ಬೆಂಗಳೂರು :ಮಹಿಳಾ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ವಿಕಾಸಸೌಧದ ಎಲ್ಲಾ ಕೊಠಡಿಗಳಿಗೂ ಸೋಂಕು ನಿರ್ಮೂಲನಾ ದ್ರಾವಣವನ್ನು ಸಿಂಪಡಿಸಿ, ನೌಕರರಿಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ಸೂಚಿಸಲಾಗಿತ್ತು. ಹೀಗಾಗಿ ಇಂದು ವಿಕಾಸಸೌಧ ಸಂಪೂರ್ಣ ಬಂದ್ ಆಗಿತ್ತು.
ನಾಳೆ ವಿಧಾನಸೌಧಕ್ಕೂ ಸೋಂಕು ನಿರ್ಮೂಲನಾ ದ್ರಾವಣ ಸಿಂಪಡಣೆ.. ಭಾನುವಾರ ಸಂಪೂರ್ಣ ಬಂದ್! ಬಿಬಿಎಂಪಿ ಸಿಬ್ಬಂದಿ ನಿನ್ನೆ ಸಂಜೆಯಿಂದಲೇ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಕಾರ್ಯದಲ್ಲಿ ತೊಡಗಿದೆ. ಇಂದು ಸಂಪೂರ್ಣವಾಗಿ ಪೂರ್ಣಗೊಳಿಸಿದ್ದಾರೆ. ವಿಕಾಸಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಚಿವಾಲಯದ ಸಿಬ್ಬಂದಿಗೆ ಕಚೇರಿ ಬಂದು ಕೆಲಸ ಮಾಡುವುದಕ್ಕೆ ವಿನಾಯಿತಿ ನೀಡಲಾಗಿದೆ. ಮನೆಯಿಂದಲೇ ಕಾರ್ಯನಿರ್ವಹಿಸಲು ಸೂಚಿಸಲಾಗಿತ್ತು.
ನಾಳೆ ವಿಧಾನಸೌಧಕ್ಕೂ ಸೋಂಕು ನಿರ್ಮೂಲನಾ ದ್ರಾವಣ ಸಿಂಪಡಣೆ :ವಿಧಾನಸೌಧದಲ್ಲಿ ಕೆಲಸ ಮಾಡುತ್ತಿರುವ ಸಚಿವಾಲಯದ ಸಿಬ್ಬಂದಿ ಕೆಲಸದ ಅವಧಿ ಮುಗಿದ ನಂತರ ಬಿಬಿಎಂಪಿ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ವಿಧಾನಸೌಧದ ಎಲ್ಲಾ ಕೊಠಡಿಗಳಿಗೂ ವೈರಾಣು ನಿರ್ಮೂಲನಾ ದ್ರಾವಣವನ್ನು ಸಿಂಪಡಿಸಲು ನಿರ್ಧರಿಸಿದ್ದಾರೆ.
ಹಾಗಾಗಿ ನಾಳೆ ಸಂಜೆ 5 ಗಂಟೆ ನಂತರ ವಿಧಾನಸೌಧದ ಪ್ರತಿ ಕೊಠಡಿಗೂ ಸೋಂಕು ನಿರ್ಮೂಲನಾ ದ್ರಾವಣ ಸಿಂಪಡಿಸಲಿದ್ದಾರೆ. ವಿಧಾನಸೌಧ ಭಾನುವಾರ ಸಂಪೂರ್ಣ ಬಂದ್ ಆಗಿರಲಿದೆ. ವಿಧಾನಸೌಧದ ನಾಲ್ಕೂ ದ್ವಾರಗಳಲ್ಲಿ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನ್ ಟೆಸ್ಟ್ ಮಾಡಲಾಗುತ್ತದೆ. ಎಲ್ಲಾ ಅಧಿಕಾರಿ, ಸಿಬ್ಬಂದಿ ಹಾಗೂ ಕೆಲಸದ ನಿಮಿತ್ತ ಬರುವವರನ್ನು ಪರೀಕ್ಷೆ ನಡೆಸಿ ಒಳಗೆ ಬಿಡಲಾಗುತ್ತಿದೆ.