ಕರ್ನಾಟಕ

karnataka

ETV Bharat / state

ಮಹದೇವಪುರ ವಾರ್ಡ್​ ಜನ ನೀಡಿದ ಪರಿಹಾರ ಸಾಮಗ್ರಿಗಳ ರವಾನೆ - ದೊಡ್ಡನೆಕ್ಕುಂದಿ

ಮಹದೇವಪುರ ವಾರ್ಡ್​ ಜನರಿಂದ ನೆರೆ ಸಂತ್ರಸ್ತರಿಗಾಗಿ ಸಂಗ್ರಹಿಸಿದ ನಿತ್ಯ ಉಪಯೋಗಿಸುವ ಸಾಮಗ್ರಿಗಳನ್ನು ರವಾನೆ ಮಾಡಲಾಯಿತು.

ಮಹದೇವಪುರ ವಾರ್ಡ್​ ಜನ ನೀಡಿದ ಪರಿಹಾರ ಸಾಮಗ್ರಿಗಳ ರವಾನೆ ಮಾಡಲಾಯಿತು.

By

Published : Aug 17, 2019, 10:06 AM IST

ಬೆಂಗಳೂರು:ಇಲ್ಲಿನ ಮಹದೇವಪುರ ವಾರ್ಡ್​ ಜನರಿಂದ ನೆರೆ ಸಂತ್ರಸ್ತರಿಗಾಗಿ ಸಂಗ್ರಹಿಸಿದ ನಿತ್ಯ ಉಪಯೋಗಿಸುವ ಸಾಮಗ್ರಿಗಳನ್ನು ರವಾನೆ ಮಾಡಲಾಯಿತು.

ಮಹದೇವಪುರ ವಾರ್ಡ್​ ಜನ ನೀಡಿದ ಪರಿಹಾರ ಸಾಮಗ್ರಿಗಳ ರವಾನೆ ಮಾಡಲಾಯಿತು.

ವಸ್ತುಗಳಾದ ಬಟ್ಟೆ, ಪೇಸ್ಟ್ ಬ್ರೆಶ್, ಹಾಲು, ಅಕ್ಕಿ‌ಮೂಟೆ, ನೀರು, ಗೋಧಿಹಿಟ್ಟು, ನ್ಯಾಪ್ಕಿನ್, ಪ್ಯಾಡ್ ಮುಂತಾದ ಅಗತ್ಯವಾದ ವಸ್ತುಗಳನ್ನು ಮಹದೇವಪುರ ಕ್ಷೇತ್ರದ ದೊಡ್ಡನೆಕ್ಕುಂದಿಯಲ್ಲಿ ಬಿಬಿಎಂಪಿ ಸದಸ್ಯೆ ಶ್ವೇತಾ ವಿಜಿ ಕುಮಾರ್ ಹಾಗೂ ಕಾರ್ಯಕರ್ತರ ನೇತೃತ್ವದಲ್ಲಿ ಸಂಗ್ರಹಣೆ ಮಾಡಿದ ವಸ್ತುಗಳನ್ನು ನೆರೆ ಸಂತ್ರಸ್ತರಿಗೆ ಎರಡು ಕ್ಯಾಂಟರ್ ವಾಹನಗಳ ಮೂಲಕ ತಲುಪಿದರು.

ನಮ್ಮ ಕಚೇರಿಗೆ ಎರಡು ದಿನಗಳ ಹಿಂದಿನಿಂದಲೂ ಇಲ್ಲಿನ ಸಾರ್ವಜನಿಕರು ಹಾಗೂ ಸ್ಥಳೀಯರು ಅಗತ್ಯವಿರುವ ವಸ್ತುಗಳನ್ನು ನೀಡುತ್ತಿದ್ದಾರೆ. ಇಂತಹ ಕೆಲಸಗಳಿಗೆ ಗ್ರಾಮದ ಜನರ ಪ್ರೋತ್ಸಾಹವನ್ನು ಕಂಡು ನನಗೆ ಖುಷಿಯಾಗಿದೆ ಎಂದು ಪಾಲಿಕೆ ಸದಸ್ಯೆ ಶ್ವೇತಾ ವಿಜಿ ಕುಮಾರ್ ತಿಸಿಳಿದರು .

ಸಂಗ್ರಹಣೆಯಾದ ವಸ್ತುಗಳನ್ನು ಎರಡು ಕ್ಯಾಂಟರ್​ಗಳಲ್ಲಿ ತುಂಬಿಸಿ ಮಂಗಳೂರಿನ ಕಡೆಗೆ ಹಾಗೂ ಬಾಗಲಕೋಟೆಯ ಕಡೆಗೆ ತಲುಪಿಸುತ್ತಿದ್ದೇವೆ ಎಂದರು.

ABOUT THE AUTHOR

...view details