ಕರ್ನಾಟಕ

karnataka

ETV Bharat / state

COVID - ಪ್ರವಾಹ ನಿರ್ವಹಣೆ ಪರಿಶೀಲನೆಗಾಗಿ ಉಸ್ತುವಾರಿ ಸಚಿವರ ನೇಮಕ ಮಾಡಿದ CM - cm basavraja bommai

ಕೋವಿಡ್-19 ನಿರ್ವಹಣೆ ಹಾಗೂ ನೆರೆ ಪರಿಹಾರ ಕೆಲಸಗಳನ್ನು ತ್ವರಿತವಾಗಿ ಪರಿಶೀಲಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ.

district in charge ministers  appointed  news
ಉಸ್ತುವಾರಿ ಸಚಿವರ ನೇಮಿಸಿ ಸಿಎಂ ಆದೇಶ

By

Published : Aug 4, 2021, 8:55 PM IST

ಬೆಂಗಳೂರು:ರಾಜ್ಯದಲ್ಲಿ ಕೋವಿಡ್-19 ನಿರ್ವಹಣೆ ಹಾಗೂ ನೆರೆ ಪರಿಹಾರ ಕೆಲಸಗಳನ್ನು ತ್ವರಿತವಾಗಿ ಪರಿಶೀಲಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನಿಯೋಜಿಸಿ ಆದೇಶ ಹೊರಡಿಸಲಾಗಿದೆ.

ಎಲ್ಲ 29 ಸಚಿವರುಗಳಿಗೆ ಜಿಲ್ಲೆಗಳ ಉಸ್ತುವಾರಿ ‌ನೀಡಿ ಸಿಎಂ ಆದೇಶ ಹೊರಡಿಸಿದ್ದಾರೆ. ಉಸ್ತುವಾರಿ ಸಚಿವರು ತಮಗೆ ಹಂಚಿಕೆಯಾದ ಜಿಲ್ಲೆಗಳಿಗೆ ತೆರಳಿ ಕೋವಿಡ್ ನಿರ್ವಹಣೆ, ಪ್ರವಾಹ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಬೇಕು. ಬಳಿಕ ಅಲ್ಲಿನ ಸ್ಥಿತಿಗತಿ ಬಗ್ಗೆ ವರದಿಯನ್ನು ನೀಡಬೇಕು‌. ಇಂದು ನಡೆದ ನೂತನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದ್ದು, ಇದೀಗ ಆದೇಶ ಹೊರಡಿಸಲಾಗಿದೆ.

ಯಾರಿಗೆ ಯಾವ ಜಿಲ್ಲೆ ಉಸ್ತುವಾರಿ:

ಗೋವಿಂದ ಕಾರಜೋಳ-ಬೆಳಗಾವಿ

ಕೆ.ಎಸ್.ಈಶ್ವರಪ್ಪ-ಶಿವಮೊಗ್ಗ

ಶ್ರೀರಾಮುಲು-ಚಿತ್ರದುರ್ಗ

ವಿ.ಸೋಮಣ್ಣ-ರಾಯಚೂರು

ಉಮೇಶ್ ಕತ್ತಿ-ಬಾಗಲಕೋಟೆ

ಎಸ್.ಅಂಗಾರ-ದ.ಕನ್ನಡ

ಜೆ.ಸಿ.ಮಾಧುಸ್ವಾಮಿ-ತುಮಕೂರು

ಆರಗ ಜ್ಞಾನೇಂದ್ರ-ಚಿಕ್ಕಮಗಳೂರು

ಡಾ.ಅಶ್ವತ್ಥ್ ನಾರಾಯಣ್-ರಾಮನಗರ

ಸಿ.ಸಿ.ಪಾಟೀಲ್-ಗದಗ

ಆನಂದ್ ಸಿಂಗ್-ಬಳ್ಳಾರಿ ಮತ್ತು ವಿಜಯನಗರ

ಕೋಟಾ ಶ್ರೀನಿವಾಸ ಪೂಜಾರಿ-ಕೊಡಗು

ಪ್ರಭು ಚವ್ಹಾಣ್​-ಬೀದರ್

ಮುರುಗೇಶ್ ನಿರಾಣಿ- ಕಲಬುರ್ಗಿ

ಶಿವರಾಂ ಹೆಬ್ಬಾರ್-ಉ.ಕನ್ನಡ

ಎಸ್.ಟಿ.ಸೋಮಶೇಖರ್- ಮೈಸೂರು/ಚಾಮರಾಜನಗರ

ಬಿ.ಸಿ.ಪಾಟೀಲ್-ಹಾವೇರಿ

ಬೈರತಿ ಬಸವರಾಜ್- ದಾವಣಗೆರೆ

ಡಾ.ಕೆ.ಸುಧಾಕರ್-ಚಿಕ್ಕಬಳ್ಳಾಪುರ

ಕೆ.ಗೋಪಾಲಯ್ಯ-ಹಾಸನ

ಶಶಿಕಲಾ ಜೊಲ್ಲೆ-ವಿಜಯಪುರ

ಎಂಟಿಬಿ ನಾಗರಾಜ್-ಬೆಂ.ಗ್ರಾಮಾಂತರ

ನಾರಾಯಣ ಗೌಡ-ಮಂಡ್ಯ

ಬಿ.ಸಿ.ನಾಗೇಶ್-ಯಾದಗಿರಿ

ಸುನಿಲ್ ಕುಮಾರ್-ಉಡುಪಿ

ಹಾಲಪ್ಪ ಆಚಾರ್-ಕೊಪ್ಪಳ

ಶಂಕರ್ ಮುನೇನಕೊಪ್ಪ- ಧಾರವಾಡ

ಮುನಿರತ್ನ-ಕೋಲಾರ

ABOUT THE AUTHOR

...view details