ಕರ್ನಾಟಕ

karnataka

ETV Bharat / state

ವೋಟರ್​ ಲಿಸ್ಟ್​​ನಲ್ಲಿ ಹೆಸರು ಇಲ್ಲದಿದ್ರೆ ಮತದಾರರು ಗಲಾಟೆ ಮಾಡೋ ಹಾಗಿಲ್ಲ

ಚುನಾವಣೆಗೆ 48 ಗಂಟೆ ಇರುವಾಗ 144 ಸೆಕ್ಷನ್ ಜಾರಿಯಾಗುತ್ತದೆ. ಆ ಸಮಯದಲ್ಲಿ ಐದು ಜನಕ್ಕಿಂತ ಹೆಚ್ಚು ಜನ ಒಟ್ಟು ಸೇರಬಾರದು. 48 ಗಂಟೆಗಳಲ್ಲಿ ಬೇರೆ ಮತದಾರರು, ನಾಯಕರು ಬೇರೆ ಕಡೆಯಿಂದ ಬೇರೆ ಕ್ಷೇತ್ರಕ್ಕೆ ಬಂದು ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳುವ ಹಾಗಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದರು.

ಜಿಲ್ಲಾ ಚುನಾವಣಾಧಿಕಾರಿ

By

Published : Apr 13, 2019, 8:14 PM IST

ಬೆಂಗಳೂರು: ದೇಶದಲ್ಲಿ ನಡೆದ ಒಂದನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಹಿಂಸಾಚಾರ ಹಾಗೂ ಅಹಿತಕರ ಘಟನೆಗಳು ನಡೆದ ಹಿನ್ನೆಲೆ ಬೆಂಗಳೂರಲ್ಲಿ ಪೂರ್ವಸಿದ್ಧತೆ ಕೈಗೊಳ್ಳಲಾಗಿದೆ.

ವೋಟರ್ ಲಿಸ್ಟ್​ನಲ್ಲಿ ಮತದಾರರ ಹೆಸರಿಲ್ಲದಿದ್ದರೆ ಜನರು ಗಲಾಟೆ ಮಾಡುವ ಹಾಗಿಲ್ಲ. ಇದಕ್ಕೆ ಅಧಿಕಾರಿಗಳು ಕಾರಣರಾಗೋದಿಲ್ಲ. ಜನರೇ ಫಾರ್ಮ್ ಸಿಕ್ಸ್ ಮೂಲಕ ನೋಂದಣಿಗೆ ಅಥವಾ ಸ್ಥಳ ಬದಲಾವಣೆಗೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಹೀಗಾಗಿ ಇದರಲ್ಲಿ ಅಧಿಕಾರಿಗಳ ಪಾತ್ರವಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದರು.

18ರಂದು ನಡೆಯುವ ಲೋಕಸಭಾ ಚುನಾವಣೆ ಮತದಾನಕ್ಕೆ ನಡೆಸಿರುವ ಸಿದ್ಧತೆಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, 15 ರಂದು ಎಲ್ಲಾ ಅಭ್ಯರ್ಥಿಗಳು ತಮ್ಮ ಚುನಾವಣೆ ಖರ್ಚಿನ ವಿವರವನ್ನು ಸಲ್ಲಿಸಬೇಕು. ಆ ದಿನ ಫ್ಲೈಯಿಂಗ್ ಸ್ಕ್ಯಾಡ್​ಗಳನ್ನು ಹೆಚ್ಚು ನಿಯೋಜನೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಆಮಿಷ ಒಡ್ಡಿದರೆ ಹಾಗೂ ಅದನ್ನು ಯಾರಾದರೂ ತೆಗೆದುಕೊಂಡರೆ ಅವರ ವಿರುದ್ಧ ಎಫ್​ಐಆರ್ ದಾಖಲು ಮಾಡಲಾಗುತ್ತದೆ ಎಂದರು.

