ಬೆಂಗಳೂರು: ಬೆಂಗಳೂರು ವಿ ವಿ ಕುಲಪತಿ ಕೆ ಆರ್ ವೇಣುಗೋಪಾಲ್ ನೇಮಕ ರದ್ದುಗೊಳಿಸಿದ್ದ ಏಕ ಸದಸ್ಯಪೀಠದ ಆದೇಶಕ್ಕೆ ಹೈಕೋರ್ಟ್ನ ವಿಭಾಗೀಯ ಪೀಠ ಅಗಸ್ಟ್ 18ರವೆರೆಗೆ ಮಧ್ಯಂತರ ತಡೆಯಾಜ್ಞೆ ಜಾರಿ ಮಾಡಿದೆ.
ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವೇಣುಗೋಪಾಲ್ ಮತ್ತು ಬೆಂಗಳೂರು ವಿಶ್ವ ವಿದ್ಯಾಲಯ ಮೇಲ್ಮನವಿಯನ್ನು ವಿಭಾಗೀಯ ಪೀಠಕ್ಕೆ ಸಲ್ಲಿಸಿದ್ದರು. ಈ ವಿಚಾರಣೆ ಇಂದು ಮುಖ್ಯ ನ್ಯಾಯಮೂರ್ತಿ ಅವರ ಪೀಠದಲ್ಲಿ ನಡೆಯಿತು.
ಅರ್ಜಿದಾರರ ಪರ ವಕೀಲರು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಕೆ ಆರ್ ವೇಣುಗೋಪಾಲ್ ನೇಮಕಾತಿಯನ್ನು ಏಕಸದಸ್ಯ ಪೀಠ ರದ್ದುಗೊಳಿಸಿದೆ. ಕುಲಪತಿ ಕೆ ಆರ್ ವೇಣುಗೋಪಾಲ್ ವಿರುದ್ಧ ಹಲವು ಅಕ್ರಮಗಳ ಆರೋಪಕ್ಕೆ ಸಾಕ್ಷ್ಯ ಇಲ್ಲ ಹಾಗೆ ವಿಶ್ವವಿದ್ಯಾಲಯ ಪರಿಶೀಲನೆ ಮಾಡಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನ ಮಾನ್ಯ ಮಾಡಿದ ನ್ಯಾಯಾಲಯ ಅಗಸ್ಟ್ 18ರವೆರೆಗೆ ಮಧ್ಯಂತರ ತಡೆಯಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದೆ.
ಕುಲಪತಿ ಮೇಲಿನ ಆರೋಪ:ಅರ್ಹತೆ ಇಲ್ಲದಿದ್ದರೂ ಪ್ರೊಫೆಸರ್ ಹುದ್ದೆಗೆ ಪದೋನ್ನತಿ ನೀಡಲಾಗಿದ್ದು, ಇವರ ಹುದ್ದೆಗೆ ರಾಜ್ಯ ಸರ್ಕಾರದ ಒಪ್ಪಿಗೆ ಇಲ್ಲದೇ ನೇಮಕವಾಗಿತ್ತು ಎಂದು ಅರ್ಜಿದಾರ ಡಾ.ಸಂಗಮೇಶ ಆರೋಪಿಸಿದ್ದರು.