ಬೆಂಗಳೂರು:ಡಿ.ಜೆ. ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಜಾಕೀರ್ ಅಣ್ಣನ ಮಗಳ ಮದುವೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಾಲ್ಗೊಂಡಿದ್ದರು. ಗಲಭೆ ಪ್ರಕರಣದ ಮತ್ತೊಬ್ಬ ಆರೋಪಿ ಸಂಪತ್ ರಾಜ್ ಕೂಡ ಮದುವೆಯಲ್ಲಿ ಭಾಗಿಯಾಗಿದ್ದರು.
ಡಿ.ಜೆ. ಹಳ್ಳಿ ಗಲಭೆ ಆರೋಪಿ ಜಾಕೀರ್ ಅಣ್ಣನ ಮಗಳ ಮದುವೆಯಲ್ಲಿ ಸಂಪತ್ ರಾಜ್ ಜೊತೆ ಡಿಕೆಶಿ ಭಾಗಿ ! - ಸಂಪತ್ ರಾಜ್ ಜೊತೆ ಡಿಕೆಶಿ
ಡಿ.ಜೆ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಜಾಕೀರ್ ಅಣ್ಣನ ಮಗಳ ಮದುವೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾಗಿಯಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಡಿಕೆ ಶಿವಕುಮಾರ್
ನಿನ್ನೆ ಅರಮನೆ ಮೈದಾನದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಪ್ರಮುಖ ಆರೋಪಿ ಜಾಕೀರ್ ಪಕ್ಕದಲ್ಲಿ ಕುಳಿತು ಊಟ ಮಾಡಿದ ಡಿ.ಕೆ. ಶಿವಕುಮಾರ್ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ.
ಕಳೆದ ವಾರ ಕಾರ್ಯಕ್ರಮವೊಂದರಲ್ಲಿ ಸಂಪತ್ ರಾಜ್ ಜೊತೆ ವೇದಿಕೆ ಹಂಚಿಕೊಂಡಿದ್ದ ಡಿ.ಕೆ. ಶಿವಕುಮಾರ್ ಇದೀಗ ಜಾಕೀರ್ ಜೊತೆ ಕುಳಿತು ಊಟ ಮಾಡಿದ್ದಾರೆ.
Last Updated : Mar 20, 2021, 2:43 PM IST