ಜಿಲ್ಲಾ ಚುನಾವಣಾಧಿಕಾರಿ

ಚುನಾವಣೆಗೆ 48 ಗಂಟೆ ಇರುವಾಗ 144 ಸೆಕ್ಷನ್ ಜಾರಿಯಾಗುತ್ತದೆ. ಆ ಸಮಯದಲ್ಲಿ ಐದು ಜನಕ್ಕಿಂತ ಹೆಚ್ಚು ಜನ ಒಟ್ಟು ಸೇರಬಾರದು. 48 ಗಂಟೆಗಳಲ್ಲಿ ಬೇರೆ ಮತದಾರರು, ನಾಯಕರು ಬೇರೆ ಕಡೆಯಿಂದ ಬೇರೆ ಕ್ಷೇತ್ರಕ್ಕೆ ಬಂದು ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳುವ ಹಾಗಿಲ್ಲ. ಲಾಡ್ಜ್, ಕಲ್ಯಾಣ ಮಂಟಪಗಳು, ಧಾರ್ಮಿಕ ಕೇಂದ್ರಗಳಲ್ಲೂ ಚೆಕ್ಕಿಂಗ್​​ ನಡೆಯಲಿದೆ. ಡ್ರೈ ಡೇ ಎಂದು ಘೋಷಿಸಲಾಗುತ್ತದೆ. ಮದ್ಯ ಮಾರಾಟವಿಲ್ಲ. ಧ್ವನಿವರ್ಧಕ ಬಳಸುವ ಹಾಗಿಲ್ಲ. ಮಾಧ್ಯಮಗಳೂ ಚುನಾವಣಾ ರಿಸಲ್ಟ್​​ಗಳನ್ನು ಘೋಷಿಸೋ ಹಾಗಿಲ್ಲ ಎಂದು ಎಚ್ಚರಿಕೆ ನೀಡಿದರು.

ಇವಿಎಂ ಮಷಿನ್ ಹಾಗೂ ವಿವಿ ಪ್ಯಾಟ್​ಗಳನ್ನು ಇಟ್ಟಿರುವ ಸ್ಟ್ರಾಂಗ್ ರೂಂಗಳನ್ನು ಇಪ್ಪತ್ತೆಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮಾಡಲಾಗಿದೆ. ಇಲ್ಲಿ ಪೊಲೀಸರು, ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. 17 ರಂದು ಇವಿಎಂಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿದ್ದು, 18 ರಂದು ರಾತ್ರಿ ಎಲೆಕ್ಷನ್ ಕೌಂಟಿಂಗ್ ಸೆಂಟರ್​ಗೆ ತೆಗೆದುಕೊಂಡು ಹೋಗಿ ಮೇ 23ರವರೆಗೂ ಮೂರು ಸುತ್ತಿನ ಭದ್ರತೆ ನೀಡಲಾಗುತ್ತದೆ ಎಂದರು.

ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ನಾಲ್ವರು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್​ಗಳಿದ್ದು, ನಿಯಮಗಳ ಪ್ರಕಾರ ಅವುಗಳ ಬಗ್ಗೆ ಜಾಹೀರಾತು ನೀಡಬೇಕು. ಆದರೆ, ಪ್ರಕಾಶ್ ರೈ ಬಿಟ್ಟರೆ ಸ್ವತಂತ್ರ ಅಭ್ಯರ್ಥಿಗಳಾದ ಕೆ.ವಿ.ಜಗದೀಶ್ ಕುಮಾರ್, ಹನುಮೇಗೌಡ, ಕೊಲ್ಲೂರ ಮಂಜುನಾಥ್ ನಾಯಕ ಇವರೆಲ್ಲರಿಗೂ ನೋಟಿಸ್​ ನೀಡಲಾಗಿದೆ. ಚುನಾವಣೆಗೆ ಮೊದಲೇ ಜಾಹೀರಾತು ನೀಡಬೇಕು ಎಂದು ಮಾಹಿತಿ ನೀಡಿದರು.

For All Latest Updates

TAGGED:

ABOUT THE AUTHOR

...view details