ಕರ್ನಾಟಕ

karnataka

ETV Bharat / state

ನೀರು ತಂದು ಬೆಂಕಿ ಆರಿಸುವ ಕೆಲಸ ನಾನೇ ಮಾಡಿದ್ದೆ: ತನಿಖಾಧಿಕಾರಿಗಳ ಬಳಿ ಅವಲತ್ತುಕೊಂಡ‌ ಆರೋಪಿಗಳು - Accused shift to jail

ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧ ಬಂಧಿಸಲಾಗಿದ್ದ ಇಬ್ಬರ ಆರೋಪಿಗಳ ಪೊಲೀಸ್ ಕಸ್ಟಡಿ ಮುಗಿದಿದ್ದು ಅವರನ್ನು ಜೈಲಿಗೆ ರವಾನೆ ಮಾಡಲಾಗಿದೆ. ಜೊತೆಗೆ ಇಂದು ಬೆಳಗ್ಗೆ ಬಂಧಿಸಲಾಗಿದ್ದ ಸಾದೀಕ್ ಎಂಬ ಮತ್ತೊಬ್ಬ ಆರೋಪಿಯನ್ನ ಸಹ ಇಂದು ಜೈಲಿಗೆ ಶಿಫ್ಟ್ ಮಾಡಲಾಯಿತು.

DJ Halli riots case: Accused shift to jail after over the police custody
ಡಿಜೆ ಹಳ್ಳಿ ಗಲಭೆ ಪ್ರಕರಣ

By

Published : Aug 27, 2020, 11:28 PM IST

ಬೆಂಗಳೂರು:ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧ ಚರ್ಚ್ ಸ್ಟ್ರೀಟ್​​ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಆರೋಪಿ ಸಂಬಂಧಿ ಮೊಹಮ್ಮದ್ ಜೈದ್ ಸೇರಿದಂತೆ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮೊಹಮ್ಮದ್ ಜೈದ್, ಸಿದ್ದಿಕ್ ಹಾಗೂ ಸಾದೀಕ್ ಎಂಬ ಮೂವರು ಆರೋಪಿಗಳನ್ನು ಇಂದು ಜೈಲಿಗೆ ಶಿಫ್ಟ್ ಮಾಡಲಾಯಿತು. ಇತ್ತ ಸಿಸಿಬಿ ಕಸ್ಟಡಿಯಲ್ಲಿದ್ದ ಸಿದ್ದಿಕ್ ತನಿಖೆ ವೇಳೆ ನವರಂಗಿ ಆಟ ಶುರು ಮಾಡಿದ್ದಾನೆ. ಗಲಾಟೆಯಲ್ಲಿ ನಾನೇ ಬೆಂಕಿ ಆರಿಸಿದವನು, ನೀರು ತಂದು ಬೆಂಕಿ ಆರಿಸುವ ಕೆಲಸ ನಾನೇ ಮಾಡಿದ್ದೆ. ವಾಹನಗಳಿಗೆ ಬೆಂಕಿ ಹಚ್ಚಿದಾಗ ಬೆಂಕಿ ನಂದಿಸುವ ಕೆಲಸ ಮಾಡಿದ್ದೆ ಅಂತಾ ಅವಲತ್ತುಕೊಂಡ ಘಟನೆ ನಡೆಯಿತು.

ಆರೋಪಿಗಳನ್ನು ಕರೆದೊಯ್ಯುತ್ತಿರುವ ಪೊಲೀಸರು

ಡಿಜೆ ಹಳ್ಳಿ ಠಾಣಾ ಪೊಲೀಸರ ವಶದಲ್ಲಿದ್ದ ಮೊಹಮದ್ ಜೈದ್ ಸಹ ಬಾಯಿ ಬಿಡ್ತಿಲ್ಲ. ಪ್ರಕರಣದಲ್ಲಿ ನನಗೂ ಅದಕ್ಕೂ ಸಂಬಂಧವೇ ಇಲ್ಲ ಅನ್ನೋದು ಬಿಟ್ರೆ ತನ್ನ ವಿರುದ್ಧದ ಆರೋಪಗಳನ್ನ ತಳ್ಳಿ ಹಾಕ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಇಬ್ಬರ ಪೊಲೀಸ್ ಕಸ್ಟಡಿ ಮುಗಿದಿದ್ದು ಜೈಲಿಗೆ ರವಾನೆ ಮಾಡಲಾಗಿದೆ. ಜೊತೆಗೆ ಇವತ್ತು ಬೆಳಗ್ಗೆ ಅರೆಸ್ಟ್ ಮಾಡಿದ್ದ ಸಾದೀಕ್ ಎಂಬ ಆರೋಪಿಯನ್ನ ಸಹ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ABOUT THE AUTHOR

...view details