ಕರ್ನಾಟಕ

karnataka

ETV Bharat / state

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ವಿಧಾನಸಭೆಯಲ್ಲಿ ಕಾಂಗ್ರೆಸ್-ಬಿಜೆಪಿ ವಾಕ್ಸಮರ - discuss about psi recruitment exam scam in session

ವಿಧಾನಸಭೆಯಲ್ಲಿ ಪಿಎಸ್​ಐ ನೇಮಕಾತಿ ಪರೀಕ್ಷೆ ಹಗರಣದ ಮೇಲಿನ ಚರ್ಚೆ ಆಡಳಿತಾರೂಢ ಬಿಜೆಪಿ ಹಾಗು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ನಡುವಿನ ಗದ್ದಲದಲ್ಲೇ ಅಂತ್ಯಗೊಂಡಿತು.

psi recruitment exam scam
ಕಾಂಗ್ರೆಸ್- ಬಿಜೆಪಿ ಸದಸ್ಯರ ವಾಕ್ಸಮರ

By

Published : Sep 21, 2022, 8:46 AM IST

ಬೆಂಗಳೂರು: ಪಿಎಸ್​ಐ ನೇಮಕಾತಿ ಹಗರಣ ಸಂಬಂಧ ಕಾಂಗ್ರೆಸ್ ಸದಸ್ಯರು ವಿಧಾನಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಿದರೆ, ಆಡಳಿತಾರೂಢ ಬಿಜೆಪಿ ಸದಸ್ಯರು ಕಾಂಗ್ರೆಸ್ ಸರ್ಕಾರದ ಅಕ್ರಮಗಳ ಭಿತ್ತಿ ಪತ್ರ ಪ್ರದರ್ಶಿಸಿ ಎದುರೇಟು ನೀಡಿದರು. ಈ ಮೂಲಕ ಪರಸ್ಪರ ಧಿಕ್ಕಾರ, ಘೋಷಣೆಗಳೊಂದಿಗೆ ಪಿಎಸ್​ಐ ನೇಮಕಾತಿ ಪರೀಕ್ಷೆ ಅಕ್ರಮದ ಮೇಲಿನ ಚರ್ಚೆ ಅಂತ್ಯಗೊಂಡಿತು.

'ಪ್ರಾಮಾಣಿಕ ತನಿಖೆ ನಡೆಸುತ್ತೇವೆ': ಗದ್ದಲದ ಮಧ್ಯೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಪಿಎಸ್ಐ ಕೇಸ್​ನಲ್ಲಿ ಪಾರದರ್ಶಕ ತನಿಖೆ ನಡೆಯುತ್ತಿದೆ. ಸರ್ಕಾರ ಸಿಐಡಿ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟಿದೆ. ಸರ್ಕಾರ ಸಂಪೂರ್ಣ ತೆರೆದ ಮನಸ್ಸಿನಲ್ಲಿದೆ. ತನಿಖೆಯನ್ನು ಮುಚ್ಚಿಡಲು ಯತ್ನಿಸುತ್ತಿಲ್ಲ. ಯಾರದ್ದೂ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಪಿಎಸ್​ಐ ನೇಮಕಾತಿ ಮರು ಪರೀಕ್ಷೆ ಆದೇಶ ಹಿಂಪಡೆಯಬೇಕೆಂದು ಒತ್ತಾಯ: ಅಭ್ಯರ್ಥಿಗಳಿಂದ ಅಹೋರಾತ್ರಿ‌ ಧರಣಿ

ಪ್ರಿಯಾಂಕ್ ಖರ್ಗೆ ಯಾವುದೇ ದಾಖಲೆ ಕೊಟ್ಟಿಲ್ಲ. ಕಾಂಗ್ರೆಸ್ ಕಾಲದಲ್ಲಿ ಹಲವು ಹಗರಣಗಳು ಆಗಿವೆ. 2016-17 ರಲ್ಲಿ ಕಾಂಗ್ರೆಸ್ ಅಧಿಕಾರವಧಿಯಲ್ಲೂ ಪಿಎಸ್ಐ ಹಗರಣ ನಡೆದಿತ್ತು. ಆದರೆ, ಕಾಂಗ್ರೆಸ್​ನವರು ಎಡಿಜಿಪಿಯನ್ನು ಬಂಧಿಸಿರಲಿಲ್ಲ. ನಮ್ಮ ಸರ್ಕಾರ, ಆರೋಪ ಬಂದ ಕೂಡಲೇ ಕ್ರಮ ಕೈಗೊಂಡಿದೆ. ಪ್ರಾಮಾಣಿಕ ತನಿಖೆಯನ್ನು ಮುಂದುವರೆಸುತ್ತೇವೆ ಎಂದರು.

ಸಚಿವ ಆರ್.ಅಶೋಕ್ ಮಾತನಾಡಿ, ನಾವೇ ಇದನ್ನು ಹುಡುಕಿ ತನಿಖೆ ಮಾಡಿದ್ದೇವೆ. 96 ಜನರನ್ನು ಬಂಧಿಸಿದ್ದೇವೆ. ಕಾಂಗ್ರೆಸ್​‌ನವರಾಗಿದ್ದರೆ ಮುಚ್ಚಿ ಹಾಕುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಪಿಎಸ್​​ಐ ನೇಮಕಾತಿ ಪ್ರಕರಣ.. ಆರೋಪಿ ನಿವಾಸದ ಬಳಿ ತಮಟೆ ಬಾರಿಸಿ ನೋಟಿಸ್ ಅಂಟಿಸಿದ ಸಿಐಡಿ

