ಕರ್ನಾಟಕ

karnataka

ETV Bharat / state

ಎರಡು ತಿಂಗಳ ಪಡಿತರ ವಿತರಣೆ ಇಂದಿನಿಂದ ಆರಂಭ : ಸಚಿವ ಕೆ.ಗೋಪಾಲಯ್ಯ

ಏಪ್ರಿಲ್ ಮತ್ತು ಮೇ ಸೇರಿ ಎರಡೂ ತಿಂಗಳ ಪಡಿತರವನ್ನು ಇಂದಿನಿಂದಲೇ ವಿತರಣೆಯಾಗಲಿದೆ. ಕಡುಬಡವರ ಅಂತ್ಯೋದಯ ಕಾರ್ಡುದಾರರಿಗೆ ಎರಡು ತಿಂಗಳ 70 ಕೆ.ಜಿ. ಅಕ್ಕಿ ದೊರೆಯಲಿದೆ. ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ಯೂನಿಟ್​ಗೆ 5 ಕೆ.ಜಿ ಅಕ್ಕಿ, ಪ್ರತಿ ಕಾರ್ಡ್​​​ಗೆ 2 ಕೆಜಿ ಗೋಧಿ ವಿತರಣೆಯಾಗಲಿದೆ.

ಕೊರೋನಾ ಎಫೆಕ್ಟ್
ಎರಡು ತಿಂಗಳ ಪಡಿತರ ವಿತರಣೆ ಇಂದಿನಿಂದ ಆರಂಭ

By

Published : Apr 1, 2020, 12:43 PM IST

ಬೆಂಗಳೂರು :ಕೊರೊನಾ ಎಫೆಕ್ಟ್ ಹಿನ್ನೆಲೆಯಲ್ಲಿ ಪಡಿತರ ವಿತರಣೆಯನ್ನು ಇಂದಿನಿಂದ ರಾಜ್ಯ ಸರ್ಕಾರ‌ ಆರಂಭಿಸಿದೆ.

ಏಪ್ರಿಲ್ ಮತ್ತು ಮೇ ಸೇರಿ ಎರಡೂ ತಿಂಗಳ ಪಡಿತರವನ್ನು ಇಂದಿನಿಂದಲೇ ವಿತರಣೆಯಾಗಲಿದೆ. ಕಡುಬಡವರ ಅಂತ್ಯೋದಯ ಕಾರ್ಡುದಾರರಿಗೆ ಎರಡು ತಿಂಗಳ 70 ಕೆ.ಜಿ. ಅಕ್ಕಿ ದೊರೆಯಲಿದೆ. ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ಯೂನಿಟ್​ಗೆ 5 ಕೆ.ಜಿ ಅಕ್ಕಿ, ಪ್ರತಿ ಕಾರ್ಡಿಗೆ 2 ಕೆಜಿ ಗೋಧಿ ವಿತರಣೆಯಾಗಲಿದೆ.

ಈ ಬಗ್ಗೆ ಮಾಹಿತಿ ನೀಡಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ. ಗೋಪಾಲಯ್ಯ, ಏಪ್ರಿಲ್ 10ರ ಒಳಗೆ ರಾಜ್ಯದ ಪಡಿತರ ವಿತರಣೆ ಪೂರ್ಣಗೊಳಿಸುವ ಗುರಿ‌ ಇದೆ ಎಂದು ಹೇಳಿದರು.

ಏಪ್ರಿಲ್ 10ರ ನಂತರ ಕೇಂದ್ರ ಸರ್ಕಾರದ ಪಡಿತರ ಪ್ಯಾಕೇಜ್ ವಿತರಣೆ ಶುರುವಾಗಲಿದೆ. ಈಗಾಗಲೇ ಬೆರಳಚ್ಚು ವಿಧಾನ ರದ್ದು ಮಾಡಲಾಗಿದೆ. ಓಟಿಪಿ ಆಧಾರದ ಹಂಚಿಕೆಯೂ ರದ್ದಾಗಬೇಕಿದೆ. ಸಾಮಾಜಿಕ ಅಂತರ ಕಾಯಲು ಓಟಿಪಿ ರದ್ದಾಗಬೇಕು ಎಂಬುದು ಪಡಿತರ ವಿತರಕರ ಆಗ್ರಹವಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ‌ ಇಂದೇ ಪಡಿತರ ವಿತರಣೆ ಶುರುವಾಗಲಿದೆ, ಹಳ್ಳಿಗಳಲ್ಲಿ ವಿತರಣೆಗೆ ಎರಡು ದಿನ ಸಮಯ ಬೇಕಾಗಬಹುದು ಎಂದರು.

ABOUT THE AUTHOR

...view details