ಕರ್ನಾಟಕ

karnataka

ETV Bharat / state

ಸುಪ್ರೀಂ ತೀರ್ಪಿನಿಂದ ಲಾಭ-ನಷ್ಟ ಎರಡೂ ಇದೆ: ಶ್ರೀಮಂತ್ ಪಾಟೀಲ್ - Suprem court verdict on disqualified MLA

ಅನರ್ಹ ಶಾಸಕರ ಬಗ್ಗೆ ಇಂದು ಸುಪ್ರೀಂಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅನರ್ಹ ಶಾಸಕ ಶ್ರೀಮಂತಪಾಟೀಲ್ ಇದರಿಂದ ನಮಗೆ ಲಾಭ ನಷ್ಟ ಎರಡು ಇದೆ ಎಂದಿದ್ದಾರೆ.

ಶ್ರೀಮಂತ್ ಪಾಟೀಲ್

By

Published : Nov 13, 2019, 2:02 PM IST

ಬೆಂಗಳೂರು:ಸುಪ್ರೀಂಕೋರ್ಟ್​ ತೀರ್ಪಿನ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ತೀರ್ಪಿನಿಂದ ನಮಗೆ ಲಾಭ, ನಷ್ಟ ಎರಡೂ ಇದೆ ಎಂದರು.

ಸುಪ್ರೀಂಕೋರ್ಟ್,​ ಚುನಾವಣೆಗೆ ನಿಲ್ಲೋಕೆ ನಮಗೆ ಅವಕಾಶ ನೀಡಿದೆ. ಇದರಿಂದ ನಮಗೆ ಸಂತೋಷ ಆಗಿದೆ. ಆದರೆ ಅನರ್ಹತೆ ಎತ್ತಿ ಹಿಡಿದಿದ್ದು ಸ್ವಲ್ಪ ತ್ರಾಸ್ ಆಗಿದೆ. ಬೇರೆಯವರಂತೆ ನನಗಿದು ಅನ್ವಯವಾಗುತ್ತಿರಲಿಲ್ಲ. ನಾನು ಆಸ್ಪತ್ರೆಗೆ ದಾಖಲಾಗಿದ್ದರಿಂದ ರಾಜೀನಾಮೆ ನೀಡಿದ್ದೆ ಎಂದರು.

ಈಗ ನಾನು ಕ್ಷೇತ್ರಕ್ಕೆ ತೆರಳಿ ಮತದಾರರನ್ನು ಭೇಟಿ ಮಾಡಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವೆ. ಇನ್ನ ಯಾವ ಪಕ್ಷಕ್ಕೆ ಸೇರಬೇಕು ಅಂತ ನಿರ್ಧರಿಸಿಲ್ಲ. ಇಂದು ರಾತ್ರಿ ತೆರಳಿದ ನಂತರ ತೀರ್ಮಾನಿಸುತ್ತೇವೆ. ಗೆಲ್ಲುವ ವಿಚಾರದಲ್ಲಿ ನಮಗೆ ಸಮಸ್ಯೆಯಿಲ್ಲ. ರಾಜು ಕಾಗೆ ಕಾಂಗ್ರೆಸ್​ಗೆ ಹೋದ್ರೆ ಸಮಸ್ಯೆಯೇನಿಲ್ಲ. ನಾನು ನಿರಾಯಾಸವಾಗಿ ಗೆಲ್ಲುತ್ತೇನೆ ಎಂದರು.

ABOUT THE AUTHOR

...view details