ಬೆಂಗಳೂರು :ಕೊರೊನಾ ಜಾಗೃತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೈಗೊಂಡ ದೂರವಾಣಿ ಕರೆ ಮುಂಚಿತವಾಗಿ ನೀಡುವ ಸಂದೇಶವನ್ನು ಮಾಜಿ ಸಚಿವ ಡಿ ಕೆ ಶಿವಕುಮಾರ್ ಖಂಡಿಸಿ ಟ್ವೀಟ್ ಮಾಡಿದ್ದಾರೆ.
ದೂರವಾಣಿ ಮೂಲಕ ಕೊರೊನಾ ಜಾಗೃತಿಗೆ ಮಾಜಿ ಸಚಿವ ಡಿಕೆಶಿ ಖಂಡನೆ..
ಕೊರೊನಾ ಜಾಗೃತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೈಗೊಂಡ ದೂರವಾಣಿ ಕರೆ ಮುಂಚಿತವಾಗಿ ನೀಡುವ ಸಂದೇಶವನ್ನು ಮಾಜಿ ಸಚಿವ ಡಿ ಕೆ ಶಿವಕುಮಾರ್ ಖಂಡಿಸಿ ಟ್ವೀಟ್ ಮಾಡಿದ್ದಾರೆ.
“ಎಮ್ಮೆಗೆ ಜ್ವರ ಬಂದರೆ ಎತ್ತಿಗೆ ಬರೆ’’ ಹಾಕಿದಂತಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಲ್ಲಾ ದೂರವಾಣಿ ಕರೆಗಳ ಆರಂಭದಲ್ಲಿ ನೀಡುತ್ತಿರುವ ಕರೋನಾ ಕುರಿತ ಮುನ್ನೆಚ್ಚರಿಕೆ ಸಂದೇಶದಿಂದ ದೇಶದ ಜನ ತಲ್ಲಣಿಸಿ ಹೋಗಿದ್ದಾರೆ. ಹಣ್ಣು, ತರಕಾರಿಯಿಂದ ಹಿಡಿದು ಷೇರುಗಳವರೆಗೆ ಸರ್ವಮಾರುಕಟ್ಟೆಯೂ ಪಾತಾಳಕ್ಕೆ ಕುಸಿದಿದೆ. ದೇಶದ ಆರ್ಥಿಕ ವ್ಯವಸ್ಥೆ ಮತ್ತಷ್ಟು ಹದಗೆಟ್ಟಿದೆ. ಸಮಸ್ಯೆ ಇರುವೆಡೆ ಕ್ರಮ ಕೈಗೊಳ್ಳಬೇಕೇ ಹೊರತು, ಈ ರೀತಿ ಸಾಮೂಹಿಕವಾಗಿ ಜನರನ್ನು ಹೆದರಿಸುವುದು ಸಲ್ಲದು ಎಂದಿದ್ದಾರೆ.
ಸರ್ಕಾರ ಕೊರೊನಾ ತಡೆ ಹಾಗೂ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು. ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿರುವ ಸಂದರ್ಭದಲ್ಲಿ ಜನರಲ್ಲಿ ಇನ್ನಷ್ಟು ಭೀತಿ ಮೂಡಿಸುವ ಕಾರ್ಯ ಆಗಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.