ಕರ್ನಾಟಕ

karnataka

ETV Bharat / state

ನಾಳೆ ಡಿ.ಕೆ ಶಿವಕುಮಾರ್​​​ ಪುತ್ರಿ ಐಶ್ವರ್ಯಾ ನಿಶ್ಚಿತಾರ್ಥ - ಡಿಕೆಶಿ ಮಗಳು ಹಾಗೂ ಕೆಫೆ ಕಾಫಿ ಡೇ ಮಾಲೀಕರಾಗಿದ್ದ ಸಿದ್ದಾರ್ಥ್​​​ ಮಗನ ನಿಶ್ಚಿತಾರ್ಥ

ಮುಂಜಾಗ್ರತಾ ಕ್ರಮವಾಗಿ‌ ಹೋಟೆಲ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಯಾವುದೇ ಕಾರ್ಯಕರ್ತರು ಮತ್ತು ಮುಖಂಡರು ಏರ್ಪೋರ್ಟ್​​​ಗೆ ಆಗಮಿಸಿ ಗುಂಪು ಗೂಡದಂತೆ ಪೊಲೀಸರು ಎಚ್ಚರ ವಹಿಸುತ್ತಿದ್ದಾರೆ..

dk shivakumar daughter engagement tomorrow
ನಾಳೆ ಡಿ.ಕೆ ಶಿವಕುಮಾರ್​​​ ಪತ್ರಿ ಐಶ್ವರ್ಯಾ ನಿಶ್ಚಿತಾರ್ಥ

By

Published : Nov 18, 2020, 8:36 PM IST

ದೇವನಹಳ್ಳಿ: ಮಾಜಿ‌ ಸಜಿವ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಗಳು ಐಶ್ವರ್ಯಾ ಹಾಗೂ ಕಾಫಿ ಡೇ ಮಾಲೀಕ ದಿವಂಗತ ಸಿದ್ದಾರ್ಥ ಹೆಗಡೆ ಪುತ್ರ ಅಮರ್ತ್ಯ ಹೆಗಡೆ ಜೊತೆ ನಾಳೆ ವಿವಾಹ ನಿಶ್ಚಿತಾರ್ಥ ನೆರವೇರಲಿದೆ. ನಿಶ್ಚಿತಾರ್ಥಕ್ಕಾಗಿ ಕೆಂಪೇಗೌಡ ಏರ್ಪೋರ್ಟ್​​ನ ಟರ್ಮಿನಲ್ ಬಳಿಯಿರೋ ತಾಜ್ ಹೋಟೆಲ್ ಸಿದ್ದಗೊಳ್ಳುತ್ತಿದೆ.

ನಾಳೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಮುಂಭಾಗದಲ್ಲಿರೋ ತಾಜ್ ಹೋಟೆಲ್​​ನಲ್ಲಿ ಸರಳವಾಗಿ ನಿಶ್ಚಿತಾರ್ಥ ನೆರವೆರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಜತೆಗೆ ಆಯ್ದ ವ್ಯಕ್ತಿಗಳಿಗೆ ಮಾತ್ರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದ್ದು, ಸಿಎಂ ಸೇರಿದಂತೆ ದೇಶ ಮತ್ತು ರಾಜ್ಯದ ಪ್ರಮುಖ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.

ನಾಳೆ ಡಿ.ಕೆ ಶಿವಕುಮಾರ್​​​ ಪುತ್ರಿ ಐಶ್ವರ್ಯಾ ನಿಶ್ಚಿತಾರ್ಥ

ಡಿ.ಕೆ.ಶಿವಕುಮಾರ್ ಮಗಳ ನಿಶ್ಚಿತಾರ್ಥ ಹಿನ್ನೆಲೆಯಲ್ಲಿ ಹೋಟೆಲ್​​ನ ಒಳ ಭಾಗದಲ್ಲಿ ಈಗಾಗಲೇ ಸಕಲ ಸಿದ್ಧತೆಗಳನ್ನ ಮಾಡಿಕೊಳ್ತಿದ್ದು, ಬೇರೆ ರಾಜ್ಯಗಳಿಂದ ನಿಶ್ಚಿತಾರ್ಥಕ್ಕೆ ಅತಿಥಿಗಳು ಆಗಮಿಸುವ ಸಾಧ್ಯತೆ ಇದೆ.

ಮುಂಜಾಗ್ರತಾ ಕ್ರಮವಾಗಿ‌ ಹೋಟೆಲ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಯಾವುದೇ ಕಾರ್ಯಕರ್ತರು ಮತ್ತು ಮುಖಂಡರು ಏರ್ಪೋರ್ಟ್​​​ಗೆ ಆಗಮಿಸಿ ಗುಂಪು ಗೂಡದಂತೆ ಪೊಲೀಸರು ಎಚ್ಚರ ವಹಿಸುತ್ತಿದ್ದಾರೆ.

ABOUT THE AUTHOR

...view details