ಬೆಂಗಳೂರು: ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಧಾನಸೌಧದ ಮೊಗಸಾಲೆಯಲ್ಲಿ ಪರಸ್ಪರ ಅಭಿನಂದಿಸಿಕೊಂಡರು.
ಕೆಪಿಸಿಸಿ ನೂತನ ಸಾರಥಿಗೆ ಸಿದ್ದರಾಮಯ್ಯ ಅಭಿನಂದನೆ - ಬೆಂಗಳೂರು ಸುದ್ದಿ
ಕೆಪಿಸಿಸಿಗೆ ಡಿ. ಕೆ. ಶಿವಕುಮಾರ್ ನೂತನ ಸಾರಥಿಯಾಗಿದ್ದಾರೆ. ಇದರ ಆದೇಶ ಪ್ರತಿ ಹೊರಬೀಳುತ್ತಿದ್ದಂತೆ ವಿಧಾನಸೌಧದ ಮೊಗಸಾಲೆಯಲ್ಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಹೂವು ನೀಡಿ ಶುಭ ಕೋರಿದರು. ಆಗ ಸಿದ್ದರಾಮಯ್ಯ ಮಾತನಾಡಿ, ನಾನೇ ನಿನಗೆ ಶುಭಾಶಯ ಕೋರಬೇಕು ಕಣಯ್ಯ ಎಂದು ನಗೆ ಬೀರಿದರು.
ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕರ ಸ್ಥಾನ ಮುಂದುವರೆದಿದ್ದು, ನೂತನ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ನಿಯೋಜನೆಗೊಂಡಿದ್ದಾರೆ. ಇದರ ಆದೇಶ ಪ್ರತಿ ಹೊರಬೀಳುತ್ತಿದ್ದಂತೆ ವಿಧಾನಸೌಧದ ಮೊಗಸಾಲೆಯಲ್ಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಹೂವು ನೀಡಿ ಶುಭ ಕೋರಿದರು.
ಇದಕ್ಕೆ ಪ್ರತಿಯಾಗಿ ನಾನು ಈಗಾಗಲೇ ಪ್ರತಿಪಕ್ಷ ನಾಯಕ ಹಾಗು ಸಿಎಲ್ಪಿ ನಾಯಕನಾಗಿದ್ದೇನೆ ಅದನ್ನು ಮುಂದುವರೆಸಿದ್ದಾರೆ ಅಷ್ಟೇ. ನಾನೇ ನಿಂಗೆ ಶುಭಾಶಯ ಹೇಳಬೇಕಯ್ಯ ಎನ್ನುತ್ತಾ ಸಿದ್ದರಾಮಯ್ಯ ಅಭಿನಂದಿಸಿದರು. ನಂತರ ಪರಸ್ಪರ ಶುಭ ಕೋರಿ ಸದನದ ಒಳಗೆ ಪ್ರವೇಶಿಸಿದರು.