ಕರ್ನಾಟಕ

karnataka

ETV Bharat / state

ಪ್ರವಾಸೋದ್ಯಮ ಅಭಿವೃದ್ಧಿ ಅನುದಾನದಲ್ಲಿ ಕರ್ನಾಟಕ ಕಡೆಗಣನೆ: ಈ ಅಂಕಿಅಂಶಗಳನ್ನು ನೋಡಿ.. - ಪ್ರವಾಸೋದ್ಯಮ ಅಭಿವೃದ್ಧಿ ಅನುದಾನದಲ್ಲಿ ಕರ್ನಾಟಕಕ್ಕೆ ಕಡೆಗಣನೆ,

ನಗರದ ಖಾಸಗಿ ಹೋಟೆಲ್​ನಲ್ಲಿ ದಕ್ಷಿಣ ರಾಜ್ಯದ ಪ್ರವಾಸೋದ್ಯಮ ಸಚಿವರ ಸಮ್ಮೇಳನ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಮಾಧ್ಯಮ ಹೇಳಿಕೆಯಲ್ಲಿ ಕರ್ನಾಟಕಕ್ಕೆ ಅನುದಾನ ಮೀಸಲಾಗದೇ ಇರುವುದು ತಿಳಿದುಬಂದಿದೆ.

Tourism Development Grant, Disregard for Karnataka in Tourism Development Grant, Tourism Development Grant news, ಪ್ರವಾಸೋದ್ಯಮ ಅಭಿವೃದ್ಧಿ ಅನುದಾನ, ಪ್ರವಾಸೋದ್ಯಮ ಅಭಿವೃದ್ಧಿ ಅನುದಾನದಲ್ಲಿ ಕರ್ನಾಟಕಕ್ಕೆ ಕಡೆಗಣನೆ, ಪ್ರವಾಸೋದ್ಯಮ ಅಭಿವೃದ್ಧಿ ಅನುದಾನ ಸುದ್ದಿ,
ಪ್ರವಾಸೋದ್ಯಮ ಅಭಿವೃದ್ಧಿ ಅನುದಾನದಲ್ಲಿ ಕರ್ನಾಟಕಕ್ಕೆ ಕಡೆಗಣನೆ

By

Published : Oct 28, 2021, 12:45 PM IST

ಬೆಂಗಳೂರು: ದಕ್ಷಿಣ ಭಾರತ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆಂದು ಸ್ವದೇಶಿ ಯೋಜನೆಯಡಿ 2014 ರಿಂದ ಒಟ್ಟು 1,185.15 ಕೋಟಿ ರೂಪಾಯಿ ಅನುದಾನ ಸಿಕ್ಕಿದ್ದು, ಈ ಪೈಕಿ ಕರ್ನಾಟಕಕ್ಕೆ ಯಾವುದೇ ರೀತಿಯ ಅನುದಾನವೇ ಮೀಸಲಾಗಿಲ್ಲ.

ಅಂಕಿಅಂಶ

ನಗರದ ಖಾಸಗಿ ಹೋಟೆಲ್​ನಲ್ಲಿ ದಕ್ಷಿಣ ರಾಜ್ಯದ ಪ್ರವಾಸೋದ್ಯಮ ಸಚಿವರ ಸಮ್ಮೇಳನ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಮಾಧ್ಯಮ ಹೇಳಿಕೆಯಲ್ಲಿ ಕರ್ನಾಟಕಕ್ಕೆ ಅನುದಾನ ಮೀಸಲಾಗದೇ ಇರುವುದು ತಿಳಿದುಬಂದಿದೆ.

ಅಂಕಿಅಂಶ

ಕರ್ನಾಟಕ ಹೊರತುಪಡಿಸಿ ದ.ಭಾರತದ ಎಲ್ಲಾ ರಾಜ್ಯಗಳಿಗೂ ಅನುದಾನ:

ಆಂಧ್ರಪ್ರದೇಶದ:ಆರ್ಥಿಕ ವರ್ಷ 2014-15 ರಿಂದ 2017-18 ರವರೆಗೆ ಒಟ್ಟು ₹141.53 ಕೋಟಿ ಅನುದಾನ ಮಿಸಲಾಗಿದ್ದು, ಈ ವರೆಗೆ ₹141.77 ಕೋಟಿ ಜೊತೆ ಹೆಚ್ಚುವರಿ ₹24 ಲಕ್ಷ ಬಿಡುಗಡೆಯಾಗಿದೆ.

ಸಾಂದರ್ಭಿಕ ಚಿತ್ರ

ಕೇರಳ:ಆರ್ಥಿಕ ವರ್ಷ 2015-16 ರಿಂದ 2018-19 ರವರೆಗೆ ₹413.58 ಕೋಟಿ ಅನುದಾನ ಮಿಸಲಾಗಿದ್ದು, ₹180.39ಕೋಟಿ ಅನುದಾನ ಬಿಡುಗಡೆ ಆಗಿದೆ.

ಸಾಂದರ್ಭಿಕ ಚಿತ್ರ

ತಮಿಳುನಾಡು: ಆರ್ಥಿಕ ವರ್ಷ 2016-17 ಕ್ಕೆ ₹73.13 ಕೋಟಿ ಮಿಸಲಾಗಿದ್ದು 68.6 ಕೋಟಿ ಬಿಡುಗಡೆ ಆಗಿದೆ.

ಸಾಂದರ್ಭಿಕ ಚಿತ್ರ

ತೆಲಂಗಾಣ:ಆರ್ಥಿಕ ವರ್ಷ 2015-16 ರಿಂದ 2017-18 ರವರೆಗೆ ₹268.39 ಕೋಟಿ ಮಿಸಲಾಗಿದ್ದು ₹233.53ಕೋಟಿ ಬಿಡುಗಡೆ ಆಗಿದೆ.

ಸಾಂದರ್ಭಿಕ ಚಿತ್ರ

ಪುದುಚೇರಿ: ಆರ್ಥಿಕ ವರ್ಷ 2015-16 ರಿಂದ 2017-18 ರವರೆಗೆ ₹113. 35ಕೋಟಿ ಮಿಸಲಾಗಿದ್ದು, ₹142.76 ಕೋಟಿ ಬಿಡುಗಡೆ ಆಗಿದೆ. ಹೆಚ್ಚುವರಿಯಾಗಿ ₹29.41 ಕೋಟಿ ಬಿಡುಗಡೆ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಇದಲ್ಲದೇ, ಪ್ರಶಾದ್ ಯೋಜನೆಯಲ್ಲೂ ಆಂಧ್ರಪ್ರದೇಶ, ಕೇರಳ ಹಾಗೂ ತಮಿಳುನಾಡು ರಾಜ್ಯಕ್ಕೆ ಒಟ್ಟು ₹140.21 ಕೋಟಿ ಅನುಮತಿ ನೀಡಿದ್ದು, ಈವರೆಗೆ ₹121.49 ಕೋಟಿ ಅನುದಾನ ಬಿಡುಗಡೆ ಆಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಇಲಾಖೆ ಅಂಕಿಅಂಶಗಳು ಹೇಳುತ್ತಿವೆ.

ABOUT THE AUTHOR

...view details