ಬೆಂಗಳೂರು:ಖಾಸಗಿ ವಾಹಿನಿಯೊಂದರ ರಾಮನಗರ ವರದಿಗಾರ ಹನುಮಂತು ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ.ಸುರೇಶ್ ಸಂತಾಪ ಸೂಚಿಸಿದ್ದಾರೆ.
ಪತ್ರಕರ್ತನ ನಿಧನಕ್ಕೆ ಡಿಕೆ ಬ್ರದರ್ಸ್ ಸಂತಾಪ - ‘DK Brother condolences to reporter
ಇಂದು ಖಾಸಗಿ ವಾಹಿನಿಯೊಂದರ ರಾಮನಗರ ವದರಿಗಾರ ಅಪಘಾತದಲ್ಲಿ ಸಾವನ್ನಪ್ಪಿದ್ದು, ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಸಂತಾಪ ಸೂಚಿಸಿದ್ದಾರೆ.
![ಪತ್ರಕರ್ತನ ನಿಧನಕ್ಕೆ ಡಿಕೆ ಬ್ರದರ್ಸ್ ಸಂತಾಪ DK Brother condolences to Public tv reporter hanumanth](https://etvbharatimages.akamaized.net/etvbharat/prod-images/768-512-6881567-thumbnail-3x2-yada.jpg)
ಪಬ್ಲಿಕ್ ಟಿವಿ ವರದಿಗಾರ ಹನುಮಂತು ನಿಧನಕ್ಕೆ ಸಂತಾಪ ಸೂಚಿಸಿದ ಡಿಕೆ ಸಹೋದರರು
ವರದಿಗಾರ ಹನುಮಂತು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಕೇಳಿ ಆಘಾತವಾಯಿತು. ಕರ್ತವ್ಯನಿರತರಾಗಿದ್ದ ಸಂದರ್ಭದಲ್ಲಿ ಅವರು ಮೃತಪಟ್ಟಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ಸಂಕಷ್ಟದ ಸಮಯ ಎದುರಿಸಲು ಭಗವಂತ ಅವರ ಕುಟುಂಬ ಸದಸ್ಯರಿಗೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಶಿವಕುಮಾರ್ ಹಾಗೂ ಸುರೇಶ್ ಸಂತಾಪ ಸೂಚಿಸಿದ್ದಾರೆ.
ಇಂದು ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪತ್ರಕರ್ತ ಹನುಮಂತು ನಿಧನ ಹೊಂದಿದ್ದಾರೆ.