ಕರ್ನಾಟಕ

karnataka

ETV Bharat / state

ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ‌ ಭೇಟಿಗೆ ನಿರಾಕರಿಸಿದ ಡಿ ಕೆ ಶಿವಕುಮಾರ್​ : ಕಾರಣ?

ಪಕ್ಷದ ರಾಜ್ಯ ನಾಯಕರು ಅದರಲ್ಲೂ ಮುಖ್ಯವಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದರು. ಈ ವಿಚಾರವಾಗಿ ಡಿಕೆಶಿ ಅವರನ್ನು ಭೇಟಿಯಾಗಿ ಚರ್ಚಿಸುತ್ತೇನೆ ಎಂದು ಸಹ ನಿನ್ನೆ ಸುದ್ದಿಗೋಷ್ಠಿ ನಡೆಸಿ ಅಖಂಡ ಶ್ರೀನಿವಾಸ್‌ ಮೂರ್ತಿ ತಿಳಿಸಿದ್ದರು..

DK Shivkumar and Akanda srinivasa Murthy
ಅಖಂಡ ಶ್ರೀನಿವಾಸ ಮೂರ್ತಿ ಮತ್ತು ಡಿಕೆ ಶಿವಕುಮಾರ್

By

Published : Nov 18, 2020, 12:33 PM IST

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಸಿದ್ದಾರ್ಥ್ ಹೆಗ್ಡೆ ಪುತ್ರ ಅಮರ್ತ್ಯ ಹೆಗ್ಡೆ ನಿಶ್ಚಿತಾರ್ಥ ನಾಳೆ ನಡೆಯವುದರಿಂದ ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಭೇಟಿಯನ್ನು ಡಿಕೆಶಿ ನಿರಾಕರಿಸಿದ್ದಾರೆ ಎನ್ನಲಾಗ್ತಿದೆ.

ಗುರುವಾರ ನಗರದ ಖಾಸಗಿ ಹೋಟೆಲ್​ನಲ್ಲಿ ನಿಶ್ಚಿತಾರ್ಥ ಹಮ್ಮಿಕೊಳ್ಳಲಾಗಿದ್ದು, ಎರಡು ಕುಟುಂಬಗಳ ಸದಸ್ಯರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಕೋವಿಡ್ ಮಹಾಮಾರಿ ಹಿನ್ನೆಲೆ ಸರ್ಕಾರದ ನಿಯಮಾವಳಿ ಪ್ರಕಾರ ನಿಶ್ಚಿತಾರ್ಥ ನಡೆಸಲು ತೀರ್ಮಾನಿಸಲಾಗಿದೆ. ಇದರಿಂದ ಖಾಸಗಿ ಹೋಟೆಲ್‌ನಲ್ಲಿ ಸಮಾರಂಭ ಹಮ್ಮಿಕೊಂಡಿದ್ದು, ಆಯ್ದ ಸಂಬಂಧಿಕರಿಗೆ ಮಾತ್ರ ಆಹ್ವಾನ ನೀಡಲಾಗಿದೆ.

ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ಹೆಗ್ಡೆ ಕಳೆದ ವರ್ಷ ಆತ್ಮಹತ್ಯೆಗೆ ಶರಣಾಗಿದ್ದು, ಇದಕ್ಕೂ ಮುಂಚೆ ಈ ವಿವಾಹ ಸಂಬಂಧ ಡಿ ಕೆ ಶಿವಕುಮಾರ್ ಹಾಗೂ ಸಿದ್ದಾರ್ಥ್ ಹೆಗ್ಡೆ ಕುಟುಂಬದ ಸದಸ್ಯರ ನಡುವೆ ಮಾತುಕತೆ ನಡೆದಿತ್ತು. ಸಿದ್ದಾರ್ಥ ಹೆಗ್ಡೆ ಅಕಾಲಿಕ ಅಗಲಿಕೆಯ ಹಿನ್ನೆಲೆ ವಿವಾಹ ಸಂಬಂಧಿ ಚಟುವಟಿಕೆಯನ್ನು ಕೆಲದಿನ ಮುಂದೂಡಲಾಗಿತ್ತು.

