ಬೆಂಗಳೂರು :ಡಿಜೆಹಳ್ಳಿ ಹಾಗೂ ಕೆಜಿಹಳ್ಳಿ ಗಲಭೆ ಪ್ರಕರಣ ಸಂಬಂಧ ಸದ್ಯ ಎನ್ಐಎ ತನಿಖೆ ಚುರುಕುಗೊಂಡಿದೆ. ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಮೇಲೆ ಹಲವು ಸೆಕ್ಷನ್‌ಗಳ ಅಡಿ ಎನ್ಐಎ ದೂರು ದಾಖಲಿಸಿಕೊಂಡಿದೆ.
ಪ್ರಕರಣದ ತನಿಖೆ ಕೈಗೊಂಡಿರುವ ಎನ್ಐಎ ಮಾಹಿತಿ 143- ಗುಂಪು ಕಟ್ಟಿದ ಅಡಿಯಲ್ಲಿ
147- ಗುಂಪು ಕಟ್ಟಿ ಗಲಭೆ ಸೃಷ್ಟಿ
307-ಕೊಲೆ ಯತ್ನ ಅಥವಾ ವಿವೇಚನೆಗೆ ತಿಳಿದಿದ್ದರೂ ಕೊಲೆಗೆ ಯತ್ನ
436-ಗುಂಪು ಕಟ್ಟಿ ಗಲಾಟೆ ಮಾಡಿದ್ದಲ್ಲದೆ ಬೆಂಕಿ ಹಚ್ಚಿ ವಸ್ತು ಅಥವಾ ಮನೆ ಧ್ವಂಸ
353-ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಕಲ್ಲು ತೂರಾಟ
332- ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದಕ್ಕಾಗಿ
333- ಪೊಲೀಸರ ಕರ್ತವ್ಯಕ್ಕೆ ಅಡ್ಡಿ
427- ಸಾರ್ವಜನಿಕರ ಆಸ್ತಿ ಪಾಸ್ತಿ ನಾಶ
504- ಗಲಭೆಗೆ ಪ್ರಚೋದನೆ
506- ಕ್ರಿಮಿನಲ್ ಅಪರಾಧ
149- ಗಲಭೆ ನಡೆಸಲು ದೊಡ್ಡ ಮಟ್ಟದ ಗುಂಪು ಸೇರಿಸಿದ
34- ಗಲಭೆ ನಡೆದ್ರೆ ಮುಂದಿನ ಆಗು ಹೋಗುಗಳ ಬಗ್ಗೆ ಗೊತ್ತಿದ್ದರೂ ಸಾವಿರಕ್ಕೂ ಹೆಚ್ಚು ಜನ ಸೇರಿದ್ದಕ್ಕಾಗಿ
4-ಸಾರ್ವಜನಿಕರ ಆಸ್ತಿ ಪಾಸ್ತಿ ನಷ್ಟ
2- ಕೆಪಿಡಿ ಕರ್ನಾಟಕ ಪ್ರಿವೆನ್ಷನ್ ಆಫ್ ಡಿಸ್ಟ್ರಕ್ಷನ್ ಹಾಗೂ ಆಸ್ತಿ ಹಾನಿ
UAPAನ ಸೆಕ್ಷನ್ 15,161,18,20 ಆ್ಯಕ್ಟ್ ಅಡಿ ಎನ್ಐಎ ತಂಡ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದೆ.
ಇದನ್ನೂ ಓದಿ: ಡಿ.ಜೆ. ಹಳ್ಳಿ ಗಲಭೆ ಪ್ರಕರಣ: ತನಿಖೆಗಿಳಿದ ಎನ್ಐಎ