ಬೆಂಗಳೂರು: ಪ್ರಾಣ ರಕ್ಷಣೆಗೆ ಚಿರತೆಯೊಂದಿಗೆ ಸೆಣಸಿ ಗೆದ್ದ ಅರಸೀಕೆರೆ ಯುವಕನನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶಂಸಿಸಿದ್ದಾರೆ. ಟ್ವೀಟ್ ಮೂಲಕ ಯುವಕನ ಕಾರ್ಯವನ್ನು ಶ್ಲಾಘಿಸಿದ್ದಾರೆ.
ತಾಯಿ ಪ್ರಾಣ ಕಾಪಾಡಲು ಚಿರತೆಯೊಡನೆ ಸೆಣಸಿ ಕೊಂದ ಅರಸೀಕೆರೆಯ ಕಿರಣ್ನ ಶೌರ್ಯವನ್ನು ನಾನು ಪ್ರಶಂಸಿಸುತ್ತೇನೆ. ಈ ವೇಳೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ತಾಯಿ -ಮಗನನ್ನು ಭೇಟಿಯಾಗುವಂತೆ ಹಾಸನ ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದೇನೆ. ಅವರ ಚಿಕಿತ್ಸೆಗೆ 25,000 ರೂ. ಹಣವನ್ನೂ ತಲುಪಿಸಲಿದ್ದೇನೆ ಎಂದು ತಿಳಿಸಿದ್ದಾರೆ.