ಬೆಂಗಳೂರು: ಕೆಪಿಸಿಸಿ ಉಪಾಧ್ಯಕ್ಷ ಬಿಎಲ್ ಶಂಕರ್ಗೆ ಪಕ್ಷದಲ್ಲಿ ಮತ್ತೊಮ್ಮೆ ಉನ್ನತ ಸ್ಥಾನ ಸಿಗುವ ಲಕ್ಷಣ ಗೋಚರಿಸಿದೆ. ಬಿಎಲ್ ಶಂಕರ್ ನಿವಾಸಕ್ಕೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ರಿದ ಈ ಕುರಿತು ಭರವಸೆ ಸಿಕ್ಕಿದೆ ಎಂಬ ಮಾಹಿತಿ ಲಭಿಸಿದೆ.
ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವರಾದ ಎಸ್ಎಂ ಕೃಷ್ಣ ಅವರ ಆಪ್ತ ವಲಯದಲ್ಲಿ ಬರುವ ಉಭಯ ನಾಯಕರು ಹಲವು ವಿಚಾರಗಳ ಕುರಿತು ಸುದೀರ್ಘ ಮಾತುಕತೆ ನಡೆಸಿದ್ದಾರೆ. ಪಕ್ಷ ಮರು ಸಂಘಟಿಸುವ ಹಾಗೂ ತಳಮಟ್ಟದಿಂದ ಕಟ್ಟಿ ಬೆಳೆಸುವ ಕಾರ್ಯದಲ್ಲಿ ನಿಮ್ಮ ಸಹಕಾರ ಬೇಕೆಂದು ಶಂಕರ್ಗೆ ಶಿವಕುಮಾರ್ ಇದೇ ಸಂದರ್ಭ ಮನವಿ ಮಾಡಿದ್ದಾರೆ.
ಬಿಎಲ್ ಶಂಕರ್ ಭೇಟಿ ಮಾಡಿದ ಡಿಕೆಶಿ ಸಾಕಷ್ಟು ಆಪ್ತರಾಗಿರುವ ಡಿಕೆಶಿ ಹಾಗೂ ಬಿಎಲ್ ಶಂಕರ್ ಎಸ್ಎಂ ಕೃಷ್ಣ ಕಾಂಗ್ರೆಸ್ ಪಕ್ಷದಲ್ಲಿ ಉತ್ತುಂಗ ಸ್ಥಾನದಲ್ಲಿದ್ದಾಗ ಆಯಕಟ್ಟಿನ ಸ್ಥಾನಗಳಲ್ಲಿದ್ದು ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ಎಸ್ಎಮ್ಕೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಸಂದರ್ಭ ಬಿಎಲ್ ಶಂಕರ್ ಕೂಡಾ ಅವರೊಂದಿಗೆ ತೆರಳುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಕಾಂಗ್ರೆಸ್ ಮೇಲಿನ ನಿಷ್ಠೆಗೆ ಅವರು ಕಾಂಗ್ರಸ್ ಪಕ್ಷದಲ್ಲಿಯೆ ಉಳಿದುಕೊಂಡಿದ್ದರು.
ಆದರೆ ಕೆಪಿಸಿಸಿ ಸಾರಥ್ಯ ವಹಿಸಿಕೊಂಡಿದ್ದ ದಿನೇಶ್ ಗುಂಡೂರಾವ್ರಿಂದ ಶಂಕರ್ಗೆ ಯಾವುದೇ ಮಹತ್ವದ ಜವಾಬ್ದಾರಿ ಸಿಕ್ಕಿರಲಿಲ್ಲ. ಕೆಪಿಸಿಸಿ ಉಪಾಧ್ಯಕ್ಷರಾಗಿದ್ದರೂ, ಹೇಳಿಕೊಳ್ಳುವಂತಹ ಗೌರವವೇನೂ ಸಿಗುತ್ತಿರಲಿಲ್ಲ. ಇದರಿಂದ ಅವರು ಪಕ್ಷದ ಚಟುವಟಿಕೆಗಿಂತ ಚಿತ್ರಕಲಾ ಪರಿಷತ್ ಅಧ್ಯಕ್ಷರಾಗಿ ಆ ಚಟುವಟಿಕೆಯಲ್ಲಿಯೇ ಹೆಚ್ಚಾಗಿ ತೊಡಗಿಕೊಂಡಿದ್ದರು.
ಇದೀಗ ಡಿಕೆ ಶಿವಕುಮಾರ್ಗೆ ಪಕ್ಷದ ಸಾರಥ್ಯ ವಹಿಸಿರುವ ಹಿನ್ನೆಲೆ ಬಿಎಲ್ ಶಂಕರ್ಗೆ ಉನ್ನತ ಸ್ಥಾನ ಸಿಗಲಿದೆ ಎಂಬ ಮಾತು ಕೇಳಿಬಂದಿತ್ತು. ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥರಾಗುವ ಸಾಧ್ಯತೆ ಇದೆ ಎಂದು ಎರಡು ದಿನಗಳ ಹಿಂದೆ ಈಟಿವಿ ಭಾರತ ಕೂಡ ಸುದ್ದಿ ಪ್ರಕಟಿಸಿತ್ತು.
ಅಧಿಕಾರ ಮತ್ತೊಮ್ಮೆ ಬಿಎಲ್ ಶಂಕರ್ ಅರಸಿ ಬಂದಿದೆ ಎಂಬ ಮಾತು ಕೇಳಿಬರುತ್ತಿದೆ. ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಲು ಬಿಎಲ್ ಶಂಕರ್ ಹಿಂದೇಟು ಹಾಕಿದರೆ ಇನ್ನಾವುದಾದರೂ ಮಹತ್ವದ ಜವಾಬ್ದಾರಿಯನ್ನು ಅವರಿಗೆ ನೀಡುವ ಯತ್ನ ಶಿವಕುಮಾರ್ ನಡೆಸಿದ್ದಾರೆ. ಪಕ್ಷದಲ್ಲಿ ಬಹುತೇಕ ಎಲ್ಲಾ ಸಮಿತಿಗಳು ಹಾಗೂ ಹುದ್ದೆಗಳನ್ನು ವಿಸರ್ಜಿಸಲಾಗಿದ್ದು, ಹೊಸ ಹುದ್ದೆ ಹಾಗೂ ಸಮಿತಿಯ ಪದಾಧಿಕಾರಿಗಳ ನೇಮಕ ಆಗಬೇಕಿದೆ.
ಈ ಸಂದರ್ಭ ಬಿಎಲ್ ಶಂಕರ್ ಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಇಲ್ಲವೆ ಇತರೆ ಯಾವುದೇ ಉನ್ನತ ಹುದ್ದೆ ಸಿಕ್ಕರೂ ಅಚ್ಚರಿಯಿಲ್ಲ. ಬಿಎಲ್ ಶಂಕರ್ಗೆ ಮತ್ತೊಮ್ಮೆ ಕಾಂಗ್ರೆಸ್ನಲ್ಲಿ ಆಯಕಟ್ಟಿನ ಸ್ಥಾನ ಸಿಕ್ಕು ಗೌರವಯುತವಾಗಿ ನಡೆಸಿಕೊಳ್ಳುವ ದಿನ ದೂರವೇನೂ ಇಲ್ಲ ಎಂಬ ಮಾತು ಕೇಳಿಬರುತ್ತಿದೆ.