ಕರ್ನಾಟಕ

karnataka

ETV Bharat / state

ಗಡಿ ವಿವಾದ ಸಭೆ ಬಳಿಕ ಸಂಪುಟ ವಿಸ್ತರಣೆ ಕುರಿತು ಅಮಿತ್ ಶಾ ಜೊತೆ ಚರ್ಚೆ: ಸಿಎಂ ಬೊಮ್ಮಾಯಿ - ETV Bharath Kannada

ಸಂಪುಟ ವಿಸ್ತರಣೆಯ ಬಗ್ಗೆಯೂ ಅಮಿತ್​ ಶಾ ಅವರಲ್ಲಿ ಚರ್ಚಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

discussion-with-amit-shah-on-cabinet-expansion-after-border-dispute
ಸಿಎಂ ಬೊಮ್ಮಾಯಿ

By

Published : Dec 14, 2022, 11:28 AM IST

Updated : Dec 14, 2022, 12:14 PM IST

ಗಡಿ ವಿವಾದ ಸಭೆ ಬಳಿಕ ಸಂಪುಟ ವಿಸ್ತರಣೆ ಕುರಿತು ಅಮಿತ್ ಶಾ ಜೊತೆ ಚರ್ಚೆ

ಬೆಂಗಳೂರು: ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ಗಡಿ ವಿವಾದ ವಿಷಯದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ ಕರೆದಿದ್ದು ಸಭೆಯಲ್ಲಿ ಪಾಲ್ಗೊಳ್ಳಲು ಇಂದು ನವದೆಹಲಿಗೆ ತೆರಳುತ್ತಿದ್ದೇನೆ. ಗಡಿ ವಿಷಯದ ಜೊತೆಗೆ ಅವಕಾಶ ಸಿಕ್ಕರೆ ಸಚಿವ ಸಂಪುಟ ವಿಸ್ತರಣೆ ಕುರಿತೂ ಚರ್ಚೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ವಿಚಾರದ ಬಗ್ಗೆ ಅಮಿತ್ ಶಾ ಸಭೆ ಕರೆದಿದಾರೆ. ಗಡಿ ವಿಚಾರದಲ್ಲಿ ನಮ್ಮ ನಿಲುವನ್ನು ಅಮಿತ್ ಶಾ ಅವರಿಗೆ ಸ್ಪಷ್ಟಪಡಿಸುತ್ತೇನೆ. ಮಹಾರಾಷ್ಟ್ರ ಆರು ದಶಕಗಳಿಂದ ಗಡಿ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ನಾವು ಹಾಗಲ್ಲ, ನಮಗೆ ನಮ್ಮ ನೆಲ ಜಲ ಗಡಿ ವಿಚಾರ ಮುಖ್ಯ, ಎಲ್ಲವನ್ನೂ ಅಮಿತ್ ಶಾ ಅವರಿಗೆ ವಿವರಿಸಲಾಗುತ್ತದೆ ಎಂದರು.

ಗಡಿ ವಿಚಾರದ ಬಗ್ಗೆ ಸಭೆ ಬಳಿಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡುತ್ತೇನೆ ನಾನು ಎಲ್ಲ ಸಿದ್ಧತೆಗಳ ಜತೆ ಹೋಗುತ್ತಿದ್ದೇನೆ, ಅವಕಾಶ ಸಿಕ್ಕರೆ ಸಂಪುಟ ಬಗ್ಗೆ ಅಮಿತ್ ಶಾ ಅವರ ಜತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.

ಹುಬ್ಬಳ್ಳಿಯಲ್ಲಿ ನಮ್ಮ ಕ್ಲಿನಿಕ್ ಉದ್ಘಾಟನೆ ಮಾಡುತ್ತಿದ್ದೇನೆ. ಆರೋಗ್ಯ ಕ್ಷೇತ್ರಕ್ಕೆ ನಾವು ಹೆಚ್ಚಿನ ಮಹತ್ವ ಕೊಟ್ಟಿದ್ದೇವೆ. ಪ್ರಾಥಮಿಕ ಹಂತದಲ್ಲೇ ಉತ್ತಮ ಚಿಕಿತ್ಸೆ ಸಿಗುವಂತೆ ಮಾಡಿದ್ದೇವೆ. ಈ ಬಜೆಟ್​ನಲ್ಲಿ ನಮ್ಮ ಕ್ಲಿನಿಕ್​ಗೆ ಹೆಚ್ಚು ಒತ್ತು ನೀಡುತ್ತೇನೆ ಎಂದು ಸಿಎಂ ಹೇಳಿದರು.

ಅವರ ಆಡಳಿತದ ಬಗ್ಗೆ ವಿಮರ್ಶಿಸಿಕೊಳ್ಳಲಿ:ಎಸ್​ಸಿ, ಎಸ್​ಟಿ ಒಳಮೀಸಲಾತಿ ಉಪಸಮಿತಿ ಮಾಡಿರೋದು ಕಣ್ಣೊರೆಸುವ ತಂತ್ರ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ ಆದರೆ ಸಿದ್ದರಾಮಯ್ಯ ಐದು ವರ್ಷ ಅಧಿಕಾರ ನಡೆಸಿದರೂ ವರದಿಯನ್ನು ತಿರುಗಿ ನೋಡಿರಲಿಲ್ಲ. ಆ ರಿಪೋರ್ಟ್​ನ್ನು ತೆಗೆದು ನೋಡುವ ಧೈರ್ಯವಿರಲಿಲ್ಲ, ಇದೇ ಸಮುದಾಯ ಹುಬ್ಬಳ್ಳಿಯಲ್ಲಿ ಸಮಾವೇಶ ಮಾಡಿದಾಗ ದೀಪ ಹಚ್ಚಿ ಉದ್ಘಾಟನಾ ಭಾಷಣ ಮಾಡಿ ಬಂದವರ ಬಗ್ಗೆ ನಾವು ಮಾತನಾಡಲ್ಲ. ನಮ್ಮ ಬದ್ಧತೆ ಏನು ಅಂತ ಗೊತ್ತಿದೆ. ಇಂತಹ ಪ್ರಮುಖ ವಿಚಾರಗಳಲ್ಲಿ ದಿಟ್ಟತನ ತೆಗೆದುಕೊಂಡಿದ್ದೇವೆ. ನೀವು ಇನ್ನೊಬ್ಬರ ಬಗ್ಗೆ ಮಾತಾಡೋ ಮುಂಚೆ ತಾವು ಯಾವ ರೀತಿ ನಡೆದುಕೊಂಡಿದ್ದಿರಾ ಅಂತಾ ಹಿಂತುರುಗಿ ನೋಡಿದರೆ ಒಳ್ಳೆಯದು ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ:ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಇಂದು ಸಂಜೆ ಅಮಿತ್ ನೇತೃತ್ವದಲ್ಲಿ ಮಹತ್ವದ ಸಭೆ

Last Updated : Dec 14, 2022, 12:14 PM IST

ABOUT THE AUTHOR

...view details