ಬೆಂಗಳೂರು: ಡಿ.ಜೆ ಹಳ್ಳಿ ಕೆ.ಜಿ ಹಳ್ಳಿ ಗಲಭೆ ಪ್ರಕರಣ ಇಡೀ ಬೆಂಗಳೂರನ್ನೇ ಆವರಿಸುತ್ತಿತ್ತು ಅನ್ನೋ ಸ್ಫೋಟಕ ವಿಚಾರ ಆರೋಪಿಗಳ ತನಿಖೆ ವೇಳೆ ತಿಳಿದು ಬಂದಿದೆ. ಬಂಧಿತ ಆರೋಪಿಗಳು ಈ ಮಾಹಿತಿಯನ್ನ ಬಿಚ್ವಿಟ್ಡಿದ್ದು, ಪೊಲೀಸರ ಮುಂಜಾಗ್ರತೆ ಕ್ರಮದಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಹೌದು.. ಡಿ.ಜೆ ಹಳ್ಖಿ ಗಲಭೆ ಸೃಷ್ಟಿಯಾಗುತ್ತಿದ್ದ ಹಾಗೆ ವಾಟ್ಸ್ಆ್ಯಪ್, ಫೇಸ್ಬುಕ್ ಹಾಗೇ ಕರೆಗಳ ಮೂಲಕ ದೊಂಬಿ ಎಬ್ಬಿಸಲು ಬರುವಂತೆ ಬಂಧಿತರು ಕರೆ ನೀಡಿದ್ದರು. ಅದರಂತೆ ಪಶ್ಚಿಮ ವಿಭಾಗದಿಂದ ಹತ್ತಾರು ಓಮಿನಿ ಮೂಲಕ ಗಲಭೆ ನಡೆಯುವ ಸ್ಥಳಕ್ಕೆ ತೆರಳಲು ಯುವಕರು ಹೊರಟ್ಟಿದ್ದರು. ಇನ್ನು ಕೆ.ಜಿ ಹಳ್ಳಿ ಡಿ.ಜೆ ಹಳ್ಳಿ ಗಲಭೆ ಮಿತಿ ಮೀರುತ್ತಿದ್ದ ಹಾಗೆ ನಗರದಲ್ಲಿ ನಾಕಾ ಬಂದಿ ಹಾಕಲಾಗಿ ಟೈಟ್ ಸೆಕ್ಯೂರಿಟಿ ಮಾಡಲಾಗಿತ್ತು. ಡಿಸಿಪಿ ಹಾಗೂ ಸಿಬ್ಬಂದಿ ಮೆಜೆಸ್ಟಿಕ್, ಮಲ್ಲೇಶ್ವರಂ, ಜೆ.ಜೆ.ನಗರ ಕಾಮಾಕ್ಷಿಪಾಳ್ಯ ಹೀಗೆ ಎಲ್ಲ ಪ್ರಮುಖ ರಸ್ತೆಯಲ್ಲಿ ನಾಕಾಬಂದಿ ಹಾಕಿ ಪರಿಶೀಲನೆ ನಡೆಸಲು ಮುಂದಾಗಿದ್ದರು.