ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರದ ದೇವಾಲಯ ಹಾಗೂ ಚರ್ಚ್ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ರಾಜರಾಜೇಶ್ವರಿ ನಗರದ ಬೆಮಲ್ ಬಡಾವಣೆಯ ಶ್ರೀ ಬೀರೇಶ್ವರ ಸ್ವಾಮಿ ದೇಗುಲಕ್ಕೆ ಮೊದಲು ತೆರಳಿ ಪೂಜೆ ಸಲ್ಲಿಸಿದರು.
ನಂತರ ಮಾಧ್ಯಮದವರ ಜತೆ ಮಾತನಾಡಿ, ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅಂತಾರೆ. ಡಿಕೆ ಶಿವಕುಮಾರ್ ಹಿಂದೆ ಯಾರು ಇಲ್ಲ ಅಂತಾರೆ. ಹೌದು ನನ್ನ ಹಿಂದೆ ಯಾರು ಇಲ್ಲ. ನಾನು ಇರೋದು ಒಬ್ನೇ, ಹುಟ್ಟುವಾಗಲೂ ಬಂದಿದ್ದು ನಾನೊಬ್ನೇ. ಸಾಯುವಾಗಲೂ ನಾನೊಬ್ನೇ. ಅವರು ಅವಾಗ ಫಿಲ್ಮ್ ಡೈರೆಕ್ಟರ್, ಪ್ರೊಡ್ಯುಸರ್, ಇವಾಗ ನಟರಾಗಿದ್ದಾರೆ, ಅವರಿಗೆ ನಾನು ಹಾರೈಸುತ್ತೇನೆ ಎಂದು ವ್ಯಗ್ಯವಾಡಿದ್ದಾರೆ.
ಮುನಿರತ್ನ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ ಪಾರ್ಟಿ ಬಿಟ್ಟು ಹೋಗಿರೋರು ಏನೇನು ಮಾತನಾಡಿದ್ದಾರೋ ಗೊತ್ತಿಲ್ಲ. ಬಹಳ ಮಂದಿ ಶಾಸಕರು, ಮಂತ್ರಿಗಳು ಏನೇನೋ ಮಾತನಾಡಿದ್ದಾರೆ. ಇವಾಗ ಆ ಬಗ್ಗೆ ನಾನು ವ್ಯಾಖ್ಯಾನ ಮಾಡಲು ಹೋಗಲ್ಲ. ನನ್ನ ರಕ್ತವೇ ಕಾಂಗ್ರೆಸ್, ನನ್ನ ಉಸಿರೇ ಕಾಂಗ್ರೆಸ್ ಅಂತಾ ಮುನಿರತ್ನ ಹೇಳಿಲ್ವಾ..? ಎಂದರು.
ಪ್ರಚಾರ ಕಾರ್ಯಕ್ಕೆ ತಡೆ ನೀಡುತ್ತಿದ್ದಾರೆ ಎಂದರೆ ರಾಜ್ಯದ ಮುಖ್ಯಮಂತ್ರಿಗೆ ಯಾವ ರೀತಿಯ ಆತಂಕವಿದೆ ಎಂಬುದನ್ನು ನೋಡಿ. ಅವರು ಯಾಕೆ ಅಳಬೇಕು, ಇವಾಗ ಅಳುವಂತದ್ದು ಏನು ತೊಂದರೆ ಆಗಿದೆ. ವೋಟರ್ ಐಡಿ ಪ್ರಿಂಟ್ ಮಾಡಿ ಹಣ ಹಂಚುತ್ತಿರುವುದುನಿಜ. ನಕಲಿ ವೋಟರ್ ಐಡಿ ಬಗ್ಗೆ ಇದೆ ಮುನಿರತ್ನ ಬಗ್ಗೆ ಮೋದಿ, ಯಡಿಯೂರಪ್ಪ ಮಾತಾಡಿದ್ದಾರೆ. ಇವಾಗ ಅವರನ್ನು ಅವರು ಸಮರ್ಥನೆ ಮಾಡಿಕೊಳ್ಳಲಿ ಎಂದು ಮುನಿರತ್ನ ಹಾಗೂ ಸಂಪುಟ ಸಚಿವರಿಗೆ ಡಿಕೆಶಿ ತಿರುಗೇಟು ನೀಡಿದರು.
ಇದಾದ ಬಳಿಕ ರಾಜರಾಜೇಶ್ವರಿನಗರದ ವೀನಸ್ ಚರ್ಚ್ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ನಂತರ ಪಾದ್ರಿಗಳೊಂದಿಗೆ ಚರ್ಚಿಸಿದರು.