ಬೆಂಗಳೂರು: ಡಿ ಜೆ ಹಳ್ಳಿ-ಕೆ ಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧಿಸಿದಂತೆ ಆರೋಪಿ ಸಂಪತ್ ರಾಜ್ ಜೈಲು ಸೇರಿ ಎರಡು ದಿನ ಸಹ ಕಳೆದಿಲ್ಲ. ಆದರೆ ಅನಾರೋಗ್ಯದ ನೆಪವೊಡ್ಡಿ ಜೈಲಿನಿಂದ ಅವರನ್ನು ನಗರದ ಜಯದೇವ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣ: ಜೈಲಿನಿಂದ ಜಯದೇವ ಆಸ್ಪತ್ರೆಗೆ ಸಂಪತ್ ರಾಜ್ ಶಿಫ್ಟ್
ಕೆ ಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಕೇಸ್ನಲ್ಲಿ ಬಂಧಿತನಾಗಿದ್ದ ಆರೋಪಿ ಸಂಪತ್ ರಾಜ್ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆ ಜೈಲಿನಿಂದ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಅನಾರೋಗ್ಯ ಎಂದು ಹೇಳಿ ಪರಪ್ಪನ ಅಗ್ರಹಾರದಿಂದ ಜಯದೇವ ಹೃದ್ರೋಗ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಸಂಪತ್ ರಾಜ್ ಬಂಧನದ ಬಳಿಕ ಆರೋಪಿ ಪರ ವಕೀಲರು ನ್ಯಾಯಾಲಯದಲ್ಲಿ ಸಂಪತ್ ರಾಜ್ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ಸರಿಯಾದ ಚಿಕಿತ್ಸೆ ಅವಶ್ಯಕತೆ ಇದೆ ಎಂದು ವಾದ ಮಾಡಿದ್ದರು. ಹೀಗಾಗಿ ನ್ಯಾಯಾಲಯ ಅನಿವಾರ್ಯತೆ ಇದ್ದರೆ ಚಿಕಿತ್ಸೆ ಪಡೆಯುವಂತೆ ಸೂಚಿಸಿತ್ತು. ಸದ್ಯ ಕೋರ್ಟ್ ಸೂಚನೆಯನ್ನೇ ಆರೋಪಿ ಸಂಪತ್ ರಾಜ್ ವರದಾನ ಮಾಡಿಕೊಂಡು ಬಿಪಿ ನಾರ್ಮಲ್ ಇದೆ. ಆದ್ರೆ ಹಾರ್ಟ್ ಫ್ಲಕ್ಚ್ಯೂಯೇಶನ್ ಆಗ್ತಿದೆ ಎಂದು ಜಯದೇವ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಇಟ್ಟ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮಾಜಿ ಮೇಯರ್ ಸಂಪತ್ ರಾಜ್ನನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿ ನ.20ರಂದು ಜೈಲಿಗೆ ಕಳಿಸಿದ್ದರು. ಜೈಲು ಸೇರಿದ ಒಂದು ದಿನ ಮಾತ್ರ ಜೈಲು ಕ್ವಾರಂಟೈನ್ನಲ್ಲಿದ್ದರು. ಬಳಿಕ ಜೈಲು ಆಸ್ಪತ್ರೆ ಸ್ಪೆಷಲ್ ವಾರ್ಡ್ನಲ್ಲಿದ್ದ ಅವರು ಅಲ್ಲಿ ವ್ಯವಸ್ಥೆ ಸರಿಯಾಗಿಲ್ಲ, ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿ ಎಂದು ಪಟ್ಟು ಹಿಡಿದಿದ್ದರು.