ಬಳಿಕ ಇದಕ್ಕೆ ಧ್ವನಿಗೂಡಿಸಿದ ಸಚಿವ ಡಾ.ಕೆ.ಸುಧಾಕರ್, ಕಾಂಗ್ರೆಸ್ ಅವಧಿಯಲ್ಲಿ ಯಾಕೆ ಲೋಕಾಯುಕ್ತ ಮುಚ್ಚಿದರು?. ಅವರ ಹಗರಣ ಹೊರಗೆ ಬಂತು. ಅದಕ್ಕಾಗಿ ಎಸಿಬಿ ರಚನೆ ಮಾಡಿದರು. ಕಾಂಗ್ರೆಸ್​ಗೆ ನೈತಿಕತೆ ಉಳಿದಿಲ್ಲ. ಅವರು ಹಗರಣಗಳ ಸರಮಾಲೆ‌ ಮಾಡಿದ್ದಾರೆ. ನಮ್ಮ ಸರ್ಕಾರ ಇದ್ದಿದ್ದರಿಂದ ಪಾರದರ್ಶಕ ತನಿಖೆ ಮಾಡಿದ್ದೇವೆ. ಯಾವ ಪಕ್ಷದವರೇ ಆಗಲಿ ರಾಜಿ ಆಗದೆ ತನಿಖೆ ನಡೆಸುತ್ತೇವೆ. ಯಾರ ಮುಲಾಜಿಗೂ ಬಗ್ಗುವುದಿಲ್ಲ. ಅನ್ಯಾಯ ಆಗಲು ನಮ್ಮ ಸರ್ಕಾರ ಬಿಟ್ಟಿಲ್ಲ. ರಾಜಕೀಯ ಲಾಭಕ್ಕೆ ಹೋರಾಟ ಮಾಡುತ್ತಿದ್ದಾರೆ. ಅವರ ಹೋರಾಟದಲ್ಲಿ ಸತ್ಯ ಇಲ್ಲ, ನ್ಯಾಯ ಇಲ್ಲ. ಉತ್ತರ ಕೇಳುವ ಧೈರ್ಯ ತೋರಿಸಿಲ್ಲ ಎಂದು ಟೀಕಿಸಿದರು.

'ವಿಧಾನಸೌಧ ವ್ಯಾಪಾರ ಸೌಧ ಆಗಿದೆ': ಇದಕ್ಕೂ ಮುನ್ನ ಮಾತನಾಡಿದ ಪ್ರಿಯಾಂಕ್ ಖರ್ಗೆ, ಪಿಎಸ್ಐ ನೇಮಕಾತಿ ಪ್ರಕರಣದ ತನಿಖೆ ಗುಲ್ಬರ್ಗದ ಜ್ಞಾನಜ್ಯೋತಿ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಮಾತ್ರ ಸೀಮಿತವಾಗಿ ನಡೆಯುತ್ತಿದೆ. ವಿಧಾನಸೌಧ ವ್ಯಾಪಾರ ಸೌಧ ಆಗಿದೆ. ತನಿಖೆಯ ವ್ಯಾಪ್ತಿ ವಿಸ್ತರಿಸಿ ಎಂದು ಸರ್ಕಾರವನ್ನು ಆಗ್ರಹಿಸಿದರು.

ಇದನ್ನೂ ಓದಿ:ಆಮೆಗತಿಯಲ್ಲಿ ಪೊಲೀಸ್​ ನೇಮಕಾತಿ.. ವಯೋಮಿತಿ ಮೀರಿದ ಅಭ್ಯರ್ಥಿಗಳ ಕನಸು ನುಚ್ಚುನೂರು

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಚಿವ ಮಾಧುಸ್ವಾಮಿ, ಪ್ರಿಯಾಂಕ್ ಖರ್ಗೆ ಬಳಿ ಅಕ್ರಮದ ಆಡಿಯೋ ಕ್ಲಿಪ್ ಇತ್ತು. ಹೀಗಿದ್ರೂ ತನಿಖೆಗೆ ಕೊಡಲಿಲ್ಲ. ಈ ವಿಡಿಯೋ ಕ್ಲಿಪ್ ಅವರ ಬಳಿ ಹೇಗೆ ಬಂತು?, ಮೂಲ ಯಾವುದು?. ತನಿಖೆಗೆ ಕೊಡಬಹುದಿತ್ತಲ್ಲ. ಬಳಿಕ ಅವರು ಪೇಪರ್​ನಲ್ಲಿ ಬಂದಿತ್ತು ಅಂತ ಯಾಕೆ ಸುಳ್ಳು ಹೇಳಿದ್ರು?. ಸಾಕ್ಷಿ ಇದ್ದರೂ ಕೊಟ್ಟಿಲ್ಲ ಅಂದ್ರೆ ನೀವೇ ವ್ಯಾಪಾರ ಮಾಡ್ತಿದ್ರಿ ಅಂತರ್ಥ ಎಂದು ಗರಂ ಆದರು.

ಸಚಿವ ಮಾಧುಸ್ವಾಮಿ ಮತ್ತು ಪ್ರಿಯಾಂಕ್ ಖರ್ಗೆ ನಡುವೆ ಏರು ಧ್ವನಿಯಲ್ಲಿ ಸದನದಲ್ಲಿ ಜಟಾಪಟಿ ಉಂಟಾಯಿತು. ಬಳಿಕ ಎರಡೂ ಪಕ್ಷದ ಸದಸ್ಯರು ಪರಸ್ಪರ ಭಿತ್ತಿಪತ್ರ ಹಿಡಿದು, ಧಿಕ್ಕಾರ ಕೂಗಿದರು.

ABOUT THE AUTHOR

...view details