ನವದೆಹಲಿ:ಅನರ್ಹ ಶಾಸಕರ ರಾಜಕೀಯ ಜೀವನ ಕತ್ತರಿಯ ಮಧ್ಯೆ ಸಿಲುಕಿದ ಅಡಿಕೆಯಂತಾಗಿದ್ದು, ಉಪಚುನಾವಣೆ ಮುಂದೂಡುವಂತೆ ಮತ್ತೆ ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದಾರೆ.
ಚುನಾವಣೆ ಮುಂದೂಡುವಂತೆ ಮತ್ತೆ ಸುಪ್ರಿಂ ಕದ ತಟ್ಟಿದ ಅನರ್ಹರು - ಉಪಚುನಾವಣೆ
ಮೈತ್ರಿ ಸರ್ಕಾರದಿಂದ ಹೊರಬಂದು ಅನರ್ಹರಾಗಿರುವ ಶಾಸಕರ ಪಾಡು ಇಕ್ಕಟ್ಟಿಗೆ ಸಿಲುಕಿದಂತಾಗಿದ್ದು, ಇದೀಗ ಉಪಚುನಾವಣೆ ಮುಂದೂಡುವಂತೆ ಮತ್ತೆ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದ್ದಾರೆ.
ಸುಪ್ರಿಂ ಕದ ತಟ್ಟಿದ ಅನರ್ಹರು
ಅನರ್ಹ ಶಾಸಕರ ಅರ್ಜಿ ವಿಚಾರಣೆ ಇನ್ನೂ ಕೂಡಾ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಮುಂದಿನ ಉಪಚುನಾವಣೆಯಲ್ಲಿ ಅವರು ಸ್ಪರ್ಧಿಸಬೇಕೋ? ಬೇಡವೋ ಎಂಬುದು ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಇದರಿಂದಾಗಿ ಅನರ್ಹ ಶಾಸಕರ ಪರವಾಗಿ ವಾದಿಸುತ್ತಿರುವ ಹಿರಿಯ ವಕೀಲ ಮುಕುಲ್ ರೋಹ್ಟಗಿ ಉಪಚುನಾವಣೆಯನ್ನು ಮುಂದೂಡುವಂತೆ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ.
ಸೋಮವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗುವ ಕಾರಣದಿಂದ ಅನರ್ಹ ಶಾಸಕರು ಮತ್ತಷ್ಟು ಪೇಚಿಗೆ ಸಿಲುಕಿದ್ದಾರೆ. ಅವರಿಗೆ ನಾಮಪತ್ರ ಸಲ್ಲಿಸುವ ಅವಕಾಶ ಸಿಗುತ್ತದೆಯೋ ಇಲ್ಲವೋ ಕಾದು ನೋಡಬೇಕಾಗಿದೆ.