ಕರ್ನಾಟಕ

karnataka

ETV Bharat / state

ಕುಂದಗೋಳ ಬಂಡಾಯ ಥಂಡಾಯ.. ನಾನೂ ಅಲ್ಲಿಗೆ ಹೋಗಿ ಪ್ರಚಾರ ಮಾಡುವೆ- ಡಿಸಿಎಂ ಪರಮೇಶ್ವರ್ - undefined

ಕೆಪಿಸಿಸಿ ಅಧ್ಯಕ್ಷ ದಿನೇಶ್‍ ಗುಂಡೂರಾವ್ ಹಾಗೂ ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಅದನ್ನೆಲ್ಲ ಸರಿ ಮಾಡಿದ್ದಾರೆ. ಕುಂದಗೋಳದಲ್ಲಿ ಪ್ರಚಾರ ಕಾರ್ಯ ಆರಂಭವಾಗಿದೆ ಎಂದು ಡಿಸಿಎಂ ಡಾ. ಜಿ.ಪರಮೇಶ್ವರ್ ಹೇಳಿದರು.

ಡಿಸಿಎಂ ಜಿ ಪರಮೇಶ್ವರ್

By

Published : May 4, 2019, 3:05 PM IST

ಬೆಂಗಳೂರು:ಕುಂದಗೋಳ ಕ್ಷೇತ್ರದಲ್ಲಿ ಅಸಮಾಧಾನ ಈಗ ಇಲ್ಲ ಎಂದು ಡಿಸಿಎಂ ಡಾ. ಜಿ ಪರಮೇಶ್ವರ್ ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಕೆಪಿಸಿಸಿ ಅಧ್ಯಕ್ಷ ದಿನೇಶ್‍ ಗುಂಡೂರಾವ್ ಹಾಗೂ ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಅದನ್ನೆಲ್ಲ ಸರಿ ಮಾಡಿದ್ದಾರೆ. ಕುಂದಗೋಳದಲ್ಲಿ ಪ್ರಚಾರ ಕಾರ್ಯ ಆರಂಭವಾಗಿದೆ. ನಾನು ಕೂಡ ಹುಬ್ಬಳ್ಳಿ ಸಭೆಗೆ ಹೋಗುತ್ತಿದ್ದೇನೆ ಎಂದು ತಿಳಿಸಿದರು.

ಡಿಸಿಎಂ ಜಿ ಪರಮೇಶ್ವರ್

ಮಂಡ್ಯ ಕಾಂಗ್ರೆಸ್ ರೆಬೆಲ್ಸ್ ವಿರುದ್ಧ ಕ್ರಮ ಕೈಗೊಳ್ಳದ ವಿಚಾರ :

ಕೆಪಿಸಿಸಿ ಅಧ್ಯಕ್ಷರು ಈಗಾಗಲೇ ಹೇಳಿಕೆ ಕೊಟ್ಟಿದ್ದಾರೆ. ಆ ಬಗ್ಗೆ ಅವರು ತೀರ್ಮಾನ ಮಾಡಿದ್ದಾರೆ. ಸಾಧಕ ಬಾಧಕಗಳನ್ನ ನೋಡಿ, ಅವರನ್ನು ಕರೆದು ತೀರ್ಮಾನಿಸುತ್ತಾರೆ. ಇದೆಲ್ಲ ಅವರಿಗೆ ಬಿಟ್ಟದ್ದು. ಮೈತ್ರಿ ಸರ್ಕಾರದ ಮೇಲೆ ಈ ಬೆಳವಣಿಗೆ ಪರಿಣಾಮ ಬೀರಲ್ಲ. ಇದು ಸರ್ಕಾರದಲ್ಲಿ ಬಿರುಕು ಸೃಷ್ಟಿಸಲ್ಲ ಎಂದು ಸ್ಪಷ್ಟಪಡಿಸಿದರು.

For All Latest Updates

TAGGED:

ABOUT THE AUTHOR

...view details