ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಯೂ ಪ್ರತ್ಯೇಕತಾ ನಡಿಗೆಗಾಗಿ ಜಿಲ್ಲಾ‌‌ ಮಟ್ಟದಲ್ಲಿ ಟಾಸ್ಕ್ ಪೋರ್ಸ್ ಸಮಿತಿ ರಚಿಸಿದ್ದ ಪಿಎಫ್ಐ - ಫ್ರೀಡಂ ಯುನಿಟಿ ಮಾರ್ಚ್

ಹಿಜಾಬ್ ವಿವಾದ ಬಳಿಕ ರಾಜ್ಯದಲ್ಲಾದ ಪಿಎಫ್ಐ ಸಭೆ, ಸಮಾವೇಶ ಹಾಗೂ ಪ್ರತಿಭಟನೆ ವೇಳೆ ಹಾಕಿದ್ದ ಬ್ಯಾನರ್ ಗಳ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ
ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ

By

Published : Oct 4, 2022, 5:53 PM IST

ಬೆಂಗಳೂರು: ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಲು ಸಂಚು ರೂಪಿಸುತ್ತಿದ್ದ ಆರೋಪದಡಿ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಬಂಧಿತ ಆರೋಪಿಗಳು ಕೇರಳ ಮಾದರಿಯಲ್ಲಿ‌ ದೊಡ್ಡ ಮಟ್ಟದಲ್ಲಿ ಸಂಘಟನೆ ಬಲಗೊಳಿಸಲು ಜಿಲ್ಲಾ ಮಟ್ಟದಲ್ಲಿ ಟಾಸ್ಕ್ ಪೋರ್ಸ್ ಸಮಿತಿ ರಚಿಸಿಕೊಂಡಿದ್ದರು ಎಂಬುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.

15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ 15 ಮಂದಿ ಪಿಎಫ್ಐ ಆರೋಪಿಗಳ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಗಳ ರಿಟ್ರೀವ್ ವರದಿ ಪಡೆದುಕೊಂಡಿದ್ದ ಪೊಲೀಸರು ಕೇರಳದಲ್ಲಿ ಬಲಗೊಂಡಿರುವ ಪಿಎಫ್ಐ ಸಂಘಟನೆಯನ್ನು ಜಿಲ್ಲಾ ಮಟ್ಟದಲ್ಲಿ ಟಾಸ್ಕ್ ಪೋರ್ಸ್ ಸಮಿತಿ ರಚಿಸಿ ಸದ್ಯಸತ್ವ ನೇಮಕ ಪ್ರಕ್ರಿಯೆಯನ್ನು ಆರೋಪಿಗಳು ಚುರುಕುಗೊಳಿಸಿದ್ದರು ಎಂಬ ಅಂಶವನ್ನ ಪೊಲೀಸರು ಕಂಡುಕೊಂಡಿದ್ದಾರೆ.

ರಾಜ್ಯದಲ್ಲಿ ಸುಮಾರು 50 ಸಾವಿರ ಸದಸ್ಯರು ಪಿಎಫ್ಐನಲ್ಲಿ ನೋಂದಣಿಯಾಗಿದ್ದಾರೆ. ಯುವಕರನ್ನು‌ ಪ್ರಚೋದಿಸಿ ಸಂಘಟನೆ ಕಡೆಗೆ ಸೆಳೆಯುತ್ತಿದ್ದ ಆರೋಪಿಗಳು ಸತ್ಯಮಂಗಲ ಅರಣ್ಯ ಪ್ರದೇಶದಲ್ಲಿ ಅಪರಾಧ ಕೃತ್ಯಗಳನ್ನ ಹೇಗ ನಡೆಸಬೇಕು ? ಹೇಗೆ ತಪ್ಪಿಸಿಕೊಳ್ಳಬೇಕು ಎಂಬುದರ ಬಗ್ಗೆ ತರಬೇತಿ ನೀಡುತ್ತಿದ್ದರು‌. ಜೊತೆಗೆ ಸತ್ಯಮಂಗಲ ಅರಣ್ಯ ಭಾಗದ ರೆಸಾರ್ಟ್ ಮತ್ತು ಹೋಮ್ ಸ್ಟೇ ಗಳಲ್ಲಿ ಸಭೆ ನಡೆಸುತ್ತಿದ್ದರು.

