ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಪೊರೇಟರ್ ಒಬ್ಬರ ಪುತ್ರನನ್ನು ಡಿ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಡಿಜೆ ಹಳ್ಳಿ ಗಲಭೆ ಪ್ರಕರಣ: ಮಾಜಿ ಕಾರ್ಪೊರೇಟರ್ ಪುತ್ರ ಅರೆಸ್ಟ್...! - ಡಿಜೆ ಹಳ್ಳಿ ಗಲಭೆ ಪ್ರಕರಣ,
ಡಿಜೆ ಹಳ್ಳಿ ಗಲಭೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚು ಕುತೂಹಲ ಮೂಡಿಸುತ್ತಿದ್ದು, ಇಂದು ಮಾಜಿ ಕಾರ್ಪೊರೇಟರ್ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
![ಡಿಜೆ ಹಳ್ಳಿ ಗಲಭೆ ಪ್ರಕರಣ: ಮಾಜಿ ಕಾರ್ಪೊರೇಟರ್ ಪುತ್ರ ಅರೆಸ್ಟ್...! Former corporator son arrested, Former corporator son arrested in Bangalore, Former corporator son arrested in Bangalore news, DJ Halli violence case, DJ Halli violence case news, ಮಾಜಿ ಕಾರ್ಪೋರೇಟರ್ ಮಗ ಅರೆಸ್ಟ್, ಬೆಂಗಳೂರಿನಲ್ಲಿ ಮಾಜಿ ಕಾರ್ಪೋರೇಟರ್ ಮಗ ಅರೆಸ್ಟ್, ಬೆಂಗಳೂರಿನಲ್ಲಿ ಮಾಜಿ ಕಾರ್ಪೋರೇಟರ್ ಮಗ ಅರೆಸ್ಟ್ ಸುದ್ದಿ, ಡಿಜೆ ಹಳ್ಳಿ ಗಲಭೆ ಪ್ರಕರಣ, ಡಿಜೆ ಹಳ್ಳಿ ಗಲಭೆ ಪ್ರಕರಣ ಸುದ್ದಿ,](https://etvbharatimages.akamaized.net/etvbharat/prod-images/768-512-8493079-984-8493079-1597925806471.jpg)
ಡಿಜಿ ಹಳ್ಳಿ ನಿವಾಸಿ ಹಾಗೂ ಜೆಡಿಎಸ್ ಮುಖಂಡ ಖಾಲೀದ್ ಬಂಧಿತ ಆರೋಪಿ. ಈತನ ತಂದೆ ಸಯ್ಯದ್ ಆರೀಫ್ ಡಿ.ಜಿ.ಹಳ್ಳಿ ಮಾಜಿ ಕಾರ್ಪೊರೇಟರ್ ಆಗಿದ್ದರು. ಫೇಸ್ಬುಕ್ನಲ್ಲಿ ನವೀನ್ ಪೋಸ್ಟ್ ಹಾಕಿದ್ದ ವಿಚಾರಕ್ಕಾಗಿ ಆಗಸ್ಟ್ 11 ರಂದು ನವೀನ್ ಗುಂಪಿನೊಂದಿಗೆ ದೂರು ನೀಡಲು ಡಿ.ಜಿ.ಹಳ್ಳಿ ಠಾಣೆಗೆ ಖಲೀದ್ ಬಂದಿದ್ದ. ಜನರ ಕೂಟವನ್ನು ಕರೆತಂದು ಗಲಭೆಗೆ ಪ್ರಚೋದನೆ ನೀಡಿದ್ದ ಎಂಬ ಆರೋಪದಡಿ ಬಂಧಿಸಲಾಗಿದೆ.
BMP ಅವಧಿಯಲ್ಲಿ ಸಯ್ಯದ್ ಆರೀಫ್ ಆಗ ಡಿಜೆ ಹಳ್ಳಿ ವಾರ್ಡ್ ಕಾರ್ಪೊರೇಟರ್ ಆಗಿದ್ದರು. ಅಧಿಕಾರದಲ್ಲಿದ್ದಾಗಲೇ ಅನಾರೋಗ್ಯದಿಂದ ಮೃತ ಪಟ್ಟಿದ್ದರು. ಸದ್ಯ ಪೊಲೀಸರು ಆರೀಫ್ ಮಗನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.