ಕರ್ನಾಟಕ

karnataka

ETV Bharat / state

ರೋಗ ಕಣ್ಗಾವಲು ಡ್ಯಾಶ್‌ಬೋರ್ಡ್, ಮೊಬೈಲ್ ಅಪ್ಲಿಕೇಶನ್ ಬಿಡುಗಡೆಗೊಳಿಸಿದ ಸಚಿವ ದಿನೇಶ್ ಗುಂಡೂರಾವ್ - ಈಟಿವಿ ಭಾರತ್​ ಕನ್ನಡ ನ್ಯೂಸ್

ಭಾರತೀಯ ವಿಜ್ಞಾನ ಸಂಸ್ಥೆಯ ಆರ್ಟ್ ಪಾರ್ಕ್ ಕಛೇರಿಯಲ್ಲಿ ಡ್ಯಾಶ್‌ಬೋರ್ಡ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳನ್ನು ಸಚಿವ ದಿನೇಶ್ ಗುಂಡೂರಾವ್ ಅನಾವರಣಗೊಳಿಸದರು.

ಸಚಿವ ದಿನೇಶ್ ಗುಂಡೂರಾವ್
ಸಚಿವ ದಿನೇಶ್ ಗುಂಡೂರಾವ್

By ETV Bharat Karnataka Team

Published : Sep 8, 2023, 1:24 PM IST

Updated : Sep 8, 2023, 4:51 PM IST

ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವ ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು : ರೋಗ ಕಣ್ಗಾವಲು ಡ್ಯಾಶ್‌ಬೋರ್ಡ್ ಮತ್ತು ಮೊಬೈಲ್ ಅಪ್ಲಿಕೇಶನ್‌ ಪ್ರಿಸಂ- ಹೆಚ್(ಪ್ಲಾಟ್ಫಾರ್ಮ್ ಫಾರ್ ರಿಸರ್ಚ್, ಇಂಟಿಗ್ರೇಟೆಡ್, ಸರ್ವೆಲನ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಆಫ್ ಹೆಲ್ತ್) ಅನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಭಾರತೀಯ ವಿಜ್ಞಾನ ಸಂಸ್ಥೆಯ ಆರ್ಟ್ ಪಾರ್ಕ್ ಕಚೇರಿಯಲ್ಲಿ ಇಂದು ಅನಾವರಣಗೊಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡೆಂಗ್ಯೂ ಜ್ವರದಿಂದ ಹೆಚ್ಚುತ್ತಿರುವ ಹೊರೆಯು ಸಾರ್ವಜನಿಕ ಆರೋಗ್ಯದ ಪರಿಣಾಮಗಳ ಆತಂಕಕಾರಿ ಸೂಚನೆಯಾಗಿದೆ. ಭಾರತ ಜಾಗತಿಕ ಡೆಂಗ್ಯೂ ಹೊರೆಯ ಮೂರನೇ ಒಂದು ಭಾಗದ ನೆಲೆಯಾಗಿದೆ. ಡೆಂಗ್ಯೂ ಕಳೆದ ಕೆಲವು ಋತುಗಳಲ್ಲಿ ಹೆಚ್ಚುತ್ತಿದೆ. ಕರ್ನಾಟಕ ರಾಜ್ಯದ ಕೆಲವು ಭಾಗಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ಡೆಂಗ್ಯೂ ಸಂಖ್ಯೆಯು ಏರಿಕೆಯಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರೋಗ ನಿರ್ವಹಣೆಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಅನುಷ್ಠಾನಗೊಳಿಸುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿದೆ. ಕೋವಿಡ್ -19 ಸಮಯದಲ್ಲಿ ಈ ಸಂಸ್ಥೆಗಳ ಕೆಲಸವು ಉತ್ತಮ ಉದಾಹರಣೆಯಾಗಿದೆ ಎಂದರು.

