ಬೆಂಗಳೂರು: ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಪ್ರಕಟವಾಗಿದೆ. ಬಹುಬೇಡಿಕೆಯ ಬೆಂಗಳೂರು ಉಸ್ತುವಾರಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಬಳಿಯೇ ಇರಿಸಿಕೊಂಡಿದ್ದು, ಲಕ್ಷ್ಮಣ ಸವದಿ, ಶ್ರೀರಾಮುಲು, ಆರ್ ಅಶೋಕ್ ಆಸೆಗೆ ತಣ್ಣೀರು ಎರಚಿದಂತಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಪ್ರಕಟ: ಯಾವ ಜಿಲ್ಲೆಗೆ ಯಾರು ಸಾರಥಿ? - ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಸಂಪುಟ ವಿಸ್ತರಣೆ, ಖಾತೆಗಳ ಹಂಚಿಕೆ ಹಗ್ಗಜಗ್ಗಾಟದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಪ್ರಹಸನವೂ ಪೂರ್ಣಗೊಂಡಿದೆ. ತಿಂಗಳ ಬಳಿಕ ಕಡೆಗೂ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಸಿಎಂ
ಸಂಪುಟ ವಿಸ್ತರಣೆ, ಖಾತೆಗಳ ಹಂಚಿಕೆ ಹಗ್ಗ ಜಗ್ಗಾಟದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಪ್ರಹಸನವೂ ಪೂರ್ಣಗೊಂಡಿದೆ. ತಿಂಗಳ ಬಳಿಕ ಕಡೆಗೂ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ.
ಯಾರಿಗೆ ಯಾವ ಜಿಲ್ಲೆ ಉಸ್ತುವಾರಿ?
- ಬಿ.ಎಸ್. ಯಡಿಯೂರಪ್ಪ-ಬೆಂಗಳೂರು ನಗರ
- ಗೋವಿಂದ ಕಾರಜೋಳ-ಬಾಗಲಕೋಟೆ, ಕಲಬುರಗಿ
- ಡಾ.ಸಿ.ಎನ್ ಅಶ್ವತ್ಥ ನಾರಾಯಣ್- ರಾಮನಗರ, ಚಿಕ್ಕಬಳ್ಳಾಪುರ
- ಲಕ್ಷ್ಮಣ್ ಸವದಿ- ಬಳ್ಳಾರಿ, ಕೊಪ್ಪಳ
- ಕೆ.ಎಸ್. ಈಶ್ವರಪ್ಪ-ಶಿವಮೊಗ್ಗ, ದಾವಣಗೆರೆ
- ಆರ್.ಅಶೋಕ್-ಬೆಂಗಳೂರು ಗ್ರಾಮಾಂತರ, ಮಂಡ್ಯ
- ಜಗದೀಶ್ ಶೆಟ್ಟರ್- ಬೆಳಗಾವಿ, ಧಾರವಾಡ
- ಶ್ರೀರಾಮುಲು-ರಾಯಚೂರು, ಚಿತ್ರದುರ್ಗ
- ಸುರೇಶ್ ಕುಮಾರ್-ಚಾಮರಾಜನಗರ
- ವಿ.ಸೋಮಣ್ಣ- ಮೈಸೂರು, ಮಡಿಕೇರಿ
- ಸಿ.ಟಿ. ರವಿ- ಚಿಕ್ಕಮಗಳೂರು
- ಬಸವರಾಜ್ ಬೊಮ್ಮಾಯಿ- ಉಡುಪಿ, ಹಾವೇರಿ
- ಕೋಟಾ ಶ್ರೀನಿವಾಸ ಪೂಜಾರಿ- ಮಂಗಳೂರು
- ಜೆ.ಸಿ. ಮಾಧುಸ್ವಾಮಿ- ತುಮಕೂರು, ಹಾಸನ
- ಸಿ.ಸಿ. ಪಾಟೀಲ್- ಕೋಲಾರ
- ಪ್ರಭು ಚೌವ್ಹಾಣ್-ಬೀದರ್, ಯಾದಗಿರಿ
- ಶಶಿಕಲಾ ಜೊಲ್ಲೆ- ಉತ್ತರ ಕನ್ನಡ