ಬೆಂಗಳೂರು:ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಕಾರ್ಪೊರೇಟರ್ ಜಾಕೀರ್ ಬಂಧಿಸುವಂತೆ ಡಿ ಜೆ ಹಳ್ಳಿ ನಿವಾಸಿಗಳು ಪ್ರತಿಭಟನೆ ಮಾಡುತ್ತಿದ್ದಾರೆ.
ಡಿ ಜೆ ಹಳ್ಳಿ ಗಲಭೆ ಪ್ರಕರಣ: ಸಂಪತ್ ರಾಜ್, ಕಾರ್ಪೊರೇಟರ್ ಜಾಕೀರ್ ಬಂಧಿಸುವಂತೆ ಪ್ರತಿಭಟನೆ - DJ halli roits latest updates
ಡಿ ಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿಗಳಾದ ಮೇಯರ್ ಸಂಪತ್ ರಾಜ್ ಹಾಗೂ ಕಾರ್ಪೊರೇಟರ್ ಜಾಕೀರ್ ಅವರನ್ನು ಬಂಧಿಸುವಂತೆ ಪ್ರತಿಭಟನೆ ನಡೆಸಲಾಗ್ತಿದೆ.
ಡಿ ಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ ಆರೋಪದಡಿ ಮಾಜಿ ಮೇಯರ್ ಸಂಪತ್ ರಾಜ್ ಸೇರಿದಂತೆ ಇತರೆ ಆರೋಪಿಗಳ ವಿರುದ್ಧ ಸಿಸಿಬಿ ದೋಷಾರೋಪಟ್ಟಿ ಸಲ್ಲಿಸಿದೆ. ಈ ಹಿನ್ನೆಲೆ ಸಂಪತ್ ರಾಜ್ ಹಾಗೂ ಕಾರ್ಪೊರೇಟರ್ ಜಾಕೀರ್ ರನ್ನು ಬಂಧಿಸುವಂತೆ ಟ್ಯಾನಿ ರಸ್ತೆಯ ಸರ್ಕಲ್ನಲ್ಲಿ ಡಿ ಜೆ ಹಳ್ಳಿ ನಿವಾಸಿಗಳು ಪ್ರತಿಭಟನೆಗಿಳಿದಿದ್ದಾರೆ. ಅವರನ್ನು ಕೂಡಲೇ ಬಂಧನ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನಾಕಾರರು ರಸ್ತೆಯಲ್ಲಿ ಸಂಪತ್ ರಾಜ್ ಪ್ರತಿಕೃತಿ ದಹಿಸಿದ್ದಾರೆ. ಸರ್ಕಲ್ನಲ್ಲಿ ಪ್ರತಿಭಟನೆ ನಡೆಯುತ್ತಿರುವುದರಿಂದ ಬಸ್ ಸಂಚಾರ ಅಸ್ತವ್ಯಸ್ತಗೊಂಡಿದೆ.
ಸದ್ಯ ಮಾಜಿ ಮೇಯರ್ ಸಂಪತ್ ರಾಜ್ ಕೊರೊನಾ ಸೋಂಕು ಹಾಗೂ ಬೆನ್ನು ನೋವು ಇರುವುದಾಗಿ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಾಕೀರ್ ಹುಸೇನ್ ತಲೆಮರೆಸಿಕೊಂಡಿದ್ದು, ಇವರ ಪತ್ತೆಗೆ ಪೊಲೀಸ್ ತಂಡ ಶೋಧ ನಡೆಸಿದೆ. ಇನ್ನು ಸಂಪತ್ ರಾಜ್ಗೆ ಅನಾರೋಗ್ಯ ಕಾರಣ ಖಾಸಗಿ ವೈದ್ಯರ ಬಳಿಯಿಂದ ಹೆಲ್ತ್ ಅಪ್ಡೇಟ್ ಪಡೆದಿದ್ದು, ಗುಣಮುಖರಾದ ತಕ್ಷಣ ವಶಕ್ಕೆ ಪಡೆಯಲಿದ್ದಾರೆ.