ಬೆಂಗಳೂರು :ರಾಜ್ಯದ ವಿಧಾನಸಭೆ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ಜವಾಬ್ದಾರಿ ವಹಿಸಿಕೊಂಡವರು ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಉಪಚುನಾವಣೆ ಉಸ್ತುವಾರಿ ವಹಿಸಿಕೊಂಡವರು ತಕ್ಷಣ ಕಾರ್ಯಪ್ರವೃತ್ತರಾಗಿ : ಡಿಕೆಶಿ - ಕರ್ನಾಟಕ ಉಪ ಚುನಾವಣೆ
ಶಿರಾ ಹಾಗೂ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನ.3 ರಂದು ನಡೆಯಲಿದ್ದು, ಈ ಚುನಾವಣಾ ಪ್ರಚಾರ ಕಾರ್ಯ ಇನ್ನಿತರ ಜವಾಬ್ದಾರಿಗಳನ್ನು ಈಗಾಗಲೇ ತಮಗೆ ವಹಿಸಲಾಗಿದೆ. ತಾವುಗಳು ತಮಗೆ ನೀಡಲಾಗಿರುವ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಕಾರ್ಯಪ್ರವೃತ್ತರಾಗಿ ಇರುತ್ತೀರೆಂದು ಭಾವಿಸುತ್ತೇನೆ ಎಂದರು.
ಡಿಕೆಶಿ ಮನವಿ
ಶಿರಾ ಹಾಗೂ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನ.3 ರಂದು ನಡೆಯಲಿದೆ. ಈ ಚುನಾವಣಾ ಪ್ರಚಾರ ಕಾರ್ಯ ಸೇರಿದಂತೆ ಇನ್ನಿತರ ಜವಾಬ್ದಾರಿಗಳನ್ನು ಈಗಾಗಲೇ ತಮಗೆ ವಹಿಸಲಾಗಿದೆ. ತಾವುಗಳು ತಮಗೆ ನೀಡಲಾಗಿರುವ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದೀರಿ. ನಾಮಪತ್ರ ಸಲ್ಲಿಕೆ ಕಾರ್ಯಕ್ರಮವನ್ನು ಜನ ಸೆಳೆಯುವ ವಿಶೇಷ ಸಂದರ್ಭವನ್ನಾಗಿಸಲು ಅವರು ಸೂಚನೆ ನೀಡಿದ್ದಾರೆ.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಮ್ಮ ಪಕ್ಷದ ಅಭ್ಯರ್ಥಿಯು ಅ.14 ರಂದು ಹಾಗೂ ಶಿರಾ ಕ್ಷೇತ್ರದ ಅಭ್ಯರ್ಥಿ ಅ.15ರಂದು ನಾಮಪತ್ರ ಸಲ್ಲಿಸಲಿದ್ದಾರೆ.