ಭಾರತೀಯ ವಿಜ್ಞಾನ ಸಂಸ್ಥೆಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ರೊಬೊಟಿಕ್ಸ್ ಟೆಕ್ನಾಲಜಿ ಪಾರ್ಕ್‌ ಸಹಭಾಗಿತ್ವವನ್ನು ಹೊಂದಿದ್ದು, ಮುನ್ಸೂಚನೆಯ ವಿಶ್ಲೇಷಣೆಯನ್ನು ಅಭಿವೃದ್ಧಿಪಡಿಸಿದೆ. ಇದು ರೋಗ ನಿಯಂತ್ರಣ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ನೀತಿ ನಿರೂಪಕರು ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ. ರೋಗದ ಕಣ್ಣಾವಲು ಡ್ಯಾಶ್‌ಬೋರ್ಡ್ ಕರ್ನಾಟಕದಾದ್ಯಂತ ಜಿಲ್ಲಾ ಮತ್ತು ಉಪ-ಜಿಲ್ಲಾ ಮಟ್ಟದಲ್ಲಿ ಏಕಾಏಕಿ ಸಂಭವಿಸುವ ನಕ್ಷೆಯನ್ನು ಮತ್ತು ವರ್ಷಗಳ ಪ್ರಕರಣದ ಪ್ರವೃತ್ತಿಯನ್ನು ಒದಗಿಸುತ್ತದೆ ಎಂದು ಗುಂಡೂರಾವ್​ ನುಡಿದರು.

ಈ ಅಪ್ಲಿಕೇಶನ್ ಮೂಲಕ ನಾಲ್ಕು ವಾರಗಳ ಮುನ್ಸೂಚನೆಯ ನಕ್ಷೆಯನ್ನು ರಾಜ್ಯ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಮುನ್ಸೂಚನೆಗಳ ಜೊತೆಗೆ, ಸುಧಾರಿತ ವಿಶ್ಲೇಷಣೆಗಾಗಿ ಬಹು ಮೂಲಗಳಿಂದ ಡೇಟಾವನ್ನು ಪ್ರಮಾಣೀಕರಿಸಿ ಸುವ್ಯವಸ್ಥಿತಗೊಳಿಸಲಾಗುತ್ತದೆ. ಅನ್- ಗ್ರೌಂಡ್ ಸಮೀಕ್ಷೆಗಳಿಂದ ನೈಜ-ಸಮಯದ ಡೇಟಾವನ್ನು ಸೆರೆಹಿಡಿಯಲಿದೆ. ಆರೋಗ್ಯ ಇಲಾಖೆ ಮತ್ತು ಪಾಲಿಕೆ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಯಂತ್ರಿಸಲಿದೆ. ಡ್ಯಾಶ್‌ಬೋರ್ಡ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳೆರಡೂ ಡೆಂಗ್ಯೂ ಮೇಲೆ ಕೇಂದ್ರೀಕೃತವಾಗಿವೆ ಮತ್ತು ಭವಿಷ್ಯದಲ್ಲಿ ಹೆಚ್ಚುವರಿ ರೋಗಗಳಿಗೆ ವಿಸ್ತರಿಸುವ ಗುರಿಯನ್ನು ಕೂಡ ಹೊಂದಲಾಗಿದೆ ಎಂದು ದಿನೇಶ್​ ಗುಂಡೂರಾವ್​ ಹೇಳಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ. ರಂದೀಪ್, ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕ್ ಚಂದ್ರ, ಎನ್.ಹೆಚ್.ಎಂ ನ ಅಭಿಯಾನ ವೀಕ್ಷಕ ನವೀನ್ ಭಟ್, ಆರ್ಟ್ ಪಾರ್ಕ್ ನ ಎಕ್ಸಿಕ್ಯೂಟಿವ್ ನಿರ್ದೇಶಕ ಭರದ್ವಾಜ್ ಅಮೃತೂರ್, ಆರ್ಟ್ ಪಾರ್ಕ್ ನ ಸಿಇಒ ರಘು ಧರ್ಮರಾಜು, ಆರ್ಟ್ ಪಾರ್ಕ್ ಆರೋಗ್ಯ ನಿರ್ದೇಶಕ ಡಾ. ಭಾಸ್ಕರ್ ರಾಜ್ ಕುಮಾರ್, ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರೋಗ ಕಣ್ಗಾವಲು ಡ್ಯಾಶ್‌ಬೋರ್ಡ್ ಬಗ್ಗೆ :ನೀತಿ ನಿರೂಪಕರು ಮತ್ತು ಸಾರ್ವಜನಿಕ ಆರೋಗ್ಯ ನಿರ್ಧಾರ-ನಿರ್ಮಾಪಕರಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಮೇಲ್ವಿಚಾರಣೆಗಾಗಿ, ಸಲಹೆಗಳನ್ನು ತಿಳಿಸಲಿದೆ ಮತ್ತು ಡೇಟಾ-ಚಾಲಿತ ನೀತಿ ರಚನೆಯನ್ನು ಸಕ್ರಿಯಗೊಳಿಸಲಿದೆ. ದಿನನಿತ್ಯದ ನಿರ್ವಹಣೆ, ಮೇಲ್ವಿಚಾರಣೆ, ಮಧ್ಯಸ್ಥಿಕೆಗಳು ಮತ್ತು ಸಂಪನ್ಮೂಲ ಯೋಜನೆಗಾಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳು, ಕಣ್ಗಾವಲು ಅಧಿಕಾರಿಗಳು ಮತ್ತು ಕಾರ್ಯಕ್ರಮ ಅಧಿಕಾರಿಗಳಿಗೆ ಸಹಕಾರಿಯಾಗಲಿದೆ. ಇದರಿಂದ ಆರೋಗ್ಯ ಮತ್ತು ವೈದ್ಯಕೀಯ ಅಧಿಕಾರಿಗಳು ಗ್ರಾಮ ಅಥವಾ ವಾರ್ಡ್ ಮಟ್ಟದಲ್ಲಿ ನೈಜ-ಸಮಯದ ರೋಗದ ಮೇಲ್ವಿಚಾರಣೆ, ಪರೀಕ್ಷೆ, ಸಮೀಕ್ಷೆಗಳು, ಮೂಲ ಕಡಿತ ಚಟುವಟಿಕೆಗಳಂತಹ ಕ್ರಮಗಳನ್ನು ಯೋಜಿಸಲಿದ್ದಾರೆ.

