ಕರ್ನಾಟಕ

karnataka

ETV Bharat / state

ವೈವಾಹಿಕ ಬದುಕಿಗೆ ಕಾಲಿಟ್ಟ ಐಶ್ವರ್ಯಾ- ಅಮರ್ತ್ಯ: ಯುವ ಜೋಡಿಯ ಕಲ್ಯಾಣಕ್ಕೆ ಗಣ್ಯರು ಸಾಕ್ಷಿ - ವೈವಾಹಿಕ ಬದುಕಿಗೆ ಕಾಲಿಟ್ಟ ಡಿಕೆಶಿ ಪುತ್ರಿ

ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ, ಕಾಫಿ ಡೇ ಮಾಲೀಕರಾದ ದಿ. ಸಿದ್ದಾರ್ಥ ಹೆಗ್ಡೆ ಪುತ್ರ ಅಮರ್ತ್ಯ ಹೆಗ್ಡೆ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರ ಮದುವೆ ಸಮಾರಂಭಕ್ಕೆ ರಾಜಕೀಯ ಗಣ್ಯರು, ವಿವಿಧ ಮಠದ ಮಠಾಧೀಶರುಗಳು ಸೇರಿದಂತೆ ಅನೇಕರು ಭಾಗಿಯಾಗಿ ನವಜೋಡಿಗೆ ಹಾರೈಸುತ್ತಿದ್ದಾರೆ.

ವೈವಾಹಿಕ ಬದುಕಿಗೆ ಕಾಲಿಟ್ಟ ಡಿಕೆಶಿ ಪುತ್ರಿ ಐಶ್ವರ್ಯಾ-ಉದ್ಯಮಿ ಅಮಾರ್ಥ್ಯ ಹೆಗ್ಡೆ
DK Shivakumar daughter Aishwarya and Amartya get married

By

Published : Feb 14, 2021, 11:23 AM IST

Updated : Feb 14, 2021, 2:16 PM IST

ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಇಂದು ಗುರು ಹಿರಿಯರ ಸಮ್ಮುಖದಲ್ಲಿ ಉದ್ಯಮಿ ಅಮರ್ತ್ಯ ಹೆಗ್ಡೆಯವರ ಕೈ ಹಿಡಿದರು.

ಎಸ್.ಎಂ.ಕೃಷ್ಣ ಮೊಮ್ಮಗ ಹಾಗೂ ಕಾಫಿ ಡೇ ಮಾಲೀಕರಾದ ದಿ. ಸಿದ್ದಾರ್ಥ ಹೆಗ್ಡೆ ಪುತ್ರ ಅಮರ್ತ್ಯ ಹೆಗ್ಡೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ವಿವಾಹ ಗುರುಹಿರಿಯರ ನಿಶ್ಚಯದಂತೆ ಬೆಂಗಳೂರಿನ ವೈಟ್ ಫೀಲ್ಡ್​​ನ ಖಾಸಗಿ ಹೋಟೆಲ್​​ನಲ್ಲಿ ಒಕ್ಕಲಿಗ ಸಂಪ್ರದಾಯದ ಪ್ರಕಾರ ಶಾಸ್ತ್ರೋಕ್ತವಾಗಿ ಜರುಗಿತು.

ಡಿಕೆಶಿ ಪುತ್ರಿ ವಿವಾಹ ಸಮಾರಂಭ

ವಿವಾಹ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, ದಿಗ್ವಿಜಯ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾದರು. ವರ್ಷಗಳ ಹಿಂದೆಯೇ ಎರಡು ಕುಟುಂಬಗಳು ಸ್ನೇಹವನ್ನು ಸಂಬಂಧವಾಗಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದರು. ಇಂದು ಶುಭಗಳಿಗೆ ಕೂಡಿ ಬಂದಿದ್ದು, ಯುವ ದಂಪತಿ ವೈವಾಹಿಕ ಬದುಕಿಗೆ ಕಾಲಿರಿಸಿದ್ದಾರೆ.

ಡಿಕೆಶಿ ಪುತ್ರಿ ವಿವಾಹ ಸಮಾರಂಭಕ್ಕೆ ಆಗಮಿಸಿರುವ ವಿವಿಧ ಮಠದ ಮಠಾಧೀಶರುಗಳು

ಸಿಎಂ ಭಾಗಿಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ನೂತನ ದಂಪತಿಗೆ ಶುಭ ಹಾರೈಸಿದರು. ಸಿಎಂ ಕಾಲಿಗೆ ನಮಸ್ಕರಿಸಿದ ನವ ದಂಪತಿ ಅವರ ಆಶೀರ್ವಾದ ಪಡೆದರು. ಬಳಿಕ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಕೈ ಕುಲುಕಿದ ಯಡಿಯೂರಪ್ಪ ಕೆಲಕಾಲ ಅವರೊಂದಿಗೆ ಆತ್ಮೀಯವಾಗಿ ಸಮಾಲೋಚನೆ ನಡೆಸಿದರು.

ಮೊಮ್ಮಗನ ಮದುವೆ ಸಂಭ್ರಮದಲ್ಲಿ ಎಸ್​.ಎಮ್​.ಕೃಷ್ಣರವರು

ಸಮಾಜದ ವಿವಿಧ ಕ್ಷೇತ್ರದ ಗಣ್ಯರು, ಧಾರ್ಮಿಕ ಮುಖಂಡರು ಹಾಗೂ ರಾಜಕೀಯ ನಾಯಕರು ಸಾಕಷ್ಟು ಸಂಖ್ಯೆಯಲ್ಲಿ ವಿವಾಹ ಸಮಾರಂಭಕ್ಕೆ ಆಗಮಿಸಿದ್ದರು. ನಾಳೆ ಪ್ರೆಸ್ಟೀಜ್ ಗಾಲ್ಫ್ ಶೈರ್​​ನಲ್ಲಿ ಆರತಕ್ಷತೆ ಜರುಗಲಿದ್ದು, ಫೆ.20 ರಂದು ಅರಮನೆ ಮೈದಾನದಲ್ಲಿ ಬೀಗರ ಔತಣ ನಡೆಯಲಿದೆ.

ಡಿಕೆಶಿ ಪುತ್ರಿ ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ಗಣ್ಯರು
Last Updated : Feb 14, 2021, 2:16 PM IST

ABOUT THE AUTHOR

...view details