ಬೆಂಗಳೂರು: ಐಟಿ ಇಲಾಖೆ ನೋಟೀಸ್ ನಿಡಿದ್ದ ಹಿನ್ನೆಲೆಯಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಐಟಿ ಇಲಾಖೆಗೆ ಹಾಜರಾಗಿ, ವಾಪಸ್ ತೆರಳಿದ್ದಾರೆ.
ಆದಾಯ ತೆರಿಗೆ ಇಲಾಖೆ ನೋಟಿಸ್: ಐಟಿ ವಿಚಾರಣೆ ಮುಗಿಸಿ ವಾಪಸ್ ತೆರಳಿದ ಡಿಕೆಶಿ - ಐಟಿ ಇಲಾಖೆಗೆ ಡಿಕೆಶಿ ಹಾಜರು
ಹಾಜರಾಗದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಐಟಿ ಇಲಾಖೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಐಟಿ ಇಲಾಖೆಗೆ ಹಾಜರಾಗಿದ್ದರು.
ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದ್ದ ಕಾರಣ ಬೆಳಗ್ಗೆ 10:30ಕ್ಕೆ ಐಟಿ ಕಚೇರಿಗೆ ಬರಬೇಕಿದ್ದ ಡಿಕೆಶಿ, ಕ್ವೀನ್ಸ್ ರಸ್ತೆ ಬಳಿ ಇರುವ ಐಟಿ ಕಚೇರಿಗೆ ಮಧ್ಯಾಹ್ನ ಹಾಜರಾಗಿದ್ದಾರು. ಗೋಕಾಕ್ ಉಪ ಚುನಾವಣೆ ಪ್ರಚಾರ ಮೊಟಕುಗೊಳಿಸಿ ವಿಚಾರಣೆಗೆ ಹಾಜರಾಗಿದ್ದ ಡಿಕೆಶಿ, ವಿಚಾರಣೆ ನಂತರ ಯಾವುದೇ ಪ್ರತಿಕ್ರಿಯೆ ನೀಡದೆ ಕೈ ಮುಗಿದು ಹೋಗಿದ್ದಾರೆ.
ಆದಾಯ ತೆರಿಗೆ ಇಲಾಖೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಒಂದೇ ತಿಂಗಳಲ್ಲಿ 30 ನೋಟಿಸ್ ನೀಡಿತ್ತು. ಆದರೆ ಡಿಕೆಶಿ ಸಮಯಾವಕಾಶ ಕೇಳಿ ವಿಚಾರಣೆಗೆ ಹಿಂದೇಟು ಹಾಕಿದ್ದರು. ಇಂದು ಹಾಜರಾಗದೇ ಇದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಐಟಿ ಇಲಾಖೆ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಉಪ ಚುನಾವಣೆ ಪ್ರಚಾರ ಮೊಟಕುಗೊಳಿಸಿ ಐಟಿ ಕಚೇರಿಗೆ ಹಾಜರಾಗಿದ್ದರು.