ಬೆಂಗಳೂರು :ಕೊರೊನಾ ತಡೆಗಟ್ಟುವ ಸಲುವಾಗಿ ದೇಶದಾದ್ಯಂತ ಲಾಕ್ಡೌನ್ ಮಾಡಲಾಗಿದ್ದು, ಇದರಿಂದಾಗಿ ಬಡ ಜನರು ಹಾಗೂ ದಿನಗೂಲಿ ನೌಕರರಿಗೆ ಭಾರತೀಯರ ಸೇವಾ ಸಮಿತಿ ಸದಸ್ಯರು ಅಕ್ಕಿ, ಬೆಳೆ ಸೇರಿದಂತೆ ಇತರೆ ಆಹಾರ ಸಾಮಗ್ರಿಗಳನ್ನು ವಿತರಿಸಿದ್ದಾರೆ.
ಬಿಎಸ್ಎಸ್ ವತಿಯಿಂದ ಬಡವರು,ದಿನಗೂಲಿ ನೌಕರರಿಗೆ ದಿನಸಿ ಸಾಮಾಗ್ರಿಗಳ ವಿತರಣೆ.. - ಬಿಎಸ್ಎಸ್ ಸಂಘಟನೆಯ ರಾಜ್ಯಾದ್ಯಕ್ಷ ಡಾ.ರಾಮಚಂದ್ರ
ಮಹದೇವಪುರ ಕ್ಷೇತ್ರದ ಹೂಡಿ, ರಾಜಪಾಳ್ಯ, ಬಸವಣ್ಣನಗರ ಸೇರಿದಂತೆ ಇನ್ನಿತರೆ ಏರಿಯಾಗಳಲ್ಲಿ ಬಿಎಸ್ಎಸ್ ಸಂಘಟನೆಯ ವತಿಯಿಂದ 10 ಸಾವಿರಕ್ಕೂ ಹೆಚ್ಚು ಆಹಾರ ಸಾಮಗ್ರಿಗಳ ಪ್ಯಾಕೆಟ್ಳನ್ನು ವಿತರಿಸಿದ್ರು.
ಮಹದೇವಪುರ ಕ್ಷೇತ್ರದ ಹೂಡಿ, ರಾಜಪಾಳ್ಯ, ಬಸವಣ್ಣನಗರ ಸೇರಿದಂತೆ ಇನ್ನಿತರೆ ಏರಿಯಾಗಳಲ್ಲಿ ಬಿಎಸ್ಎಸ್ ಸಂಘಟನೆಯ ರಾಜ್ಯಾದ್ಯಕ್ಷ ಡಾ.ರಾಮಚಂದ್ರ ನೇತೃತ್ವದಲ್ಲಿ 10 ಸಾವಿರಕ್ಕೂ ಹೆಚ್ಚು ಆಹಾರ ಸಾಮಗ್ರಿಗಳ ಪ್ಯಾಕೆಟ್ಳನ್ನು ವಿತರಿಸಿದ್ರು.
ಈ ವೇಳೆ ಮಾತನಾಡಿದ ಬಿಎಸ್ಎಸ್ ರಾಜ್ಯಾದ್ಯಕ್ಷ,ಲಾಕ್ಡೌನ್ನಿಂದಾಗಿ ಜನರು ತಿನ್ನಲು ಅನ್ನವಿಲ್ಲದೆ ಹಸಿವಿನಿಂದ ಸಾಯುವಂತಹ ಪರಿಸ್ಥಿತಿ ಬಂದೊದಗಿದ್ದು,ಈಗಾಗಲೇ ಹಲವು ನಾಯಕರುಗಳು ಬಡಜನರಿಗೆ ಸಹಾಯ ಮಾಡುತ್ತಿದ್ದಾರೆ. ಹಣವುಳ್ಳವರು ತಮ್ಮ ಗ್ರಾಮಗಳ ಬಡ ಜನರಿಗೆ ತಮ್ಮ ಕೈಲಾದ ಸಹಾಯ ಮಾಡಿ ಜನರ ಹಸಿವನ್ನು ನೀಗಿಸಬೇಕೆಂದು ಮನವಿ ಮಾಡಿದರು.