ಪ್ರಿಸಂ- ಹೆಚ್ ಮೊಬೈಲ್ ಅಪ್ಲಿಕೇಶನ್ ಬಗ್ಗೆ :ಸಮೀಕ್ಷೆ-ಸಂಬಂಧಿತ ಚಟುವಟಿಕೆಗಳನ್ನು ಸುವ್ಯವಸ್ಥಿತಗೊಳಿಸಲು ಆಶಾ ಕಾರ್ಯಕರ್ತೆಯರಿಗೆ (ಜ್ವರ, ಲಾರ್ವಾ, ಮನೆ-ಮನೆ ಆರೋಗ್ಯ) ಸಮೀಕ್ಷೆ ಒದಗಿಸಲಿದೆ. ಸೊಳ್ಳೆ ನಿಯಂತ್ರಣ ಚಟುವಟಿಕೆಗಳನ್ನು ಸುವ್ಯವಸ್ಥಿತಗೊಳಿಸುವ ಚಟುವಟಿಕೆ ಮತ್ತು ಪರಿಶೀಲನೆಗಾಗಿ ವೈದ್ಯಕೀಯ ಅಧಿಕಾರಿಗಳಿಗೆ ಸಹಾಯವಾಗಲಿದೆ.

ಇದನ್ನೂ ಓದಿ :Aditya-L1 ಬಗ್ಗೆ ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕರಿಂದ ಸಂಪೂರ್ಣ ಮಾಹಿತಿ

Last Updated : Sep 8, 2023, 4:51 PM IST

ABOUT THE AUTHOR

...view details