ಬೆಂಗಳೂರು:ಕೆಎಸ್ ಆರ್ ಟಿಸಿ ನೌಕರರಿಗೆ ದೀಪಾವಳಿ ಪ್ರಯುಕ್ತ ಬಂಪರ್ ಕೊಡುಗೆ ನೀಡಲಾಗಿದೆ. ನೌಕರರ ತುಟ್ಟಿಭತ್ಯೆಯಲ್ಲಿ ಶೇ.6.5 ರಿಂದ ಶೇ.12.5ಕ್ಕೆ ಹೆಚ್ಚಳ ಮಾಡಲಾಗಿದೆ. ತುಟ್ಟಿಭತ್ಯೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು,ಈ ತಿಂಗಳಿಂದಲೇ ತುಟ್ಟಿಭತ್ಯೆ ಹೆಚ್ಚಳ ಅನ್ವಯವಾಗಲಿದೆ.
ನಾಲ್ಕು ಸಾರಿಗೆ ನಿಗಮಗಳಲ್ಲಿ 2019ರ ಅಕ್ಟೋಬರ್ ತಿಂಗಳ ವೇತನದಲ್ಲಿ ಮತ್ತು ಮುಂದಕ್ಕೆ ತುಟ್ಟಿ ಭತ್ಯೆ ದರ ಹೆಚ್ಚಿಸಲಾಗಿದೆ. ಜುಲೈ- 2019ರಿಂದ ಸೆಪ್ಟೆಂಬರ್-2019 ರ ವರೆಗಿನ 3 ಮೂರು ತಿಂಗಳ ತುಟ್ಟಿಭತ್ಯೆ ಹಿಂಬಾಕಿಯ ಒಂದೊಂದು ಕಂತನ್ನು ನವೆಂಬರ್-2019 ರಿಂದ ಜನವರಿ-2020 ರ ವೇತನದಲ್ಲಿ ಸೇರಿಸಿ ಪಾವತಿಸಲಾಗುತ್ತೆ.