಶ್ವರಿ ನಗರದಲ್ಲಿರೋ‌‌‌ ನಟ ವಿನೋದ್ ಪ್ರಭಾಕರ್ ಮನೆಗೆ ಭೇಟಿ ನೀಡಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಡಿ.ಕೆ ಶಿವಕುಮಾರ್, ವಿನೋದ್ ಪ್ರಭಾಕರ್ ಜೊತೆ ಮಾತುಕತೆ ಮಾಡಿದ್ದಾರೆ. ಆರ್​​ಆರ್ ನಗರ, ಬೈಎಲೆಕ್ಷನ್ ಪ್ರಚಾರಕ್ಕೆ ಬರುವಂತೆ ಕೇಳಿದ್ದಾರೆ. ಹಾಗೇ ವಿನೋದ್ ಪ್ರಭಾಕರ್ ಮನೆಯಲ್ಲಿ ಡಿ.ಕೆ ಶಿವಕುಮಾರ್ ಭೋಜನ ಕೂಡ ಸವಿದಿದ್ದಾರೆ.

dk-shivakumar-offers-vinod-prabhakars-to-join-congress
ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ನಟ ವಿನೋದ್ ಪ್ರಭಾಕರ್​​ಗೆ ಡಿಕೆಶಿ ಆಫರ್..?

By

Published : Oct 23, 2020, 6:14 PM IST

ಬೆಂಗಳೂರು:ರಾಜ ರಾಜೇಶ್ವರಿನಗರದಲ್ಲಿ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸದ್ಯ ಮೂರು ಪಕ್ಷಗಳು ಬಿರುಸಿನ ಪ್ರಚಾರ ಮಾಡುತ್ತಿವೆ. ಇದೀಗ ಡಿ.ಕೆ ಶಿವಕುಮಾರ್ ಆರ್​​​​​​ಆರ್ ನಗರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಕುಸುಮ ಪರ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ.

ನಟ ವಿನೋದ್ ಪ್ರಭಾಕರ್ ಮೆನೆಗೆ ಡಿಕೆಶಿ ಭೇಟಿ

ಈ ಸಂದರ್ಭದಲ್ಲಿ ರಾಜರಾಜೇಶ್ವರಿ ನಗರದಲ್ಲಿರೋ‌‌‌ ನಟ ವಿನೋದ್ ಪ್ರಭಾಕರ್ ಮನೆಗೆ ಭೇಟಿ ನೀಡಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಡಿ.ಕೆ ಶಿವಕುಮಾರ್, ವಿನೋದ್ ಪ್ರಭಾಕರ್ ಜೊತೆ ಮಾತುಕತೆ ಮಾಡಿದ್ದಾರೆ. ಆರ್​​ಆರ್ ನಗರ, ಬೈಎಲೆಕ್ಷನ್ ಪ್ರಚಾರಕ್ಕೆ ಬರುವಂತೆ ಕೇಳಿದ್ದಾರೆ. ಹಾಗೇ ವಿನೋದ್ ಪ್ರಭಾಕರ್ ಮನೆಯಲ್ಲಿ ಡಿ.ಕೆ ಶಿವಕುಮಾರ್ ಭೋಜನ ಕೂಡ ಸವಿದಿದ್ದಾರೆ.

ನಟ ವಿನೋದ್ ಪ್ರಭಾಕರ್ ಮನೆಯಲ್ಲಿ ಡಿಕೆ ಶಿವಕುಮಾರ್ ಭೋಜನ

ಇದೇ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ವಿನೋದ್ ಪ್ರಭಾಕರ್​​​ಗೆ ಆಫರ್ ನೀಡಿದ್ದಾರೆ ಎನ್ನಲಾಗಿದೆ. ಆದರೆ ವಿನೋದ್ ಪ್ರಭಾಕರ್ ಯೋಚನೆ ಮಾಡಿ ತಿಳಿಸುತ್ತೇನೆ ಅಂತಾ ಶಿವಕುಮಾರ್ ಬಳಿ ಹೇಳಿದ್ದಾರೆ ಅಂತಾ ವಿನೋದ್ ಪ್ರಭಾಕರ್ ಆಪ್ತ ಮೂಲಗಳು ತಿಳಿಸಿವೆ.

ನಟ ವಿನೋದ್ ಪ್ರಭಾಕರ್ ಮನೆಯಲ್ಲಿ ಡಿಕೆ ಶಿವಕುಮಾರ್ ಭೋಜನ

ABOUT THE AUTHOR

...view details