ಎರಡು ತಿಂಗಳ ಹಿಂದೆ ಡಿ ಕೆ ಶಿವಕುಮಾರ್ ನಿವಾಸದಲ್ಲಿ ಉಭಯ ಕುಟುಂಬದ ಸದಸ್ಯರು ಭೇಟಿಯಾಗಿ ಮಾತುಕತೆ ನಡೆಸಿ ವಿವಾಹ ನಿಶ್ಚಯ ಮಾಡಿಕೊಂಡಿದ್ದರು. ಸಿದ್ದಾರ್ಥ್ ಹೆಗ್ಡೆ ಮಾವ ಮಾಜಿ ಸಿಎಂ ಎಸ್‌ಎಂ ಕೃಷ್ಣ ಕುಟುಂಬ ಸದಸ್ಯರು ಹಾಗೂ ಡಿ ಕೆ ಶಿವಕುಮಾರ್ ಕುಟುಂಬದ ಸದಸ್ಯರು ಭೇಟಿಯಾಗಿ ಮಾತುಕತೆ ನಡೆಸಿ ವಿವಾಹ ನಿಶ್ಚಯ ಮಾಡಿದ್ದರು.

ಈ ಮಾತುಕತೆ ಸಂದರ್ಭದಲ್ಲಿಯೇ ನವೆಂಬರ್ ತಿಂಗಳಲ್ಲಿ ನಿಶ್ಚಿತಾರ್ಥ ನಡೆಸಲು ನಿರ್ಧರಿಸಲಾಗಿತ್ತು. ಅದೇ ಪ್ರಕಾರ ನಿಶ್ಚಿತಾರ್ಥ ನಾಳೆ ನಡೆಯಲಿದೆ. ವಿವಾಹ 2021ರ ಫೆಬ್ರುವರಿ ಇಲ್ಲವೇ ಮಾರ್ಚ್ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದೆ.

ಅಖಂಡ ಭೇಟಿ ಮುಂದೂಡಿಕೆ : ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸುವ ನಿರ್ಧಾರ ಮಾಡಿದ್ದರು. ಆದರೆ, ನಾಳೆ ಮಗಳ ನಿಶ್ಚಿತಾರ್ಥ ಇರುವ ಕಾರಣ ಡಿ ಕೆ ಶಿವಕುಮಾರ್ ಭೇಟಿಗೆ ನಿರಾಕರಿಸಿದ್ದು, ಕಾರ್ಯಕ್ರಮ ಮುಗಿದ ನಂತರ ಅಂದರೆ ಮುಂದಿನ ಶನಿವಾರ ಬಂದು ಭೇಟಿಯಾಗುವಂತೆ ಶ್ರೀನಿವಾಸ್ ಮೂರ್ತಿಗೆ ಸೂಚಿಸಿದ್ದಾರೆ.

ಈ ಹಿನ್ನೆಲೆ ಇಂದು ಭೇಟಿ ಆಗಬೇಕಿದ್ದ ಅಖಂಡ ಶ್ರೀನಿವಾಸಮೂರ್ತಿ ಶನಿವಾರ ಭೇಟಿಯಾಗಲಿದ್ದಾರೆ. ಪುಲಕೇಶಿ ನಗರದ ತಮ್ಮ ನಿವಾಸ ಹಾಗೂ ಕಚೇರಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಹಿನ್ನೆಲೆ ಈ ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಭಾಗಿಯಾಗಿದ್ದಾರೆ ಎಂದು ಶ್ರೀನಿವಾಸಮೂರ್ತಿ ಆರೋಪಿಸಿದ್ದರು.

ಆದರೆ, ಪಕ್ಷದ ರಾಜ್ಯ ನಾಯಕರು ಅದರಲ್ಲೂ ಮುಖ್ಯವಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದರು. ಈ ವಿಚಾರವಾಗಿ ಡಿಕೆಶಿ ಅವರನ್ನು ಭೇಟಿಯಾಗಿ ಚರ್ಚಿಸುತ್ತೇನೆ ಎಂದು ಸಹ ನಿನ್ನೆ ಸುದ್ದಿಗೋಷ್ಠಿ ನಡೆಸಿ ಅಖಂಡ ಶ್ರೀನಿವಾಸ್‌ ಮೂರ್ತಿ ತಿಳಿಸಿದ್ದರು. ಆದರೆ, ಮಗಳ ನಿಶ್ಚಿತಾರ್ಥ ಇಟ್ಟುಕೊಂಡಿರುವ ಹಿನ್ನೆಲೆ ಭೇಟಿಗೆ ಡಿಕೆಶಿ ನಿರಾಕರಿಸಿದ್ದು, ಶನಿವಾರ ಭೇಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆ ಇದೆ.

ABOUT THE AUTHOR

...view details