ಬೆಂಗಳೂರು: ಕುಸ್ತಿ ಮಾಡಲು ಜನ ಬೇಕಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ರೌಡಿಶೀಟರ್ಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟೀಕಿಸಿದರು. ನಗರದಲ್ಲಿ ಮಾತನಾಡಿದ ಅವರು, ಅವರಿಗೆ ಒಳ್ಳೆಯ ಮುಖ ಬೇಕಲ್ವಾ? ಹಾಗಾಗಿ ರೌಡಿಶೀಟರ್ಗಳಿಗೆ ಮನ್ನಣೆ ನೀಡುತ್ತಿದ್ದಾರೆ ಎಂದು ಮೂದಲಿಸಿದ ಅವರು, ಬಿಜೆಪಿಗೆ ಯಾವ ಸಿದ್ದಾಂತವಿದೆ ಎಂದು ಪ್ರಶ್ನಿಸಿದರು.
'ಬಿಜೆಪಿಗೆ ಕುಸ್ತಿ ಮಾಡಲು ಜನ ಇಲ್ಲ, ಅದಕ್ಕಾಗಿ ರೌಡಿಶೀಟರ್ಗಳನ್ನು ಸೇರಿಸುತ್ತಿದ್ದಾರೆ' - ಬಿಜೆಪಿ ರೌಡಿಶೀಟರ್ಗಳನ್ನು ಸೇರ್ಪಡೆಗೊಳಿಸುತ್ತಿದೆ
ಜನರ ಭಾವನೆಗಳ ಮೇಲೆ ರಾಜಕೀಯ ಮಾಡುವುದು ಬಿಜೆಪಿ ಸಿದ್ದಾಂತ. ಜನರಿಗೆ ಒಳ್ಳೆದು ಮಾಡಬೇಕು ಎಂಬುದು ಕಾಂಗ್ರೆಸ್ ಸಿದ್ದಾಂತ- ಡಿ ಕೆ ಶಿವಕುಮಾರ್
dk-shivakumar-reaction-on-rowdy-sheeter-fighter-ravi-joins-bjp
ಭಾವನೆಗೂ ಬದುಕಿಗೂ ವ್ಯತ್ಯಾಸವಿದೆ. ಬಿಜೆಪಿಯವರು ಭಾವನೆಗಳ ಮೇಲೆ ರಾಜಕೀಯ ಮಾಡುತ್ತಾರೆ. ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡಲ್ಲ. ಜನರ ಭಾವನೆಗಳ ಮೇಲೆ ರಾಜಕೀಯ ಮಾಡುವುದು ಬಿಜೆಪಿ ಸಿದ್ದಾಂತ. ಜನರಿಗೆ ಒಳ್ಳೆದು ಮಾಡಬೇಕು ಎಂಬುದು ಕಾಂಗ್ರೆಸ್ ಸಿದ್ದಾಂತ ಎಂದರು.
ಇದನ್ನೂ ಓದಿ: ಯಾವುದೇ ರೌಡಿಗಳನ್ನು ನಾವು ಪಕ್ಷಕ್ಕೆ ಸೇರಿಸಿಕೊಂಡಿಲ್ಲ: ಬೊಮ್ಮಾಯಿ