ಏರ್ ಗನ್ ಹಿಡಿದು ಫ್ರೀಡಂ ಮಾರ್ಚ್‌: ಕೇರಳದ ಪ್ರತ್ಯೇಕತಾ ನಡಿಗೆ (freedom unity march) ಇಡೀ ರಾಜ್ಯಾದ್ಯಂತ ನಡೆಸಲು ಸಿದ್ದತೆ ನಡೆಸಿದ್ದ ಪಿಎಫ್ಐ ಕಳೆದ ಮೂರ್ನಾಲ್ಕು ತಿಂಗಳಿಂದ ರಾಜ್ಯದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿಸಲಾಗಿತ್ತು. ಜಿಲ್ಲಾ ವ್ಯಾಪ್ತಿಗಳಲ್ಲಿ ಟಾಸ್ಕ್ ಪೋರ್ಸ್ ಕಮಿಟಿ ಸದಸ್ಯತ್ವ ನೇಮಕಕ್ಕೆ‌ ಮುಂದಾಗಿತ್ತು. ರಾಜ್ಯದ ಪ್ರಮುಖ ನಗರಗಳಲ್ಲಿ ಪ್ರೀಡಂ ಮಾರ್ಚ್ ಪ್ರದರ್ಶನಕ್ಕಾಗಿಯೇ ಗುಪ್ತವಾಗಿ ತರಬೇತಿ ನಡೆಸುತ್ತಿದ್ದರು. ತರಬೇತಿ ವೇಳೆ ಏರ್ ಗನ್ ಹಿಡಿದು ಫ್ರೀಡಂ ಮಾರ್ಚ್‌ ಮಾಡಿರೋದು ಬೆಳಕಿಗೆ ಬಂದಿದೆ ಎನ್ನಲಾಗುತ್ತಿದೆ.

ಧರ್ಮಸೈನಿಕರಂತೆ ತರಬೇತಿ: ಕೇರಳದ ಕಾಸರಗೋಡಿನ ಕಾಡಿನಲ್ಲಿ ಈ ಹಿಂದೆ ಫ್ರೀಡಂ ಯುನಿಟಿ ಮಾರ್ಚ್ ನಡೆದಿತ್ತು‌. ನಂತರ ಗೌಪ್ಯತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಆಂತರಿಕವಾಗಿ ತರಬೇತಿ‌ ಪಿಎಫ್ಐ ತರಬೇತಿ ನೀಡುತಿತ್ತು‌. ತರಬೇತಿ ಹಿಂದಿನ ಉದ್ದೇಶವೇ ಧರ್ಮ ವಿರೋಧಿಗಳ ವಿರುದ್ಧ ಹೋರಾಡಲು ಧರ್ಮಸೈನಿಕರಂತೆ ತರಬೇತಿ ನೀಡುತ್ತಿದ್ದರು.

ಪೊಲೀಸರಿಂದ ಕೂಲಂಕಷವಾಗಿ ತನಿಖೆ: ಹಿಜಾಬ್ ವಿವಾದ ಬಳಿಕ ರಾಜ್ಯದಲ್ಲಾದ ಪಿಎಫ್ಐ ಸಭೆ, ಸಮಾವೇಶ ಹಾಗೂ ಪ್ರತಿಭಟನೆ ವೇಳೆ ಹಾಕಿದ್ದ ಬ್ಯಾನರ್ ಗಳನ್ನ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆ ಬ್ಯಾನರ್ ಗಳಲ್ಲಿ ಹಾಕಿರುವ ಪೋಟೋಗಳು ಯಾರು ?, ಯಾಕಾಗಿ ಅವರನ್ನ ಕರೆಸಲಾಗಿತ್ತು? ಎಷ್ಟು ಮಂದಿ ಸಂಘಟಿತರ ಗುಂಪಿದೆ. ಯಾವ ರಾಜ್ಯದವರು ಇವರ ಸಂಪರ್ಕ ಸಿಕ್ಕಿದ್ದು ಹೇಗೆ? ಎಂಬುದರ ಬಗ್ಗೆ ಕೂಲಂಕಷವಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಓದಿ:ಸ್ಫೋಟಕ ಮಾಹಿತಿ ಬಹಿರಂಗ: ಅಪರಾಧ ನಡೆಸಲು ತರಬೇತಿ ಪಡೆಯುತ್ತಿದ್ದರಾ ಪಿಎಫ್​ಐ ಮುಖಂಡರು?

ABOUT THE AUTHOR

...view details