ಕರ್ನಾಟಕ

karnataka

ETV Bharat / state

ಬಿಟ್ಟು ಹೋದವರ ರಾಜಕೀಯ ಸಮಾಧಿ ಆಗಲಿದೆ ಎಂದು ಹೇಳಿದ್ದ ಮಾತು ನಿಜವಾಗಿದೆ: ಡಿಕೆಶಿ - ಡಿಕೆ ಶಿವಕುಮಾರ್​ ಲೇಟೆಸ್ಟ್​ ನ್ಯೂಸ್

ಸಿಎಂ ಯಡಿಯೂರಪ್ಪನವರು ಹೊಸ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಇದರಿಂದ ಕೆಲ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದು, ಪಕ್ಷಕ್ಕೆ ಕೈ ಕೊಟ್ಟ ನೀವೆಲ್ಲ ರಾಜಕೀಯ ಸಮಾಧಿ ಆಗುತ್ತೀರಾ ಎಂದು ನಾನು ವಿಧಾನಸಭೆಯಲ್ಲಿ ಮೊದಲೆ ಹೇಳಿದ್ದೆ, ಖಾತೆ ಹಂಚಿಕೆ ನೋಡಿದಾಗ ಅದು ಸ್ಪಷ್ಟವಾಗುತ್ತಿದೆ ಎಂದಿದ್ದಾರೆ.

ಡಿಕೆ ಶಿವಕುಮಾರ್​
DK Shivakumar

By

Published : Jan 22, 2021, 2:27 PM IST

Updated : Jan 22, 2021, 2:49 PM IST

ಬೆಂಗಳೂರು:ಪಕ್ಷಕ್ಕೆ ಕೈ ಕೊಟ್ಟ ನೀವೆಲ್ಲ ರಾಜಕೀಯ ಸಮಾಧಿ ಆಗುತ್ತೀರಾ ಎಂದು ನಾನು ವಿಧಾನಸಭೆಯಲ್ಲಿ ಮೊದಲೆ ಹೇಳಿದ್ದೆ. ಖಾತೆ ಹಂಚಿಕೆ ನೋಡಿದಾಗ ಅದು ಸ್ಪಷ್ಟವಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗ ಯಾವ ಯಾವ ಖಾತೆ ಕೊಟ್ಟಿದ್ದಾರೆ ಅಂತಾ ನೋಡಿ. ಐಸಿಯು, ಆಕ್ಸಿಜನ್​​​ನಲ್ಲಿ ಸರ್ಕಾರ ನಡೆಯುತ್ತಿದೆ. ಗೋಪಾಲಯ್ಯ, ಎಂಟಿಬಿ ನಾಗರಾಜ್, ನಾರಾಯಣಗೌಡ, ರೋಷನ್ ಬೇಗ್​​ ಕಥೆ ಏನಾಗಿದೆ ನೋಡಿ. ಎಂಟಿಬಿಗೆ ವಸತಿ ಖಾತೆ ಇತ್ತು. ಪಾಪ ಈಗ ಅವನು ಅಲ್ಲಿ ಬಾಟಲ್ ಮಾರಬೇಕಂತೆ. ಅವರೆನೆಲ್ಲ ಬಳಸಿ ಬಿಸಾಡಿದ್ದಾರೆ. ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ ಎಂದರು.

ಓದಿ: ಸಚಿವ ಸಂಪುಟ ವಿಸ್ತರಣೆ ನಿರಂತರ ಪ್ರಕ್ರಿಯೆ, ನನಗೆ ಯಾವುದೇ ಅಸಮಧಾನವಿಲ್ಲ ಎಂದ ಹೆಬ್ಬಾರ್

ಹಂ.ಪ ನಾಗರಾಜಯ್ಯ ಅವರು ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿದ್ದಾರೆ. ಧರ್ಮರಾಯನಂತೆ ಬಂದು, ದುರ್ಯೋಧನ ರೀತಿಯಲ್ಲಿ ಆಗಿದೆ ಎಂದಿದ್ದಾರೆ. ಸಾಹಿತ್ಯ ಪರಿಷತ್ತು ಏನು ಮಾಡುತ್ತಿದೆ. ಕನ್ನಡ ಸಂಘಟನೆಗಳು ಏವು ಮಾಡುತ್ತಿವೆ. ಇದು ಇಡೀ ಕನ್ನಡ ಸಾಹಿತ್ಯ ಲೋಕಕ್ಕೆ ಆಗಿರುವ ಅವಮಾನ. ಪ್ರಜಾಪ್ರಭುತ್ವದಲ್ಲಿ ಇವರ ವಿರುದ್ಧ ಮಾತಾಡಿದವರನ್ನು ಪೊಲೀಸ್ ಸ್ಟೇಷನ್​ನಲ್ಲಿ ಕೂರಿಸುತ್ತಾರೆ. ಹಂ.ಪ ನಾಗರಾಜಯ್ಯ ಅವರನ್ನು ಭೇಟಿ ಮಾಡುತ್ತೇನೆ. ನಾನು ಚಿಕ್ಕವನಿದ್ದಾಗಿನಿಂದ ಅವರನ್ನು ನೋಡಿದ್ದೇನೆ ಎಂದು ವಿವರಿಸಿದರು.

ಶಿವಮೊಗ್ಗದಲ್ಲಿ ಸ್ಫೋಟಕ ವಿಚಾರವಾಗಿ ಮಾತನಾಡಿ, ಇದಕ್ಕೆಲ್ಲ ಒಂದು ಮ್ಯಾನ್ಯುಯಲ್ ಪ್ರೊಸೆಸ್ ಇರುತ್ತದೆ. ಸಿಎಂಗೆ ತನಿಖೆಗೆ ಆಗ್ರಹ ಮಾಡಿದ್ದೇವೆ. ಇಂತಹ ವಾಹನಗಳಿಗೆ ಜಿಪಿಎಸ್ ಮಾಡಿಸಬೇಕು. ಇದರಿಂದ ಇಡೀ ಜಿಲ್ಲೆಗೆ ಆಘಾತವಾಗಿದೆ. ಇದಕ್ಕೆ ಯಾರು ಜವಾಬ್ದಾರಿ, ಹೈ ಲೆವೆಲ್ ತನಿಖೆ ಅಲ್ಲ, ಸಿಎಂ, ಸಚಿವರು ಅಲ್ಲಿಗೆ ಹೋಗಬೇಕು ಎಂದು ಆಗ್ರಹಿಸಿದರು.

Last Updated : Jan 22, 2021, 2:49 PM IST

ABOUT THE AUTHOR

...view details